Saturday, 14th December 2024

ಮನೆಗೊಂದು ಮರ ಊರಿಗೊಂದು ವನ ಪ್ರಕೃತಿಗೆ ಸೊಬಗು ನೀಡಿ: ಕುಸುಮ ಜಗದೀಶ್

ಹರಪನಹಳ್ಳಿ: ಪ್ರಕೃತಿಗೆ ಸೊಬಗು ನೀಡುವ ಗಿಡಮಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಹೀಗಿರುವಾಗ ನಮ್ಮ ಪರಿಸರವನ್ನು ಕಾಪಾಡುವುದು ನಮ್ಮ ಕೈಯಲ್ಲಿದೆ. ಎಂದು ತರಳಬಾಳು ವಿಧ್ಯಾಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕಾರ್ಯದರ್ಶಿ ಕುಸುಮ ಜಗದೀಶ್ ಹೇಳಿದರು.

ಪಟ್ಟಣದ ತರಳಬಾಳು ವಿಧ್ಯಾಸಂಸ್ಥೆಯ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಪರಿಸದ ಬಗ್ಗೆ ಜಾಗೃತಿ ಮೂಡಿಸಿ ಬಳಿಕ ಮಾತನಾಡಿದ ಅವರು ಮಳೆಗಾಲದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ವನ್ನು ನಮ್ಮ ಸ್ನೇಹಿತರಿಗೆ, ಬಂಧುಗಳಿಗೆ ಗಿಡಗಳನ್ನುನೆಟ್ಟು ಅದನ್ನು ಸಂರಕ್ಷಣೆ ಮಾಡಿ ಎಂದು ತಿಳಿ ಹೇಳುವುದರ ಜೊತೆಗೆ ಪರಿಸರ ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡುವುದು ಅತ್ತ್ ಅಗತ್ಯ ಸಾಮಾಜಿಕ ಜಾಲತಾಣ ಗಳನ್ನೂ ಈ ನಿಟ್ಟಿನಲ್ಲಿ ಬಳಸಿಕೊಂಡು ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ವಿಧ್ಯಾರ್ಥಿಗಳಿಗೆ ಮತ್ತು ವಿಧ್ಯಾರ್ಥಿ ಪೋಷಕರಿಗೆ ವಿಶ್ಲೇಷಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ನಂಜಪ್ಪ, ರವಿಕುಮಾರ್, ಮತ್ತು ಸಿಬ್ಬಂಧಿಗಳು ಹಾಜರಿದ್ದರು.