Sunday, 15th December 2024

ಮಕ್ಕಳೊಂದಿಗೆ ಮಗುವಾದ ನಿಜಗುಣಾನಂದ ಶ್ರೀ

ರಾಷ್ಟ್ರೀಯ ಬಸವ ಸೈನ್ಯದಿಂದ ಬಸವ ಪಂಚಮಿ ಆಚರಣೆ

ಬಸವನಬಾಗೇವಾಡಿ: ಪಟ್ಟಣದ ಶಾಸಕರ ಮಾದರಿ ಶಾಲೆಯ ಆವರಣದಲ್ಲಿ ರಾಷ್ಟ್ರೀಯ ಬಸವ ಸೈನ್ಯ ನೇತೃತ್ವದಲ್ಲಿ ನಿಷ್ಕಲ ಮಂಟಪ ಬೈಲೂರಿನ ನಿಜಗುಣಪ್ರಭು ತೊಂಟದಾರ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ಮಕ್ಕಳಿಗೆ ಹಾಲುಣಿಸುವ ಮೂಲಕ ವಿನೂತನವಾಗಿ ಬಸವ ಪಂಚಮಿಯನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಿಜಗುಣ ಸ್ವಾಮೀಜಿಗಳು ಮಕ್ಕಳೊಂದಿಗೆ ಕೆಲ ಹೊತ್ತು ಸಂವಾದ ನಡೆಸಿದರು, ಹಾಲನ್ನ ದೇವರಿಗೆ ಉಣಿಸ ಬೇಕೋ ಅಥವಾ ಮಕ್ಕಳಿಗೆ ನೀಡಬೇಕು ಎಂದು ಪ್ರಶ್ನಿಸುವ ಮೂಲಕ ನಾಗರ ಪಂಚಮಿಯ೦ದು ನಾಗಪ್ಪನಿಗೆ ಹಾಲುಣಿಸುವುದು ಮೂಡ ನಂಬಿಕೆಯಾಗಿದೆ ಎಂದು ಮಕ್ಕಳಿಗೆ ತಿಳಿಸಿದರು.

ಅಲ್ಲದೆ ಮಕ್ಕಳಿಂದ ವಚನ ಹೇಳಿಸುವ ಮೂಲಕ ವಚನದ ಮಹತ್ವ ತಿಳಿಸಿದರು. ಮಕ್ಕಳಿಗೆ ಪ್ರಶ್ನೇ ಕೇಳುವ ಮೂಲಕ ಅವರಿಂದ ಉತ್ತರ ಪಡೆದು ಮಕ್ಕಳ ಜೊತೆ ಕೆಲ ಹೊತ್ತು ಮಗುವಾಗಿ ಮಕ್ಕಳ ಮನಸ್ಸಲ್ಲಿ ಒಳ್ಳೆ ವಿಚಾರಗಳನ್ನು ತುಂಬುವಲ್ಲಿ ಶಿಕ್ಷಕರು ಗಮನ ಹರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಜಾತ್ರಾ ಕಮೀಟಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಉಪಾಧ್ಯಕ್ಷರಾದ ಮೀರಾಸಾ ಕೋರಬು, ಪರಶುರಾಮ ಜಮಖಂಡಿ, ಸಂಗಮೇಶ ವಾಡೇದ, ಪ್ರಧಾನ ಕಾರ್ಯದರ್ಶಿಯಾದ ಬಸವರಾಜ ಅಳ್ಳಗಿ, ಸಂಚಾಲಕ ಶಂಕರಗೌಡ ಬಿರಾದಾರ, ಸುನೀಲ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ, ಬಸವರಾಜ ಗೊಳಸಂಗಿ, ಭರತು ಅಗರವಾಲ, ರವಿ ಚಿಕ್ಕೊಂಡ, ಸಂಜು ಬಿರಾದರ ಸೇರಿದಂತೆ ಮುಂತಾದವರು ಇದ್ದರು.