Thursday, 12th December 2024

ಆರ್ಟ್‌ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ 15 ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಣೆ

ಪಾವಗಡ: ಬೆಂಗಳೂರಿನ ಆರ್ಟ್‌ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ 15 ಆಕ್ಸಿಜನ್ ಕಾನ್ಸಂಟ್ರೇಟರ್ ಪಾವಗಡ ಸರ್ಕಾರಿ ಆಸ್ಪತ್ರೆಗೆ ಉಚಿತವಾಗಿ ನೀಡಿದ್ದರು.
ಈ ಸಂದರ್ಭದಲ್ಲಿ ಆರ್ಟ್‌ ಆಫ್ ಲಿವಿಂಗ್‌ ನ ಜೋನಲ್ ಸದಸ್ಯರಾದ ಕೃಷ್ಣನಾಯ್ಕ್ ಹಾಗೂ ನಾಗರಾಜ್ ಗಂಗೂಲಿಯವರ ಪ್ರಸ್ತಾಪದ ಮೇರೆಗೆ ಪಾವಗಡ ತಾಲೂಕಿನ ಕೋವಿಡ್ ಪ್ರಕರಣಗಳು ದಿನೆ ದಿನೆ ಹೆಚ್ಚಾಗುತ್ತಿರುವ ಕಾರಣ ಈ ಭಾಗದಲ್ಲಿ ಯಾರು ಮೃತಪಟ್ಟ ಬಾರದು ಎಂಬ ಉದ್ದೇಶ ದಿಂದ ಆರ್ಟ ಆಪ್ ಲಿವಿಂಗ್‌ ಸಂಸ್ಥಾಪಕ ರಾದ ಗುರೂಜಿ ರವರ ಗಮನಕ್ಕೆ ತಂದ ಕೂಡಲೇ ಒಂದು ಅಕ್ಸಿಜನ್ ಬೆಲೆ ಒಂದುವರೆ ಲಕ್ಷ ಬೆಲೆ ಬಾಳುವ 15 ಅಕ್ಸಿಜನ್ ಕಾನ್ಸಂಟ್ರೇಟರ್ ಗಳು ಸರ್ಕಾರಿ ಆಸ್ಪತ್ರೆಗೆ ಕೊಡುಗೆ ಯಾಗಿ ನೀಡಲಾಯಿತು.
ಕೃಷ್ಣನಾಯ್ಕ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಅಕ್ಸಿಜನ್ ಸಮಸ್ಯೆ ಯಿಂದ ಬಳಲುತ್ತಿರುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಅಗಬಾರದು ಎಂಬ ಉದ್ದೇಶ ದಿಂದ ಆರ್ಟ್‌ ಆಫ್ ಲಿವಿಂಗ್‌ ಸಂಸ್ಥೆ ಯ ಸ್ವಾಮೀಜಿ ಯವರು ಕೊಡುಗೆ ಯಾಗಿ ನೀಡಿದ್ದಾರೆ. ಅವರಿಗೆ ತಾಲ್ಲೂಕಿನ ಜನತೆ ಪರವಾಗಿ ಧನ್ಯವಾದಗಳು ಅರ್ಪಣೆ ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಇನ್ನು ಅನೇಕ ರೀತಿಯಲ್ಲಿ ಸಹಾಯಹಸ್ತ ನೀಡುವುದಾಗಿ ಭರವಸೆ ನೋಡಿದ್ದಾರೆ.
ಈ ವೇಳೆ ತಹಸೀಲ್ದಾರ್ ಕೆ.ಆರ್.ನಾಗರಾಜ್, ಕಿಸಾನ್ ಸಂಘದ ಅಧ್ಯಕ್ಷರಾದ ನಾಗಭೂಷಣ ರೆಡ್ಡಿ, ಸಣ್ಣನಾಗಪ್ಪ, ಇಒ ಶಿವರಾಜ್,
ತಾಲ್ಲೂಕು ವೈದ್ಯಾಧಿಕಾರಿ ತಿರುಪತಯ್ಯ, ಡಾ.ಕಿರಣ್ , ವೆಂಕಟಪುರ ವೆಂಕಟರಾಮರೆಡ್ಡಿ, ಗುಡ್ಲಹಳ್ಳಿ ರಮೇಶ್, ಕೀರ್ತಿನಾಯ್ಕ್ ಇತರರು ಇದ್ದರು.