Sunday, 15th December 2024

ಪ್ರಗತಿಪರ ಚಿಂತಕ ಪ.ಮಲ್ಲೇಶ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಇಂಡಿ: ಬ್ರಾಹ್ಮಣ ಮತ್ತು ಬ್ರಾಹ್ಮಣಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ವಿಪಕ್ಷದ ನಾಯಕ ಸಿದ್ದರಾಮಯ್ಯ ನವರು ಇದ್ದ ಸಭೆಯಲ್ಲಿ ಸಾರ್ವಜನಿಕವಾಗಿ ಆಕ್ಷೇಪ ಮತ್ತು ಆಶ್ಲೀಲವಾಗಿ ಮಾತನಾಡಿರುವ ಪ್ರಗತಿಪರ ಚಿಂತಕ ಪ.ಮಲ್ಲೇಶ ವಿರುಧ್ಧ ಕ್ರಮ ಕೊಳ್ಳುವಂತೆ ಒತ್ತಾಯಿಸಿ ಇಂಡಿ ತಾಲೂಕಿನ ಬ್ರಾಹ್ಮಣ ಸಮುದಾಯದವರು ಶುಕ್ರವಾರ ಮಿನಿ ವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು.

ನ್ಯಾಯವಾದಿ ಸತೀಶ ಕುಲಕರ್ಣಿ ಮಾತನಾಡಿ ಪ.ಮಲ್ಲೇಶರವರು ವೇದ ಮತ್ತು ಉಪ ನಿಷತ್ತುಗಳ ಬಗ್ಗೆ ಕೆಟ್ಟ ಅಭಿರುಚಿಯಿಂದ ಲಘುವಾಗಿ ಮಾತನಾಡಿದ್ದಾರೆ. ಮಠಾಧೀಶ ರನ್ನು ಕೂಡ ಅವಹೇಳನ ಮಾಡಿರುವ ಅವರ ವಿರುದ್ಧ ಕ್ರಮ ಕೈ ಕೊಳ್ಳುವಂತೆ ಕಂದಾಯ ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಕೃಷ್ಣಾ ಆದ್ಯ ಮಾತನಾಡಿ ಪ. ಮಲ್ಲೇಶ ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ ಇವರಿಂದ ದೇಶ ನಾಶವಾಗುತ್ತಿದೆ ಎಂದು ತನ್ನ ನಾಲಿಗೆ ಹರಿಯ ಬಿಟ್ಟಿದ್ದು ಈ ವಿವಾದಿತ ಹೇಳಿಕೆಯಿಂದ ಸಮಸ್ತ ಬ್ರಾಹ್ಮಣ ಸಮುದಾಯಕ್ಕೆ ನೋವು ಉಂಟಾಗಿದೆ.

ಆದ್ದರಿ0ದ ಆತನ ಹೇಳಿಕೆ ಖಂಡಿಸಿ ಅವರ ಮೇಲೆ ಕ್ರಮ ಕೈಕೊಳ್ಳುವಂತೆ ಸರಕಾರಕ್ಕೆ ಆಗ್ರಹಿಸಿದರು. ಭೀಮನಗೌಡ ಬಿರಾದಾರ ಹಿರೆಬೇವನೂರ ಮಾತನಾಡಿದರು.

ಪ್ರತಿಭಟನೆಯಲ್ಲಿ ವೇಂಕಟೇಶ ಕುಲಕರ್ಣಿ, ವಕೀಲರಾದ ಜಿ.ಎಸ್.ಜೋಶಿ, ಎ.ಆರ್.ಕುಲಕರ್ಣಿ ,ಅಶೋಕ ಕುಲಕರ್ಣಿ, ಎನ್.ಕೆ.ನಾಡಪುರೋಹಿತ, ಪ್ರಸನ್ನ ದೇಶಪಾಂಡೆ, ಜಗಧೀಶ ಪಾಟೀಲ ,ಆನಂದ ಕುಲಕರ್ಣಿ, ಎಸ್.ಬಿ.ಕುಲಕರ್ಣಿ, ಕೃಷ್ಣ ಚಟ್ಟರಕಿ, ರವೀಂದ್ರ ಕುಲಕರ್ಣಿ, ಭೀಮ ಕುಲಕರ್ಣಿ, ರಾಘು ಹಳ್ಳಿ, ಅನೀಲ ಶೇಖದಾರ, ಶ್ರೀನಿವಾಸ ದೇಶಪಾಂಡೆ, ಶಿವ ಚದಂಬರ ಕುಲಕರ್ಣಿ, ದತ್ತಾ ಕುಲಕರ್ಣಿ, ಪಿ.ಜಿ.ನಾಡಗೌಡ, ಕೃಷ್ಣ ಕುಲಕರ್ಣಿ,ಸಂಕೇತ ಜೋಶಿ, ಆನಂದ ಕುಲಕರ್ಣಿ ಸೇರಿದಂತೆ ಮತ್ತಿತರರು ಇದ್ದರು.