Thursday, 12th December 2024

ಹುಳಿಯಾರಿನ ಪಿಯು ಕಾಲೇಜಿಗೆ ಕೃಷ್ಣಮೂರ್ತಿ ನೂತನ ಪ್ರಾಚಾರ್ಯ

ಹುಳಿಯಾರು: ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಎನ್.ಜಿ.ಕೃಷ್ಣಮೂರ್ತಿ ಅವರು ನೂತನ ಪ್ರಾಚಾರ್ಯರಾಗಿ ಶುಕ್ರವಾರ ಅಧಿಕಾರಿ ಸ್ವೀಕರಿಸಿದರು.

ತುಮಕೂರು ತಾಲೂಕು ನಾಗವಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸು ತ್ತಿದ್ದ ಎನ್.ಜಿ.ಕೃಷ್ಣಮೂರ್ತಿ ಅವರು ಪದೋನ್ನತಿ ಹೊಂದಿ ಹುಳಿಯಾರು ಪಿಯು ಕಾಲೇಜಿಗೆ ನಿಯುಕ್ತಿಗೊಂಡಿದ್ದರು.

ನೂತನ ಪ್ರಾಚಾರ್ಯರನ್ನು ಉಪನ್ಯಾಸಕರುಗಳಾದ ವಿ.ಎಚ್.ರೇವಣ್ಣ, ಸಿ.ಶಿವರುದ್ರಯ್ಯ, ಕೆ.ಅನಂತಯ್ಯ, ಎಸ್.ಜಿ.ರಮೇಶ್, ಸಿ.ಗಿರೀಶ್, ಎಚ್.ಎಂ.ಮಂಜುನಾಥ್, ಟಿ.ಎನ್.ಮಲ್ಲಿಕಾರ್ಜುನ್, ಆರ್.ನಟರಾಜು, ಎನ್.ಕವಿತ ಹಾಗೂ ಸಿಬ್ಬಂದಿ ಪಿ.ಎಸ್.ರಾಜ ಕುಮಾರ್ ಸ್ವಾಗತಿಸಿದರು.