Wednesday, 11th December 2024

ನಾಳೆ ರಾತ್ರಿಯಿಂದ ನೈಟ್‌ ಕರ್ಫ್ಯೂ ಜಾರಿ, ಕ್ರಿಸ್ ಮಸ್ ಆಚರಣೆಗೆ ಮಿಡ್ ನೈಟ್ ಮಾಸ್

ಬೆಂಗಳೂರು : ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಜಾರಿ ವಿಚಾರದಲ್ಲಿ ಹಠಾತ್‌ ಬದಲಾವಣೆ ತರಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಜಾರಿ ಮಾಡಲು ಉದ್ದೇಶಿಸಿದ್ದ ರಾತ್ರಿ ಕರ್ಫ್ಯೂ ಬದಲಾಗಿ ಡಿ.24 ರಿಂದ ಜನವರಿ 1, 2021 ರವರೆಗೆ, ರಾತ್ರಿ 11:00 ಗಂಟೆಯಿಂದ ಬೆಳಗ್ಗೆ 5:00 ಗಂಟೆಯವರೆಗೆ (02.01.2021ರ ಬೆಳಗ್ಗೆ 5:00 ಗಂಟೆ) ಜಾರಿಯಲ್ಲಿರುತ್ತದೆ ಎಂಬು ದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಡಿ.25ರ ಕ್ರಿಸ್ ಮಸ್ ಆಚರಣೆಯ ಸಂದರ್ಭದಲ್ಲಿ ನಡೆಸುವಂತ ಮಿಡ್ ನೈಟ್ ಮಾಸ್ ಗೂ ಅವಕಾಶ ನೀಡಲಾಗಿದೆ.

ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಪ್ಯೂ ಜಾರಿಗೊಳ್ಳಲಿದೆ. ಇಂತಹ ಕರ್ಪ್ಯೂ ರಾತ್ರಿ 10ರಿಂದ ಆರಂಭಗೊಂಡು, ಬೆಳಿಗ್ಗೆ 6 ಗಂಟೆ ವರೆಗೆ ಜಾರಿಯಲ್ಲಿ ಇರಲಿದೆ ಎಂಬುದಾಗಿ ಘೋಷಣೆ ಮಾಡಲಾಗಿತ್ತು. ಇದಕ್ಕೆ ಅನೇಕರು ವಿರೋಧ ವ್ಯಕ್ತ ಪಡಿಸಿದ್ದರು.

ಹೀಗಾಗಿ ರಾತ್ರಿ ಕರ್ಪ್ಯೂವನ್ನು 10 ಗಂಟೆಗೆ ಬದಲಾಗಿ 11ಕ್ಕೆ ಬದಲಾವಣೆ ಮಾಡಲಾಗಿದೆ. ರಾತ್ರಿ 11 ಗಂಟೆಗೆ ಆರಂಭಗೊಂಡು, ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಾಗಿರಲಿದೆ. ಇದರ ಮಧ್ಯೆ ಡಿ.25ರಂದು ಆಚರಣೆಗೊಳ್ಳಲಿರುವಂತ ಕ್ರಿಸ್ ಮಸ್ ಆಚರಣೆಗೂ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ರಾತ್ರಿ ಕರ್ಫ್ಯೂ ಸಂದರ್ಭದಲ್ಲಿ, ಡಿ.24 ರ ರಾತ್ರಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮ ಗಳನ್ನು (ಮಿಡ್ ನೈಟ್ ಮಾಸ್) ಯಾವುದೇ ಅಡಚಣೆಯಿಲ್ಲದೆ ಮಾಡಬಹುದು ಎಂಬುದಾಗಿ ತಿಳಿಸಿದ್ದಾರೆ.