Friday, 22nd November 2024

Nipah Virus: ನಿಫಾ ಸೋಂಕು ಆತಂಕ, ಬೆಂಗಳೂರಿನಲ್ಲಿ 41 ಜನರಿಗೆ ಹೋಮ್‌ ಕ್ವಾರಂಟೈನ್

nipah virus

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿದ್ದ ಟೆಕ್ಕಿಯೊಬ್ಬ ಕೇರಳಕ್ಕೆ ತೆರಳಿ ನಿಫಾ ವೈರಸ್‌ನಿಂದ (Nipah Virus, Nipah Death) ಮೃತಪಟ್ಟಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿ (Bangalore news) ಈ ಕುರಿತು ಹೆಚ್ಚಿನ ಅಲರ್ಟ್‌ ಸಾರಲಾಗಿದೆ. ನಿಫಾ ಸೋಂಕಿತ ಯುವಕನ (Nipah alert) ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದ ಬೆಂಗಳೂರಿನ 41 ಮಂದಿಗೆ ಹೋಮ್‌ ಕ್ವಾರಂಟೈನ್‌ (Home quarantine) ವಿಧಿಸಲಾಗಿದೆ.

ಇದೀಗ ರಾಜ್ಯದಲ್ಲಿ ನಿಫಾ (Nipah Virus) ಜೊತೆಗೆ ಮಂಕಿಪಾಕ್ಸ್ ಆತಂಕ ಹೆಚ್ಚಾಗಿದ್ದು ಮತ್ತೆ ಹೋಮ್ ಕ್ವಾರಂಟೈನ್​ ಶುರುವಾಗಲಿದೆ. ಕೊರೊನಾ ಬಳಿಕ ಮತ್ತೆ ನಿಫಾದಿಂದ ರಾಜಧಾನಿಯಲ್ಲಿ ಹೋಮ್ ಕ್ವಾರಂಟೈನ್ ಶುರುವಾಗಿದೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳದ ಯುವಕ ನಿಫಾಗೆ ಬಲಿಯಾಗಿದ್ದು ಯುವಕನ ಅಂತ್ಯಸಂಸ್ಕಾರಕ್ಕೆ ಬೆಂಗಳೂರಿನಿಂದ ತೆರಳಿದ್ದ ಸ್ನೇಹಿತರು ಹಾಗೂ ಪ್ರಾಥಮಿಕ ಸಂಪರ್ಕಿತರಿಗೆ ಹೋಂ ಐಸೊಲೇಷನ್ ಮಾಡಲಾಗಿದೆ.

41 ಪ್ರಾಥಮಿಕ ಸಂಪರ್ಕಿತರ ಪತ್ತೆಯಾಗಿದ್ದು 41 ಜನರಿಗೂ ಕಡ್ಡಾಯ ಹೋಂ ಐಸೊಲೇಷನ್ ಮಾಡಲಾಗಿದೆ. ಎಲ್ಲಾ ಸಂಪರ್ಕಿತರ ಮೇಲೆ ಆರೋಗ್ಯಾಧಿಕಾರಿಗಳು ನಿಗಾವಹಿಸಿದ್ದಾರೆ. 41 ಸಂಪರ್ಕಿತರ ಪೈಕಿ ಒಬ್ಬರಿಗೆ ನಿಫಾ ಗುಣಲಕ್ಷಣ ಕಂಡು ಬಂದಿದ್ದು ಗುಣಲಕ್ಷಣಗಳಿರುವ ವ್ಯಕ್ತಿಯ ರಕ್ತ ಮತ್ತು ಸೆರಂ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ಸದ್ಯ ರಾಜ್ಯದಲ್ಲಿ ಯಾವುದೇ ನಿಫಾ ಕೇಸ್ ದಾಖಲಾಗಿಲ್ಲ. ಕೇರಳಕ್ಕೆ ಹೋಗಿದ್ದ ಸ್ನೇಹಿತರು ಹಾಗೂ ಸಿಬ್ಬಂದಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮುಂದಿನ ಎರಡು ದಿನಗಳ ಬಳಿಕ ಲಕ್ಷಣ ಕಂಡು ಬರದಿದ್ದರೆ ಆತಂಕ ಕಡಿಮೆ ಆಗಲಿದೆ.

ಇದನ್ನೂ ಓದಿ: Nipah Virus: ಕೇರಳದಲ್ಲಿ ನಿಫಾ ವೈರಸ್‌ ಹೈ ಅಲರ್ಟ್, ಮಾಸ್ಕ್ ಕಡ್ಡಾಯ, ಶಾಲೆಗಳಿಗೆ ರಜೆ