ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾ ವೇದಿಕೆಯು ಸೆಪ್ಟೆಂಬರ್ 28ರಂದು ಲಂಡನ್ ನಗರದಲ್ಲಿ ನಾಡಪ್ರಭು ಕೆಂಪೇಗೌಡರ (Nadaprabhu Kempegowda) 3ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸಂಭ್ರಮ ಮತ್ತು ಕನ್ನಡೋತ್ಸವವನ್ನು ಆಯೋಜಿಸಲು ಸಜ್ಜಾಗಿದೆ. ಈಗಾಗಲೇ ದುಬೈ (Dubai) ಮತ್ತು ಸಿಂಗಾಪುರ್ (Singapore) ನಗರಗಳಲ್ಲಿ ಈ ಉತ್ಸವವನ್ನು ನಡೆಸಲಾಗಿದ್ದು, ಮೂರನೇ ಉತ್ಸವವನ್ನು ಈ ಬಾರಿ ಮಹಾನಗರಿ ಲಂಡನ್ನಲ್ಲಿ (London) ಆಚರಿಸಲು ವೇದಿಕೆಯು ಸಿದ್ಧಗೊಂಡಿದೆ.
ಈ ಸುದ್ದಿಯನ್ನೂ ಓದಿ | Sandalwood News: ಹರ್ಷಿಣಿ ಸಿನಿಮಾಸ್ ಸಂಸ್ಥೆಗೆ ಮಾಜಿ ಪ್ರಧಾನಿ ದೇವೇಗೌಡರಿಂದ ಚಾಲನೆ
ಕಾರ್ಯಕ್ರಮವು ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷರಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ನಾಡೋಜ ಡಾ. ಮಹೇಶ್ ಜೋಶಿ ಹಾಗೂ ಕಾರ್ಯಕ್ರಮದ ಉದ್ಘಾಟಕರಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ್ತು ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.
ಈ ಸುದ್ದಿಯನ್ನೂ ಓದಿ | Bengaluru News: ಅರುಣ್ ಯೋಗಿರಾಜ್ ಸೇರಿ ನಾಲ್ವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ
ಈ ಉತ್ಸವದಲ್ಲಿ ಮಾತುಕತೆಯ ಜತೆಗೆ ಮನರಂಜನೆಯ ಮಹಾ ರಸದೌತಣವನ್ನೇ ಏರ್ಪಡಿಸಲಾಗುತ್ತಿದೆ. ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ವಿದೇಶಿ ನೆಲದಲ್ಲಿ ಪ್ರಸ್ತುತಪಡಿಸಲು ವೇದಿಕೆಯು ಮುಂದಾಗಿದೆ. ಈ ಮೂಲಕ ನಾಡು, ನುಡಿಯ ಅಭಿಮಾನವನ್ನು ಸದಾ ಜಾಗೃತಗೊಳಿಸುವ ಈ ರೀತಿಯ ಕಾರ್ಯಗಳು ವೇದಿಕೆಯಿಂದ ನಿರಂತರವಾಗಿ ಜಾರಿಯಲ್ಲಿರಲಿವೆ ಎಂದು ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 6364409651, 6364466240 ಗೆ ಸಂಪರ್ಕಿಸಬಹುದಾಗಿದೆ ಎಂದು ವಿಶ್ವ ಒಕ್ಕಲಿಗರ ಮಹಾ ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.