Thursday, 12th December 2024

Navaratri Saree Shopping: ನವರಾತ್ರಿ ಸಂಭ್ರಮ; ಈ ಬಾರಿಯ ಸೀರೆ ಟ್ರೆಂಡ್ ಹೇಗಿದೆ?

Navaratri Saree Shopping

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಗೂ ಮುನ್ನವೇ ಸಾದಾ ಬಣ್ಣಬಣ್ಣದ ಸೀರೆಗಳ ಮಾರಾಟ ಹೆಚ್ಚಾಗಿದೆ. ಇದಕ್ಕೆ ಕಾರಣವೂ ಇದೆ. ಪ್ರತಿಬಾರಿಯಂತೆ ಈ ಬಾರಿಯೂ ನವರಾತ್ರಿಯ (Navaratri Saree Shopping) ಆಯಾ ದಿನಕ್ಕೆ ಅನುಗುಣವಾಗಿ ಸೀರೆಗಳನ್ನು ಉಡಲು ಬಯಸುವ ಮಾನಿನಿಯರು ಹೆಚ್ಚಾಗಿದ್ದಾರೆ. ಅವರ ಮನೋಭಿಲಾಷೆಗೆ ತಕ್ಕಂತೆ ಸೀರೆ ಸೆಂಟರ್‌ಗಳು ಹಾಗೂ ಸೀರೆ ಶಾಪ್‌ಗಳು ಕೂಡ ಲೆಕ್ಕವಿಲ್ಲದಷ್ಟು ಫ್ಯಾಬ್ರಿಕ್‌ನಲ್ಲಿ ಸಾದಾ ಬಣ್ಣ ಬಣ್ಣದ ಸೀರೆಗಳನ್ನು ಬಿಡುಗಡೆಗೊಳಿಸಿವೆ. ನಾನಾ ಬ್ರಾಂಡ್‌ನ ಗ್ರ್ಯಾಂಡ್‌ ಸೀರೆಗಳಿಂದ ಹಿಡಿದು ಸಿಂಪಲ್‌ ಕಲರ್‌ಫುಲ್‌ ಸೀರೆಗಳು (Simple Colorful Sarees) ಕೂಡ ಫ್ಯಾಷನ್‌ಲೋಕಕ್ಕೆ ಕಾಲಿಟ್ಟಿವೆ.

ಚಿತ್ರಗಳು: ಮಿಂಚು

ಒಂಭತ್ತು ದಿನಕ್ಕೂ ಒಂದೊಂದು ಸೀರೆ ಉಡುವ ಮಹಿಳೆಯರು

ಎಲ್ಲರಿಗೂ ಗೊತ್ತಿರುವಂತೆ, ನವರಾತ್ರಿ ಅಂದರೆ, ಒಂಬತ್ತು ದಿನಗಳಂದು 9 ಶಕ್ತಿ ದೇವತೆಗಳ ಪೂಜೆ ಎಲ್ಲೆಡೆ ನಡೆಯುತ್ತದೆ. ದೇವಸ್ಥಾನಗಳಲ್ಲಿ ಮಾತ್ರವಲ್ಲ, ಬಹುತೇಕ ಮನೆಗಳಲ್ಲೂ ನವರಾತ್ರಿ ಸಂಭ್ರಮಾಚರಣೆ ನಡೆಯುತ್ತದೆ. ಪ್ರತಿದಿನವೂ ಒಂದೊಂದು ದೇವಿಯ ಅವತಾರದ ಪೂಜೆಯಾದ್ದರಿಂದ ಆ ದೇವಿಯನ್ನು ಪ್ರತಿನಿಧಿಸುವ ಬಣ್ಣದ ಸೀರೆ ಅಥವಾ ಸಾಂಪ್ರದಾಯಿಕ ಉಡುಪುಗಳನ್ನು ಹೆಣ್ಣುಮಕ್ಕಳು ಧರಿಸುವುದು ಇಂದು ಸಾಮಾನ್ಯವಾಗಿದೆ ಎಂದು ಹೇಳುತ್ತಾರೆ ಪ್ರತಿವರ್ಷವೂ ನವರಾತ್ರಿ ಪೂಜೆ ಮಾಡುವ ಲಕ್ಷ್ಮಿದೇವಿ ಹಾಗೂ ಊರ್ವಶಿ.

ಯಾವ್ಯಾವ ಬಣ್ಣದ ಸೀರೆಗಳಿಗೆ ಮಾನ್ಯತೆ

ಬಿಳಿ, ನೀಲಿ, ಹಸಿರು, ಗುಲಾಬಿ, ಕೆಂಪು, ಹಳದಿ ಹೀಗೆ ಒಂಬತ್ತು ದಿನಗಳು 9 ಬಣ್ಣಕ್ಕೆ ಪ್ರಾಮುಖ್ಯತೆ ನೀಡುವುದರಿಂದ ಈ ಬಣ್ಣದ ಸೀರೆಗಳಿಗೆ ಹೆಚ್ಚು ಬೇಡಿಕೆ ಹಾಗೂ ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಗಾಂಧಿ ಬಜಾರ್‌ ಸೀರೆ ಮಳಿಗೆಯ ಮಾರಾಟಗಾರರು. ಪ್ರತಿಬಾರಿಯೂ ನವರಾತ್ರಿಯಲ್ಲಿ ಪ್ರಿಂಟೆಡ್‌ ಸೀರೆಗಳನ್ನು ಕೊಳ್ಳುವವರು ಕಡಿಮೆ. ಡಿಸೈನರ್‌ ಸಾದಾ ಬಣ್ಣದ ಸೀರೆಗಳಿಗೆ ಹೆಚ್ಚು ಬೇಡಿಕೆ ಎನ್ನುತ್ತಾರೆ ಮಲ್ಲೇಶ್ವರ ಸೀರೆ ಶಾಪ್‌ವೊಂದರ ಸೇಲ್ಸ್ ಮ್ಯಾನ್‌.

ಬಂತು ಬಗೆಬಗೆಯ ಫ್ಯಾಬ್ರಿಕ್‌ನ ಸೀರೆಗಳು

ಸಿಲ್ಕ್‌, ಜಾರ್ಜೆಟ್, ಕ್ರೇಪ್‌, ಅರ್ಗಾನ್ಜಾ, ಕಾಟನ್‌ ಹೀಗೆ ನಾನಾ ಫ್ಯಾಬ್ರಿಕ್‌ನವು ಈ ಸೀಸನ್‌ನಲ್ಲಿ ಆಗಮಿಸಿವೆ.

ಈ ಸುದ್ದಿಯನ್ನೂ ಓದಿ | Dasara Shopping 2024: ವೀಕೆಂಡ್‌‌‌ನಲ್ಲೇ ನಡೆಯುತ್ತಿದೆ ದಸರಾ- ನವರಾತ್ರಿ ಭರ್ಜರಿ ಶಾಪಿಂಗ್‌!

ಸೀರೆ ಕೊಳ್ಳುವವರಿಗೆ ಟಿಪ್ಸ್‌

ಲೆಕ್ಕವಿಲ್ಲದಷ್ಟು ಬ್ರಾಂಡ್‌ಗಳಲ್ಲಿ ಬಣ್ಣಬಣ್ಣದ ಸೀರೆಗಳು ಲಭ್ಯ.
ಸಾದಾ ಬಾರ್ಡರ್‌ ಸೀರೆಗೆ ಡಿಮ್ಯಾಂಡ್‌ ಹೆಚ್ಚಿದೆ.
ಗ್ರೂಪ್‌ಗೆ ಖರೀದಿಸುವುದಾದಲ್ಲಿ ಹೋಲ್‌ಸೇಲ್‌ ಶಾಪ್‌ನಲ್ಲಿ ಕೊಳ್ಳಿ.
ಮೊದಲೇ ಬಣ್ಣ ಆಯ್ಕೆ ಮಾಡಿ, ನಂತರ ಖರೀದಿಸಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)