Saturday, 26th October 2024

ನಕ್ಕುಂದ ಗ್ರಾಪಂ: ಅಧ್ಯಕ್ಷರ ಅವಿಶ್ವಾಸ ಹುಲಿಗೆಪ್ಪ ವಿರುದ್ಧ 9 ಸದಸ್ಯ ಬಲ

ಮಾನ್ವಿ: ತಾಲ್ಲೂಕಿನ ನಕ್ಕುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಾಯಿತು.

ಗುರುವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಚುನಾವಣೆ ಅಧಿಕಾರಿಯಾದ ಸಹಾಯಕ ಆಯುಕ್ತರ ಮುಂದೆ ಅಧ್ಯಕ್ಷ ಹುಲಿಗೆಪ್ಪ ವಿರುದ್ಧ 9 ಸದಸ್ಯರು ಅವಿಶ್ವಾಸ ಮಂಡನೆ ಮಾಡಿದರು . ಒಟ್ಟು 11 ಸದಸ್ಯರೊಂದಿದ ಗ್ರಾಮ ಪಂಚಾಯಿತಿನಲ್ಲಿ 9ಸದಸ್ಯರು ವಿರುದ್ಧವಾಗಿದ್ದು ಇನ್ನುಳಿದ ಇಬ್ಬರು ಗೈರಾಗಿದ್ದರು. ಇದರಿಂದ ಆಗಿ ಹುಲಿಗೆಪ್ಪ ಅಧಿಕಾರ ಕಳೆದುಕೊಂಡಿದ್ದಾರೆ. ಮುಂದಿನ ಅಧ್ಯಕ್ಷರ ಆಯ್ಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಚುನಾವಣೆ ದಿನಾಂಕವನ್ನು ಪ್ರಕಟಿಸಲಿದ್ದರೆ

ಈ ಸಂದರ್ಭದಲ್ಲಿ 9 ಜನ ಗ್ರಾಮ ಪಂಚಾಯಿತಿ ಸದಸ್ಯರು, ರಾಜಶೇಖರ ದಾದ್ಮಿ, ವೀರೇಶ ಅಗಸಿಮುಂದಿನ, ಯಂಕಪ್ಪ ಜಡೇ ಬಸವರಾಜ ನಾಯಕ, ಹನುಮಯ್ಯ ನಾಯಕ ತಿಮ್ಮಯ್ಯ ಕರೇಗುಡ್ಡ, ಚನ್ನಬಸವ ಕರೇಗುಡ್ಡ, ಬಾಲಯ್ಯ ಕರೇಗುಡ್ಡ ಮಾರೆಪ್ಪ ಚಲುವಾದಿ ಇದ್ದರು.