Sunday, 15th December 2024

ಸಂಪುಟ ವಿಸ್ತರಣೆ ಮಾಡಲು ಸಿಗಲಿಲ್ಲ ಗ್ರೀನ್ ಸಿಗ್ನಲ್!

ಬೆಂಗಳೂರು: ಸಂಪುಟ ಸೇರಲು ರಾಜ್ಯದ ಶಾಸಕರುಗಳಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಉಪಚುನಾವಣೆಗೆ ಮುನ್ನ ಸಂಪುಟ ವಿಸ್ತರಣೆ ಮಾಡಲು ಬಯಸಿದ್ದ ಯಡಿಯೂರಪ್ಪನವರಿಗೆ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿರಲಿಲ್ಲ. ಈಗ, ಉಪಚುನಾವಣೆ ಗೆದ್ದ ನಂತರವೂ, ವರಿಷ್ಠರ ಭೇಟಿಗೆ ಸಮಯ ಸಿಗುತ್ತಿಲ್ಲ. ಕಾರಣ, ಬಿಹಾರ ಸರಕಾರ ರಚನೆ.

ಈ ಬಗ್ಗೆ ಮಾತನಾಡಿರುವ ಸಿಎಂ ಬಿಎಸ್ವೈ, “ಇಂದು ದೆಹಲಿಗೆ ಹೋಗಿ ನಮ್ಮ ನಾಯಕರನ್ನು ಭೇಟಿ ಮಾಡಲು ಬಯಸಿದ್ದೆ. ಆದರೆ, “ಬಿಹಾರದಲ್ಲಿ ಸರಕಾರ ರಚನೆಯಾದ ನಂತರ ನೀವು ದೆಹಲಿಗೆ ಬರಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದ ನಂತರ, ನಾವೇ ನಿಮಗೆ ಫೋನ್ ಮಾಡುತ್ತೇವೆ. ಇದಾದ ನಂತರ ದೆಹಲಿಗೆ ಬನ್ನಿ ಎನ್ನುವ ಉತ್ತರ ನಮ್ಮ ಹೈಕಮಾಂಡ್ ನಿಂದ ಬಂದಿದೆ”ಎಂದು ಹೇಳಿದರು.

ದೊಡ್ಡ ಮಟ್ಟದಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆಂದು ಇದ್ದೇನೆ. ಸಂಪುಟ ಪುನರ್ ರಚನೆಯೋ ಅಥವಾ ಸಂಪುಟ ವಿಸ್ತರಣೆ ಯೋ ಎನ್ನುವುದು ವರಿಷ್ಠರಿಗೆ ಬಿಟ್ಟ ವಿಚಾರ”ಎಂದು ಯಡಿಯೂರಪ್ಪ ಹೇಳಿದ್ದರು.