-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ನವರಾತ್ರಿಯ 5ನೇ ದಿನ ಬಿಳಿ ಬಣ್ಣಕ್ಕೆ ಮಾನ್ಯತೆ. ಹೌದು. ಎಲ್ಲರಿಗೂ ತಿಳಿದಿರುವಂತೆ, ಬಿಳಿ ವರ್ಣ ಶಾಂತಿಯ ಪ್ರತೀಕ. ಅಲ್ಲದೇ, ತಾಯಿ ಸ್ಕಂದಾ ಮಾತೆಯ ಪೂಜಿಸುವ ದಿನ. ಈ ದಿನ ದೇವಿಯನ್ನು ಶ್ವೇತ ವರ್ಣದ ಸೀರೆಯಿಂದ (Navaratri Colour Styling) ಅಲಂಕರಿಸಲಾಗುತ್ತದೆ. ಇನ್ನು, ಈ ದಿನ ನಿಗದಿಪಡಿಸಿರುವ ಬಿಳಿ ಬಣ್ಣದಲ್ಲಿ ಮಾನಿನಿಯರು ಕಾಣಿಸಿಕೊಳ್ಳುವುದು ವಾಡಿಕೆ.
ಫ್ಯಾಬ್ರಿಕ್‌ಗೆ ಮಾನ್ಯತೆ ನೀಡಿ
ಇಂದು ಬಿಳಿ ಬಣ್ಣದಲ್ಲೂ, ಸಾಕಷ್ಟು ತಿಳಿ ಹಾಗೂ ಹಾಫ್ ವೈಟ್, ಕ್ರೀಮಿಶ್ ವೈಟ್, ಐವರಿ ವೈಟ್‌ನಂತಹ ನಾನಾ ಶೇಡ್‌ಗಳನ್ನು ಕಾಣಬಹುದು. ಬಿಳಿ ಬಣ್ಣವು ಇತರೆ ಬಣ್ಣಗಳಂತಲ್ಲ. ಎಲ್ಲವೂ ಅಂದವಾಗಿ ಕಾಣಿಸುವುದಿಲ್ಲ! ಹಾಗಾಗಿ ಫ್ಯಾಬ್ರಿಕ್ ಹಾಗೂ ಡಿಸೈನ್ ಆಯ್ಕೆಯ ಆಧಾರದ ಮೇಲೆ ಔಟ್‌ಲುಕ್ ನಿರ್ಧರಿಸಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ರಾಣಿ.
ಹಳೇ ಶ್ವೇತವರ್ಣದ ಡ್ರೆಸ್‌ಗೆ ನಯಾ ಲುಕ್
ಪ್ರತಿ ಹುಡುಗಿ ಅಥವಾ ಮಹಿಳೆಯ ಬಳಿ ಒಂದಲ್ಲ ಒಂದು ಬಿಳಿ ಬಣ್ಣದ ಕುರ್ತಾ, ಚೂಡಿದಾರ್, ಸಲ್ವಾರ್ ಅಥವಾ ಸ್ಕರ್ಟ್ ಇದ್ದೇ ಇರುತ್ತದೆ. ಇದನ್ನು ಕೂಡ ಮಿಕ್ಸ್ ಮ್ಯಾಚ್ ಮಾಡಿ ನಯಾ ಲುಕ್ ನೀಡಬಹುದು.
ಟ್ರೆಂಡಿ ವೈಟ್ ಡಿಸೈನರ್‌ವೇರ್ಸ್ ಧರಿಸಿ
ಎಂಬ್ರಾಯ್ಡರಿ ಇರುವಂತಹ ಸಾಫ್ಟ್ ವೈಟ್ ಡಿಸೈನರ್‌ವೇರ್ಸ್ ರಾಯಲ್ ಲುಕ್ ನೀಡುತ್ತವೆ. ಇನ್ನು, ಕಾಟನ್, ಲೆನಿನ್ ಫ್ಯಾಬ್ರಿಕ್‌ನವು ಸಿಂಪಲ್ ಲುಕ್ ನೀಡುತ್ತವೆ. ಹಾಗಾಗಿ, ಆದಷ್ಟೂ ರೇಷ್ಮೆಯ ಡಿಸೈನರ್‌ವೇರ್ಸ್, ಇಲ್ಲವೇ ಕ್ರೇಪ್, ಸಾಟಿನ್‌ನಲ್ಲಿ ದೊರೆಯುವ ಶ್ವೇತ ವರ್ಣದ ಲೆಹೆಂಗಾ, ಗಾಗ್ರ, ದಾವಣಿ-ಲಂಗ, ಶರಾರ, ಲಾಚಾ, ಅನಾರ್ಕಲಿ ಗೌನ್ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಅತ್ಯಾಕರ್ಷಕವಾಗಿ ಕಾಣಿಸಲು ಜ್ಯುವೆಲರಿ ಧರಿಸಿ
ಸಿಂಪಲ್ ಲುಕ್‌ಗಾಗಿ ಪರ್ಲ್ ಸೆಟ್ ಅಥವಾ ಕ್ರಿಸ್ಟಲ್ ಸೆಟ್ ಧರಿಸಬಹುದು. ಎದ್ದು ಕಾಣಬೇಕಿದ್ದಲ್ಲಿ ಬ್ಲಾಕ್ ಮೆಟಲ್ ಸೆಟ್ ಧರಿಸಬಹುದು.
ಶ್ವೇತ ವರ್ಣದ ಸೀರೆಗಳ ಅಂದ-ಚೆಂದ
ಇನ್ನು, ಸಿಲ್ಕ್, ಜಾರ್ಜೆಟ್, ಕ್ರೇಪ್, ಸಾಟಿನ್‌ನ ವೈಟ್ ಸ್ಟ್ರೈಪ್ಸ್ ಶಿಫಾನ್‌ನ ಡಬ್ಬಲ್ ವೈಟ್, ಕ್ರೇಪ್‌ನ ಫ್ಲೋರಲ್ ಪ್ರಿಂಟ್ಸ್ ವೈಟ್ ಸೀರೆಗಳು ಈ ಫೆಸ್ಟಿವ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಆದಷ್ಟೂ ಶೀರ್ ಸೀರೆ ಆವಾಯ್ಡ್ ಮಾಡಿ. ಸೀರೆಗೆ ತಕ್ಕಂತೆ ಸ್ಟೈಲಿಂಗ್ ಮಾಡಿದಾಗ ಎಲಿಗೆಂಟ್ ಲುಕ್ ನಿಮ್ಮದಾಗಿಸಿಕೊಳ್ಳಬಹುದು.
ಈ ಸುದ್ದಿಯನ್ನೂ ಓದಿ | Kannada New Movie: ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಸುತ್ತ ‘ವೃತ್ತ’ ಸಿನಿಮಾ ಟೀಸರ್ ರಿಲೀಸ್
ಯುವತಿಯರು ಇಂಡೋ-ವೆಸ್ಟರ್ನ್ ಲುಕ್‌ಗಾಗಿ ಗ್ಲಾಮರಸ್ ಬ್ಲೌಸ್ ಧರಿಸಬಹುದು.
ಈ ಕಲರ್ ಉಡುಪಿಗೆ ಆದಷ್ಟೂ ಫ್ರೆಶ್ ಲುಕ್ ನೀಡುವುದು ಬೆಸ್ಟ್.
ವೈಟ್ ರೆಡಿ ಗೌನ್ ಸೀರೆಗಳು ದೊರೆಯುತ್ತಿವೆ.
ಗೋಲ್ಡ್ ಎಂಬ್ರಾಯ್ಡರಿ ಇರುವ ವೈಟ್ ಸೀರೆ ಟ್ರೆಡಿಷನಲ್ ಲುಕ್ ನೀಡುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)