ಬೆಂಗಳೂರು : ಗುತ್ತಿಗೆದಾರನಿಗೆ ಜೀವ ಬೆದರಿಕೆ (Death threat) ಹಾಗೂ ಜಾತಿ ನಿಂದನೆ ಮಾಡಿದ ವಿಚಾರವಾಗಿ ಮುನಿರತ್ನ (Munirathna) ವಿರುದ್ಧ ಕೇಳಿ ಬಂದಿರುವ ಆರೋಪದ ಕುರಿತಾಗಿ, ಬೆಂಗಳೂರಿನಲ್ಲಿ ಆದಿಚುಂಚನಗಿರಿಯ ಮಹಾಸಂಸ್ಥಾನದ ಪೀಠಾಧ್ಯಕ್ಷರಾದಂತಹ ಡಾ. ನಿರ್ಮಲಾನಂದನಾಥ ಸ್ವಾಮೀಜಿ (Dr. Nirmalanandanatha Swamiji) ಪ್ರತಿಕ್ರಿಯೆ ನೀಡಿದ್ದು, ಒಂದು ವೇಳೆ ಆಡಿಯೋದಲ್ಲಿರುವ ಮುನಿರತ್ನ ಧ್ವನಿ ನಿಜವಾಗಿದ್ದರೆ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉರಿಗೌಡ ನಂಜೇಗೌಡ ವಿಚಾರವಾಗಿ ಕರೆದು ಮುನಿರತ್ನಗೆ ಬುದ್ಧಿ ಹೇಳಿದ್ದೆ. ಆಗ ಮಾಜಿ ಸಚಿವ ಮುನಿರತ್ನ ಸ್ಟಾಪ್ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಧ್ವನಿ ಮುದ್ರಣದಲ್ಲಿ ಇದ್ದುದು ನಿಜ ಆಯ್ತು ಅಂದರೆ, ಮಾತನಾಡಿರುವವರನ್ನು ಕ್ಷಮಿಸಲು ಆಗುವುದಿಲ್ಲ. ಯಾರೇ ಮಾತಾಡಿದರೂ ನಾಗರಿಕ ಸಮಾಜ ಒಪ್ಪುವುದು ಸಾಧ್ಯವಿಲ್ಲ ಎಂದರು.
ಆಧುನಿಕತೆ ಬೆಳೆದಿದೆ ಅಂತ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಒಕ್ಕಲಿಗ, ದಲಿತರಿಗೆ ಮಾತಾಡಿದ್ದಾರೆ ಅನ್ನೋದು ಎಷ್ಟು ಮುಖ್ಯವೋ, ಅದೇ ರೀತಿ ಸಮಾಜದಲ್ಲಿನ ಎಲ್ಲಾ ಸಮುದಾಯಗಳು ಕೂಡ ಅಷ್ಟೇ ಮುಖ್ಯವಾಗಿವೆ. ಪ್ರತಿಯೊಂದು ಸಮುದಾಯವನ್ನು ನಮ್ಮ ಸಂವಿಧಾನ ಒಪ್ಪಿಕೊಂಡಿದೆ. ನಮ್ಮ ದೇಶದ ಅಸ್ಮಿತೆ ತಾಯಂದಿರು, ದೇಶವನ್ನು ಭಾರತ ಮಾತೆ ಅಂತೇವೆ ಎಂದು ತಿಳಿಸಿದರು.
ಇಂತಹ ತಾಯಂದಿರ ಬಗ್ಗೆ ಹೇಳಲು ಆಗದಂತಹ ಪದಗಳು ಆಡಿಯೋದಲ್ಲಿವೆ. ಇದು ಸರಿಯಲ್ಲ ಅಂತ ಭಾವನೆ ಇದೆ. ಯಾರೇ ಆದರೂ ಕ್ರಮ ಆಗಲಿ. ಸಮಸ್ತ ತಾಯಂದಿರ ಬಗ್ಗೆ ಹೀಗೆ ಮಾತಾಡಿದ್ದು ಸರಿಯಲ್ಲ ಎಂದರು. ಒಕ್ಕಲಿಗರ ಸಂಘದಿಂದ ಶಾಸಕ ಮುನಿರತ್ನ ವಿರುದ್ಧ ಧರಣಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಪ್ರತಿಭಟನೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: Laxmi Hebbalkar: ಮಾಡಿದ್ದುಣ್ಣೋ ಮಾರಾಯ; ಮುನಿರತ್ನ ಬಂಧನದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಲೇವಡಿ