Thursday, 12th December 2024

ಇಂದಿನಿಂದ ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಜಾರಿ: ಸಿಎಂ ಯಡಿಯೂರಪ್ಪ ಘೋಷಣೆ

ಬೆಂಗಳೂರು: ರಾಜ್ಯದಲ್ಲಿಇಂದಿನಿಂದ ಹತ್ತು ದಿನಗಳ ಕಾಲ ನೈಟ್‌ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.

ಬುಧವಾರ ಮಾನ್ಯ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಗೃಹ ಕಛೇರಿ ಕೃಷ್ಣಾದಲ್ಲಿ ಕೋವಿಡ್ ಸಾಂಕ್ರಾಮಿಕ ವನ್ನು‌ ಪರಿಣಾಮಕಾರಿಯಾಗಿ ತಡೆಗಟ್ಟುವ‌ ಸಂಬಂಧ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ನಂತರ ಆರೋಗ್ಯ ಸಚಿವ ಡಾ.‌ಕೆ. ಸುಧಾಕರ್ ಅವರು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಬುಧವಾರ ರಾತ್ರಿಯಿಂದಲೇ ನೈಟ್‌ ಕರ್ಫ್ಯೂ ಜಾರಿಗೆ ಬರಲಿದೆ. ಈ ಪ್ರಕಾರ, ರಾತ್ರಿ ಹತ್ತು ಗಂಟೆಯಿಂದ ಮರುದಿನ ಬೆಳಿಗ್ಗೆ ಆರು ಗಂಟೆಯವರೆಗೆ ನೈಟ್‌ ಕರ್ಫ್ಯೂ ಇರಲಿದೆ. ಈ ಸಂದರ್ಭ ಹಾಲು, ತರಕಾರಿ, ಔಷಧಿ ವಿತರಣೆಗೆ ಯಾವುದೇ ನಿರ್ಬಂಧವಿಲ್ಲ. ಹಾಗೂ ಮೆಡಿಕಲ್‌ ಸ್ಟೋರ್‌ ಮತ್ತು ಆಸ್ಪತ್ರೆ ಗಳಿಗೂ ವಿನಾಯ್ತಿ ನೀಡಲಾಗಿದೆ. ಹೋಟೆಲ್‌, ರೆಸ್ಟೋರೆಂಟ್‌ ಹಾಗೂ ಬಾರುಗಳು ಬಂದ್ ಇರಲಿವೆ. ಪ್ರಮುಖ ವಿಚಾರವೇನೆಂದರೆ, ಕ್ರಿಸ್‌ಮಸ್‌ ಹಾಗೂ ಹೊಸವರ್ಷ ಸಂಭ್ರಮಾಚರಣೆಗೆ ಕೂಡ ಬ್ರೇಕ್‌ ಹಾಕಲಾಗಿದೆ.

ಇಂದು ಆರಂಭವಾಗುವ ನೈಟ್‌ ಕರ್ಫ್ಯೂ, 2021ರ ಜನವರಿ ಎರಡು ತಾರೀಕಿನವರೆಗೂ ಜಾರಿಯಲ್ಲಿರಲಿದೆ.