ಮೈಸೂರು: ನೀವು ಮೈಸೂರು ಅರಮನೆ (Mysuru Palace) ನೋಡಲು ಬಯಸುವವರಾದರೆ ಇದೀಗ ಇನ್ನಷ್ಟು ಹೆಚ್ಚಿನ ಪ್ರವೇಶ ದರ (Mysuru Palace ticket price hike) ತೆರಬೇಕು. ದಸರಾ (Mysuru Dasara 2024) ಮುಕ್ತಾಯ ಆದ ಕೂಡಲೇ ಅರಮನೆಯ ಪ್ರವೇಶ ಶುಲ್ಕವನ್ನು ಪರಿಷ್ಕರಿಸಿ, ಅರಮನೆ ಆಡಳಿತ ಮಂಡಳಿ (Mysore news) ಆದೇಶ ಹೊರಡಿಸಿದೆ.
ಇಂದಿನಿಂದಲೇ ಮೈಸೂರು ಅರಮನೆ ಪ್ರವೇಶ ಶುಲ್ಕ ಹೆಚ್ಚಳದ ಆದೇಶ ಜಾರಿಗೆ ಬರಲಿದೆ. ಈ ಸಂಬಂಧ ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಆದೇಶ ಹೊರಡಿಸಿದ್ದಾರೆ. ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಣೆಗಾಗಿ ದಿನನಿತ್ಯ ದೇಶ, ವಿದೇಶಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಅರಮನೆ ಆಡಳಿತ ಮಂಡಳಿ ಸಭೆಯ ತೀರ್ಮಾನದಂತೆ ದಿನಾಂಕ 25-10-2024ರಿಂದ ಜಾರಿಗೆ ಬರುವಂತೆ ಅರಮನೆ ಪ್ರವೇಶ ಶುಲ್ಕವನ್ನು ಪರಿಷ್ಕರಿಸಿರುವುದಾಗಿ ತಿಳಿಸಿದೆ.
ನೂತನ ಮೈಸೂರು ಅರಮನೆ ಪ್ರವೇಶದ ಪರಿಷ್ಕೃತ ದರಪಟ್ಟಿ ಹೀಗಿದೆ:
ಭಾರತೀಯ ವಯಸ್ಕರಿಗೆ ರೂ.100 ಇದ್ದ ಶುಲ್ಕವನ್ನು ರೂ.120ಕ್ಕೆ ಏರಿಕೆ ಮಾಡಲಾಗಿದೆ.
10ರಿಂದ 18 ವರ್ಷದೊಳಗಿನ ಮಕ್ಕಳಿಗೆ ರೂ.50 ಇದ್ದ ಶುಲ್ಕವನ್ನು ರೂ.70ಕ್ಕೆ ಹೆಚ್ಚಳ
ಶೈಕ್ಷಣಿಕ ಪ್ರವಾಸ ಕೈಗೊಳ್ಳುವ ಶಾಲಾ, ಕಾಲೇಜು ವಿದ್ಯಾ ರ್ಥಿಗಳಿಗೆ ರೂ.30ರ ದರವನ್ನು ರೂ.50ಕ್ಕೆ ಏರಿಕೆ
ವಿದೇಶಿಗರಿಗೆ ರೂ.100 ಇದ್ದ ಶುಲ್ಕವನ್ನು ರೂ.1000ಕ್ಕೆ ಹೆಚ್ಚಳ ಮಾಡಲಾಗಿದೆ.
10 ವರ್ಷದೊಳಗಿನ ಎಲ್ಲಾ ಮಕ್ಕ ಳಿಗೆ ಮೈಸೂರು ಅರಮನೆ ಪ್ರವೇಶ ಉಚಿತವಾಗಿದೆ.
ದಿನಾಂಕ 25-10-2024ರಿಂದ ಈ ಪರಿಷ್ಕೃ ತ ಪ್ರವೇಶ ಶುಲ್ಕ ದ ದರಗಳು ಜಾರಿಗೆ ಬರಲಿವೆ.
ಅಲ್ಲದೆ ಇಂದಿನಿಂದ ಅರಮನೆ ಒಳಾವರಣದಲ್ಲಿ ಬರುವ ಚಪ್ಪಲಿ ಸ್ಟಾಂಡ್, ಲಗ್ಗೇ ಜ್ ಕೊಠಡಿ ಮತ್ತು ಶೌಚಾಲಯಗಳನ್ನು ಪ್ರವಾಸಿಗರಿಗೆ ಉಚಿತಗೊಳಿಸಲಾಗಿದೆ.
ಇದನ್ನೂ ಓದಿ: Mysore Sandal: ಮೈಸೂರು ಸ್ಯಾಂಡಲ್ ಉತ್ಪನ್ನ ಗಳು ಕನ್ನಡಿಗರ ಜೀವನಾಡಿ: ಶ್ರೀ ಸಿದ್ದಲಿಂಗ ಸ್ವಾಮೀಜಿ