Sunday, 15th December 2024

Namma Metro: ನಮ್ಮ ಮೆಟ್ರೋದಲ್ಲಿ ಕೆಲಸ ಖಾಲಿ ಇದೆ! 2.06 ಲಕ್ಷ ರೂ. ಸಂಬಳ

namma metro

ಬೆಂಗಳೂರು: ನಮ್ಮ ಮೆಟ್ರೋ (Namma metro) ಸಂಸ್ಥೆ ಖಾಲಿ ಇರುವ ಹುದ್ದೆಗಳಿಗೆ (jobs) ನೇಮಕಾತಿ (hiring) ಆರಂಭಿಸಿದೆ. ಜನರಲ್ ಮ್ಯಾನೇಜರ್, ಸಿಗ್ನಲ್ ಮ್ಯಾನೇಜರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಬಗ್ಗೆ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಸೆಪ್ಟೆಂಬರ್ 25 ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ತಿಂಗಳಿಗೆ 2,06,250 ರೂಪಾಯಿ ಸಂಬಳ ಪಡೆಯಲಿದ್ದಾರೆ.

5 ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಜನರಲ್ ಮ್ಯಾನೇಜರ್( ಕಾಂಟ್ರಾಕ್ಟ್/ ಸ್ಟೋರ್), ಜನರಲ್ ಮ್ಯಾನೇಜರ್ (ಟ್ರಾಕ್ಷನ್), ಜನರಲ್ ಮ್ಯಾನೇಜರ್(ಪಿ ವೇ) ಹಾಗೂ ಜನರಲ್ ಮ್ಯಾನೇಜರ್ (ಸಿಗ್ನಲಿಂಗ್) ಹುದ್ದೆಗಳಿಗ ನೇಮಕಾತಿ ನಡೆಯಲಿದೆ. ಗರಿಷ್ಠ ವಯೋಮತಿ ಕಾಂಟ್ರಾಕ್ಟ್ ಹುದ್ದೆಗೆ 58 ವರ್ಷ ಹಾಗೂ ಡೆಪ್ಯೂಟೇಶನ್‌ಗೆ 55 ವರ್ಷ ನಿಗದಿಪಡಿಸಲಾಗಿದೆ.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬರೋಬ್ಬರಿ 2 ಲಕ್ಷ ರೂಪಾಯಿ ತಿಂಗಳ ವೇತನ ಸಿಗಲಿದೆ. ಇನ್ನು ಅರ್ಹತೆ ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್, ಮೆಕಾನಿಕಲ್, ಸಿವಿಲ್ ಎಂಜಿನೀಯರಿಂಗ್ ಪದವಿ, ಕಂಪ್ಯೂಟರ್ ಸೈನ್ಸ್, ಟೆಲಿಕಮ್ಯೂನಿಕೇಶನ್ ಪದವಿಯಲ್ಲಿ ಯಾವುದಾದರು ಪದವಿ ಹೊಂದಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳು ಆರಂಭಿಕ ಮೂರು ವರ್ಷ ಕಾಂಟ್ರಾಕ್ಟ್‌ನಲ್ಲಿ ಕೆಲಸ ಮಾಡಬೇಕು. ಬಳಿಕ ಅವರ ಪರ್ಫಾಮೆನ್ಸ್ ಆಧಾರದಲ್ಲಿ ಮುಂದಿನ ನಿರ್ಧಾರವನ್ನು ನಮ್ಮ ಮೆಟ್ರೋ ಸಂಸ್ಥೆ ತೆಗೆದುಕೊಳ್ಳಲಿದೆ. ಆನ್‌ಲೈನ್ ಅರ್ಜಿ ಸಲ್ಲಿಸಿದ ವರ ಅಪ್ಲಿಕೇಶನ್ ಹಾಗೂ ದಾಖಲೆ ಪರೀಶಿಲಿಸಿ ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಹೀಗೆ ಶಾರ್ಟ್ ಲಿಸ್ಟ್ ಮಾಡಿದವರನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುತ್ತದೆ.

ವಿದ್ಯಾರ್ಹತೆ ಜೊತೆಗೆ ಕನ್ನಡ ಭಾಷೆಗೂ ಆದ್ಯತೆ ನೀಡಲಾಗಿದೆ. ರಾಜಕೀಯ ಅಥವಾ ಯಾವುದೇ ಮೂಲಗಳಿಂದ ನೇಮಕಾತಿಗೆ ವಶೀಲಿ ಮಾಡಿಸಿದರೆ ಅಂತಹ ಅಭ್ಯರ್ಥಿಗಳ ಅರ್ಜಿಯನ್ನು ಅನರ್ಹ ಮಾಡಲಾಗುತ್ತದೆ. ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಸೂಕ್ತ ಕ್ಷೇತ್ರದಲ್ಲಿ ಅನುಭವ ಹಾಗೂ ಪ್ರತಿಭಾನ್ವಿತ ಅಭ್ಯರ್ಥಿಗಳನ್ನು ನಮ್ಮ ಮೆಟ್ರೋ ಆಯ್ಕೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಐದು ಹುದ್ದೆಗಳಿಗೆ ಸಂದರ್ಶನ ನಡೆಯಲಿದೆ. ಆಯಾ ಹುದ್ದೆಗಳಿಗೆ ವಿದ್ಯಾರ್ಹತೆ, ಅನುಭವ, ಪ್ರತಿಭೆಯ ಆಧಾರದಲ್ಲಿ ಆಯ್ಕೆ ನಡೆಯಲಿದೆ. ನಮ್ಮ ಮೆಟ್ರೋ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಅಸಕ್ತರು ಹಾಗೂ ಅರ್ಹರು ಸೆಪ್ಟೆಂಬರ್ 25ರೊಳಗೆ ಅರ್ಜಿ ಸಲ್ಲಿಕೆ ಮಾಡಬಹುದು.