-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ನವರಾತ್ರಿಯ 2ನೇ ದಿನ ಹಸಿರು ಬಣ್ಣಕ್ಕೆ (Navaratri Colour Tips) ಆದ್ಯತೆ. ಈ ದಿನದ ಕಲರ್ ಟ್ರೆಂಡ್‌ಗೆ ಹೊಂದುವಂತೆ ಈಗಾಗಲೇ ನಾನಾ ಬಗೆಯ ಡಿಸೈನರ್‌ವೇರ್ ಹಾಗೂ ಸೀರೆಗಳು ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ. ಇನ್ನು, ಹೊಸತನ್ನು ಖರೀದಿಸದಿದ್ದವರು, ವಾರ್ಡ್ರೋಬ್‌ನಲ್ಲಿರುವ ಎಥ್ನಿಕ್‌ವೇರ್ಸ್ ಧರಿಸಿ ಹೇಗೆಲ್ಲಾ ಬ್ಯೂಟಿಫುಲ್ ಆಗಿ ಕಾಣಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್ ದೀಪಿಕಾ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ನವರಾತ್ರಿಯಲ್ಲಿ ಹಸಿರು ವರ್ಣದ ಪ್ರಾಮುಖ್ಯತೆ
ನವರಾತ್ರಿಯ 2ನೇ ದಿನ ಹಸಿರು ವರ್ಣದ ಸೀರೆಯಲ್ಲಿ ಸಿಂಹದ ಮೇಲೆ ಆಸೀನಳಾಗಿರುವ ದುರ್ಗೆಯ ಅವತಾರ ಕಾತ್ಯಾಯನಿ ದೇವಿಯ ಆರಾಧನೆಯ ದಿನ. ಈ ದಿನ ಪರಿಸರ, ಗೆಲುವು ಹಾಗೂ ಸಾಮರಸ್ಯವನ್ನು ಬಿಂಬಿಸುತ್ತದೆ ಎಂದು ಪುರಾಣದ ಕಥೆಗಳು ಉಲ್ಲೇಖಿಸಿವೆ.
ಹಸಿರು ಲೆಹೆಂಗಾ-ಗಾಗ್ರ ಹೀಗೆ ಸ್ಟೈಲಿಂಗ್ ಮಾಡಿ
ಹಸಿರು ಶೇಡ್‌ನ ಲೆಹೆಂಗಾ ಹಾಗೂ ಗಾಗ್ರಗಳನ್ನು ಧರಿಸಿದಾಗ ಟ್ರೆಡಿಷನಲ್ ಲುಕ್ ನೀಡಿ. ಎಂಬ್ರಾಯ್ಡರಿ ಮಿರರ್ ವರ್ಕ್‌ನ ಹೆವ್ವಿ ಡಿಸೈನ್‌ನದ್ದನ್ನು ಚೂಸ್ ಮಾಡಿ. ಗ್ರ್ಯಾಂಡ್ ಲುಕ್‌ನವು ಎದ್ದು ಕಾಣುತ್ತವೆ. ಇವಕ್ಕೆ ಬ್ಲ್ಯಾಕ್-ವೈಟ್ ಮೆಟಲ್ ಅಥವಾ ಗೋಲ್ಡ್ ಜ್ಯುವೆಲರಿ ಧರಿಸಿ. ಆಕರ್ಷಕವಾಗಿ ಕಾಣಿಸುವುದು.
ಹೊಸ ಹಸಿರು ಸೀರೆಯಲ್ಲಿ ಸಂಭ್ರಮಿಸಿ
ಯುವತಿಯರು ಹೊಸ ಸೀರೆ ಉಟ್ಟಲ್ಲಿ, ಕಂಟೆಪರರಿ ಸ್ಟೈಲಿಂಗ್ ಮಾಡಿ. ಮಹಿಳೆಯರು ಟ್ರೆಡಿಷನಲ್ ಸ್ಟೈಲಿಂಗ್‌ಗೆ ಆದ್ಯತೆ ನೀಡಿ. ಆಯಾ ಸೀರೆಯ ಫ್ಯಾಬ್ರಿಕ್‌ಗೆ ತಕ್ಕಂತೆ ಡ್ರೇಪಿಂಗ್ ಆಯ್ಕೆ ಮಾಡಿ. ರೇಷ್ಮೆ ಸೀರೆಯಾದಲ್ಲಿ ಟ್ರೆಡಿಷನಲ್ ಲುಕ್, ಡಿಸೈನರ್ ಸೀರೆಯಾದಲ್ಲಿ ಇಂಡೋ-ವೆಸ್ಟರ್ನ್ ಲುಕ್ ಪ್ರಯೋಗ ಮಾಡಬಹುದು.
ಹಸಿರು ಎಥ್ನಿಕ್‌ವೇರ್ಸ್‌ಗೆ ಮೇಕಪ್ ಹೀಗಿರಲಿ
ಹಸಿರು ಸೀರೆ ಅಥವಾ ಡ್ರೆಸ್‌ಗೆ ಮೇಕಪ್ ಮಾಡುವಾಗ ಕಾಡಿಗೆ, ಐ ಲೈನರ್ ಸೇರಿದಂತೆ ಐ ಮೇಕಪ್‌ಗೆ ಪ್ರಾಮುಖ್ಯತೆ ನೀಡಿ. ಮೇಕಪ್ ಮ್ಯಾಚ್ ಮಾಡಲು ಪ್ರಯತ್ನಿಸಬೇಡಿ.
ಹಸಿರು ಡಿಸೈನರ್‌ವೇರ್‌ಗಳಿಗೆ ಜ್ಯುವೆಲರಿಗಳ ಆಯ್ಕೆ
ಗೋಲ್ಡ್ ಜ್ಯುವೆಲರಿ ಧರಿಸಿ, ಬೋರ್ ಆಗಿದ್ದಲ್ಲಿ, ಈ ಬಾರಿ ಟೆರ್ರಾಕೋಟಾ ಅಥವಾ ಆಕ್ಸಿಡೈಸ್ಡ್ ಆಭರಣಗಳನ್ನು ಧರಿಸಿ. ಇದು ಹಸಿರು ಸೀರೆ ಅಥವಾ ಡಿಸೈನರ್‌ವೇರ್‌ಗೆ ಹೊಸ ಲುಕ್ ನೀಡುತ್ತದೆ.
ಈ ಸುದ್ದಿಯನ್ನೂ ಓದಿ | Bhairadevi Movie: ರಾಧಿಕಾ ಕುಮಾರಸ್ವಾಮಿ ನಟನೆಯ ಬಹು ನಿರೀಕ್ಷಿತ ʼಭೈರಾದೇವಿʼ ಚಿತ್ರ ಅ.3ರಂದು ರಿಲೀಸ್
ಹಳೇ ಹಸಿರು ಸೀರೆಗೆ ಹೊಸ ಲುಕ್ ನೀಡಿ
ನಿಮ್ಮ ಬಳಿ ರೇಷ್ಮೆಯ ಹಸಿರು ಸೀರೆ ಇದ್ದಲ್ಲಿ, ಅದನ್ನು ಉಟ್ಟು, ಹೊಸ ಶೈಲಿಯಲ್ಲಿ ಡ್ರೇಪಿಂಗ್ ಮಾಡಿ. ಇಲ್ಲವೇ ಹಳೆಯ ಬ್ಲೌಸನ್ನು ಬದಲಿಸಿ ಹೊಸ ಡಿಸೈನರ್ ಬ್ಲೌಸ್ ಧರಿಸಿ. ಆಗ ಹಳೆಯ ಸೀರೆಗೂ ಹೊಸ ಲುಕ್ ಸಿಗುವುದು ಗ್ಯಾರಂಟಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)