-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೊಟ್ಟ ಮೊದಲ ಬಾರಿಗೆ ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ (Paris Fashion Week) ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ರ‍್ಯಾಂಪ್ ವಾಕ್ ಮಾಡಿದರು. ಇದುವರೆಗೂ ನಾನಾ ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್ ವೀಕ್‌ಗಳಲ್ಲಿ ರ‍್ಯಾಂಪ್ ವಾಕ್ ಮಾಡಿದ್ದ ಆಲಿಯಾ ಭಟ್, ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ, ಇದುವರೆಗೂ ಕಾಣಿಸಿಕೊಂಡಿರಲಿಲ್ಲ. ಈ ಸಾಲಿನಲ್ಲಿ ಪ್ರತಿಷ್ಠಿತ ಲಾ’ರಿಯಾಲ್ ಬ್ರಾಂಡ್‌ನ ಬ್ರಾಂಡ್ ಅಂಬಾಸಡರ್ ಆಗಿ ಪ್ರತಿನಿಧಿಸಿರುವ ಆಲಿಯಾ, ಸೆಲೆಬ್ರಿಟಿ ಡಿಸೈನರ್ ಗೌರವ್ ಗುಪ್ತಾ ಅವರ ಕ್ರಿಯೇಷನ್‌ನ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡು ರ‍್ಯಾಂಪ್ ವಾಕ್ (Ramp Walk) ಮಾಡಿ, ಫ್ಯಾಷನ್ ಪ್ರಿಯರ ಮನ ಗೆದ್ದರು.
ಆಲಿಯಾ ಭಟ್ ಲುಕ್ ಹೇಗಿತ್ತು?
ಮಾಡರ್ನ್ ವೆಸ್ಟರ್ನ್ ಲುಕ್ ನೀಡುವ ಕಾರ್ಸೆಟ್ ಶೈಲಿಯ ಆಫ್ ಶೋಲ್ಡರ್‌ನ ಮೆಟಲ್ ಮಾದರಿಯ ಬ್ರೆಸ್ಟ್ ಪ್ಲೇಟ್ ಧರಿಸಿದ್ದ ಆಲಿಯಾ ಭಟ್, ಅದಕ್ಕೆ ಬ್ಲ್ಯಾಕ್ ವೆಲ್ವೆಟ್ ಪ್ಯಾಂಟ್ ಮ್ಯಾಚ್ ಮಾಡಿದ್ದರು. ಕಾಚರ್ ಕಲೆಕ್ಷನ್ ಅರುಣೋದಯ ಕ್ರಿಯೇಷನ್‌ನಲ್ಲಿ ಡಿಸೈನರ್ ಗೌರವ್ ಗುಪ್ತಾ ಅವರು ಇದನ್ನು ಡಿಸೈನ್ ಮಾಡಿದ್ದರು.
ಗ್ಲೊಯಿಂಗ್ ಆಲಿಯಾ ಮೇಕಪ್
ಬ್ಲ್ಯಾಕ್ ಪಂಪ್ ಹೀಲ್ಸ್‌ನೊಂದಿಗೆ ಸ್ಟೇಟ್‌ಮೆಂಟ್ ಡ್ಯಾಂಗ್ಲಿಂಗ್ ಇಯರಿಂಗ್ಸ್, ಫಿಂಗರ್‌ರಿಂಗ್ಸ್ ಧರಿಸಿದ್ದರು. ಕಣ್ಣಂಚಿನಲ್ಲಿ ಪಿಂಕ್ ಶೇಡ್ ಸುತ್ತಲೂ ಸಿಲ್ವರ್ ಐ ಶ್ಯಾಡೋ ಮೇಕಪ್ ಮಿನುಗುತ್ತಿತ್ತು. ಇನ್ನು ಅವರ ಪಿಂಕ್ ಲಿಪ್‌ಸ್ಟಿಕ್, ಮೇಕಪ್‌ಅನ್ನು ಅತ್ಯಾಕರ್ಷಕವಾಗಿಸಿತ್ತು.
ಫ್ಯಾಷನಿಸ್ಟ್‌ಗಳ ರಿವ್ಯೂ
ಹೈ ರೈಸ್ ಫ್ಲೇರ್ ವೆಲ್ವೆಟ್ ಪ್ಯಾಂಟ್‌ಗೆ ಅಸ್ಸೆಮ್ಮಿಟ್ರಿಕಲ್ ಕಾರ್ಸೆಟ್ ಶೈಲಿಯ ಮೆಟಲ್ ಪ್ಲೇಟ್ ಸ್ಟ್ರಾಪ್‌ಲೆಸ್ ಟಾಪ್, ಆಲಿಯಾಗೆ ಹಾಲಿವುಡ್ ನಟಿಯರ ಲುಕ್ ನೀಡಿದೆ ಎಂದು ಫ್ಯಾಷನಿಸ್ಟ್ ರಯಾನ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು, ಸ್ಟೈಲಿಸ್ಟ್ ಜಿಯಾನ್ ಪ್ರಕಾರ, ಆಲಿಯಾರ ಈ ಸ್ಟೈಲಿಂಗ್ ಅವರನ್ನು ಮತ್ತಷ್ಟು ಯಂಗ್ ಆಗಿ ಬಿಂಬಿಸಿದೆಯಂತೆ.
ಈ ಸುದ್ದಿಯನ್ನೂ ಓದಿ | New Fashion: ಮ್ಯಾಗ್ನೆಟಿಕ್ ಸ್ಟಡ್ಸ್, ಇಯರ್ ರಿಂಗ್ಸ್; ಹೊಸ ಜನರೇಶನ್ ಹುಡುಗರ ಮೆಚ್ಚಿನ ಆಯ್ಕೆ!
ಡಿಸೈನರ್ ಗೌರವ್ ಗುಪ್ತಾ ಪ್ರಶಂಸೆ
ಈ ಲುಕ್ ಈ ಜನರೇಷನ್‌ನ ಯಂಗ್‌ಸ್ಟರ್ಸ್‌ಗೆ ಇಷ್ಟವಾಗಿದ್ದು, ಆಲಿಯಾಗೆ ನೆಟ್ಟಿಗರಿಂದ ಪ್ರಶಂಶೆಯ ಸುರಿಮಳೆಯಾಗಿದೆ. ಬಾಲಿವುಡ್ ನಟಿಯಾಗಿರುವ ಆಲಿಯಾ ರ‍್ಯಾಂಪ್ ಮೇಲೂ ಪ್ರೊಫೆಷನಲ್ ಮಾಡೆಲ್‌ನಂತೆಯೇ ಕಾಣಿಸುತ್ತಾರೆ. ಅಷ್ಟೊಂದು ಚೆನ್ನಾಗಿ ಈ ಔಟ್‌ಫಿಟ್ ಕ್ಯಾರಿ ಮಾಡಿದ್ದಾರೆ ಎಂದು ಡಿಸೈನರ್ ಗೌರವ್ ಗುಪ್ತಾ ಹಾಡಿ ಹೊಗಳಿದ್ದಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)