Saturday, 14th December 2024

ಪಾವಗಡ ಆರ್ಯ ಈಡಿಗರ ಸಂಘ: ನೂತನ ಅಧ್ಯಕ್ಷ ಬೂತ ಬೆಟ್ಟ ವೀರಾಜಿನೇಯ ಆಯ್ಕೆ

ಪಾವಗಡ:  ತಾಲ್ಲೂಕು ಆರ್ಯ ಈಡಿಗರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಭಾನುವಾರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದರು.

ನೂತನ ಅಧ್ಯಕ್ಷ ಬೂತಬೆಟ್ಟ ವೀರಾಜಿನೇಯ ಮಾತನಾಡಿ, ನಮ್ಮ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವುದು ಮುಖ್ಯ ಉದ್ದೇಶ ವಾಗಿದೆ.ತಾಲೂಕಿನಲ್ಲಿ ನಾಲ್ಕು ಸಾವಿರ ಜನರಿದ್ದು ಸಮುದಾಯದ ಮಕ್ಕಳಿಗೆ ವಸತಿ ನಿಲಯದ ವ್ಯವಸ್ಥೆ ಮಾಡಲಾಗಿದೆ.ನಮ್ಮ ಸಮುದಾಯ ಮಕ್ಕಳು ಉನ್ನತ ಮಟ್ಟದಲ್ಲಿ ವ್ಯಾಸಂಗ ಮಾಡಬೇಕಾದರೆ ಆರ್.ಎಲ್.ಜಾಲಪ್ಪರವರ ಸಂಸ್ಥೆಯಲ್ಲಿ ಉಚಿತವಾಗಿ ವ್ಯಾಸಂಗ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ ಅಲ್ಲಿ ಸಮುದಾಯದ ಮಕ್ಕಳು ಹೋಗಿ ಸವಲತ್ತು ಗಳನ್ನು ಪಡೆಯಬಹುದಾಗಿದೆ.

ಪ್ರಧಾನ ಕಾರ್ಯದರ್ಶಿ ತಾಳೆಮರದಹಳ್ಳಿ ಅಂಜನೇಯ ಮಾತನಾಡಿ ಹಿರಿಯರು ಎಲ್ಲರೂ ಸೇರಿ ನನ್ನಗೆ ಹುದ್ದೆ ನೀಡಿದ್ದರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಯಾವುದೇ ತರಹದ ಸಮುದಾಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸಮುದಾಯದ ಹೇಳಿಗೆಗೆ ಹೆಚ್ಚು ಹೊತ್ತು ನೀಡಿ ಕೆಲಸ ಮಾಡುತ್ತೇನೆ ಎಂದರು.

ನೂತನ ಪದಾಧಿಕಾರಿಗಳ ಪಟ್ಟಿ ಹೀಗಿದೆ. ಗೌರವ ಅಧ್ಯಕ್ಷರಾಗಿ ಸೋಮಶೇಖರಪ್ಪ.ಅರ್.ಮಹೇಶ್.ಇ.ರಾಮಪ್ಪ, ಉಪಾಧ್ಯಕ್ಷ ರಾಗಿ ಇ.ರಾಮಾಜಿನೇಯ, ಗಂಗಾಧರ್.ಎನ್.ಮೂರ್ತಿ, ಶಿವಕುಮಾರ್, ಖಜಾಂಚಿಯಾಗಿ ಹನುಮೇಶ್, ಜಂಟಿ ಕಾರ್ಯದರ್ಶಿಯಾಗಿ ಸೋಮಶೇಖರ್ ಹಾಗೂ ಮಹಿಳಾ ಪ್ರತಿನಿಧಿ ಆಲ್ಲವೇಲಮ್ಮ ಇತರರು ಇದ್ದರು.