Friday, 25th October 2024

ಬಸ್‌ಗೇ ಅಧಿಕಾರಿಗಳೇ ಚಾಲಕ, ನಿರ್ವಾಹಕ

ವಿಶೇಷ ವರದಿ: ವಿರೂಪಾಕ್ಷಯ್ಯ ಪಂ.ಹಿರೇಮಠ

ಬೀಳಗಿ: ಸಾರಿಗೆ ನೌಕರರು 6 ನೇ ವೇತನ ಜಾರಿಗೆ ತರಬೇಕೆಂದು 6 ದಿನಗಳಿಂದ ಮುಷ್ಕರ ನಡೆಸಿ, ಕೆಲಸಕ್ಕೆ ಹಾಜರಾಗದೇ
ಇರುವುದರಿಂದ ಅಧಿಕಾರಿಗಳು ತಾವೇ ಚಾಲಕ ನಿರ್ವಾಹಕರಾಗಿ ಬೀಳಗಿ ಬಸ್ ನಿಲ್ದಾಣದಿಂದ ಜಮಖಂಡಿವರೆಗೆ ಬಸ್ ಸಂಚರಿಸಿದ ಘಟನೆ ಜರುಗಿದೆ.

ಸಾರಿಗೆ ನೌಕರರ ಗೌರವಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿಯವರು ಇಂದು ರಾಜ್ಯಾದ್ಯಂತ ತಟ್ಟೆ, ಲೋಟಾ ಹಿಡಿದು ಕುಟುಂಬ ಸಮೇತ ತಹಸೀಲ್ದಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವಂತೆ ಆದೇಶ ನೀಡಿ ದರೂ ಬೀಳಗಿಯಲ್ಲಿ ಸಾರಿಗೆ ನೌಕರರು ಯಾವುದೇ ಪ್ರತಿಭಟನೆ ನಡೆಸಲಿಲ್ಲ.

ಬಾಗಲಕೋಟ ಹಾಗೂ ಬೀಳಗಿ ಘಟಕಗಳ ಎರಡು ಬಸ್ ಗಳು ಮುಂಬಡ್ತಿ ಪಡೆದ ಸಾರಿಗೆ ನಿಯಂತ್ರಕರನ್ನು ಮೇಲಾಧಿಕಾರಿಗಳು ಒತ್ತಾಯಪೂರ್ವಕವಾಗಿ ಬಸ್ ಓಡಿಸುವ ಪರಿಸ್ಥಿತಿಯನ್ನು ತಂದೊಡಿದ್ದಾರೆ ಎಂದು ಹೆಸರು ಹೇಳಲು ಹಿಂಜರೆದ ಸಾರಿಗೆ ನಿಯಂತ್ರಕರೊಬ್ಬರು ವಿಶ್ವವಾಣಿಯೊಂದಿಗೆ ಮಾತನಾಡಿ ವಿಷಯ ತಿಳಿಸಿದರು.

ಬೀಳಗಿ ಘಟಕದ ಸಾರಿಗೆ ವ್ಯವಸ್ಥಾಪಕ ಅಶೋಕ ಕೋರಿ ಮಾತನಾಡಿ, ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುವುದಾಗಿ ದೂರವಾಣಿ ಮೂಲಕ ನಮಗೆ ಭರವಸೆ ನೀಡಿದ್ದು ,ನಾಳೆ ಕರ್ತವ್ಯಕ್ಕೆ ಕಾರ್ಮಿಕರು ಹಾಜರಾಗುವ ವಿಶ್ವಾಸ ವ್ಯಕ್ತಪಡಿಸಿದರು.