ತಾಲೂಕು ಮ್ಯಾಸ ನಾಯಕ ಬುಡಕಟ್ಟು ಸಂಸ್ಕçತಿ ಸಂರಕ್ಷಣಾ ಸಮಿತಿ
ಹರಪನಹಳ್ಳಿ: ಪರಿಶಿಷ್ಟ ಪಂಗಡದ ಪಟ್ಟಿಯಿಂದ ‘ನಾಯಕ’ ಎಂಬ ಪದ ಕೈಬಿಟ್ಟಿರುವುದನ್ನು ಕೂಡಲೇ ನಾಡ ಕಛೇರಿ ಅಟಲ್ ಜೀ ಜನಸ್ನೇಹಿ ಕೇಂದ್ರದ ಅಂತರ್ಜಾಲದಲ್ಲಿ ಸೇರಿಸಿ ನಾಯಕ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಲು ತಾಲೂಕು ಮ್ಯಾಸ ನಾಯಕ ಬುಡಕಟ್ಟು ಸಂಸ್ಕçತಿ ಸಂರಕ್ಷಣಾ ಸಮಿತಿಯ ಸರ್ವಸದಸ್ಯರು ಆಗ್ರಹಿಸಿದರು.
ಪಟ್ಟಣದ ಮಿನಿ ವಿಧಾನ ಸೌಧಕ್ಕೆ ತೆರಳಿದ ಪ್ರತಿಭಟನಕಾರರು ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿದರು, ನಮಗೆ ಸುಮಾರು ೫-೬ ತಿಂಗಳಿAದ ನಾಡ ಕಛೇರಿಯಲ್ಲಿ ಪರಿಶಿಷ್ಟ ಒಂಗಡ ನಾಯಕ ಎಂಬ ಪದವನ್ನು ಕೈ ಬಿಡಲಾಗಿದೆ ಮತ್ತು ನಾಯಕ ಎಂಬ ಎಸ್ಟಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ ಆದ್ದರಿಂದ ಕೂಡಲೇ ಸಂಬ0ದ ಪಟ್ಟ ಅಧಿಕಾರಿಗಳು ಸಂವಿಧಾನ ವಿರೋಧಿ ಪದವನ್ನು ಬದಿಗೋತ್ತಿ ಸಂವಿಧಾನಿಕವಾಗಿ ನೀಡಿರುವ ಪರಿಶಿಷ್ಟ ಪಂಗಡ ನಾಯಕ ಎಂಬ ಪದದ ಮೇಲೆ ಪ್ರಮಾಣ ಪತ್ರವನ್ನು ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಬAಧಪಟ್ಟ ಅಧಿಕಾರಿಗಳ ವಿರುದ್ಧ ಮತ್ತು ಸರ್ಕಾರದ ವಿರುದ್ಧ ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಮ್ಯಾಸ ನಾಯಕ ಬುಡಕಟ್ಟು ಸಂಸ್ಕಿç ಸಂರಕ್ಷಣಾ ಸಮಿತಿಯ ಸಂಚಾಲಕರುಗಳಾದ ಎಂ.ದ್ವಾರಕೇಶ್, ಸಿ. ಹನುಮಂತಪ್ಪ, ನಾಗರಾಜ ನಾಯಕ, ಡಿ.ಕೆ. ನಾಗರಾಜ, ಡಿ, ವೆಂಕಟೇಶ್, ಕೃಷ್ಣಪ್ಪ, ಮಂಜುನಾ, ಓಬಪ್ಪ, ಶೀರನಹಳ್ಳಿ ಮುರುಡೇಶ್,ಚೌಡಪ್ಪ, ಬೊಮ್ಮಪ್ಪ, ನಾಗರಾಜ, ಕೊಟ್ರೇಶ, ನಾಗರಾಜ, ಮತ್ತು ಇತರರು ಇದ್ದರು.