Tuesday, 22nd October 2024

Pavagada News: ಪಾವಗಡ ಪುರಸಭೆಗೆ ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿದ ಸರ್ಕಾರ

ಪಾವಗಡ: ಪಾವಗಡ ಪುರಸಭೆಗೆ ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ, 1964ರ ಪ್ರಕರಣ 11(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಐವರನ್ನು ಪಾವಗಡ ಪುರಸಭೆಗೆ (Pavagada News) ಸದಸ್ಯರನ್ನಾಗಿ ಸರ್ಕಾರವು ನಾಮ ನಿರ್ದೇಶನ ಮಾಡಿ ಆದೇಶಿಸಿದೆ.

1.ಶ್ರೀನಿವಾಸ ಪ್ರಸಾದ್ ಬಿನ್ ಉಗ್ರನರಸಿಂಹಪ್ಪ, ಎಂ.ಎ.ಆರ್. ಲೇಔಟ್, 17ನೇ ವಾರ್ಡ್, ಪಾವಗಡ ಟೌನ್, ಪಾವಗಡ ತಾಲೂಕು

2.ಪಿ.ಎನ್.ರಾಮಲಿಂಗ ಬಿನ್ ನಾರಾಯಣಪ್ಪ, ಗುಟ್ಟಹಳ್ಳಿ, 6ನೇ ವಾರ್ಡ್, ಪಾವಗಡ ಟೌನ್, ಪಾವಗಡ ತಾಲೂಕು

3.ರಾಮಾಂಜಪ್ಪ ಬಿನ್ ನರಸಪ್ಪ, ಶಾಂತಿನಗರ, 16ನೇ ವಾರ್ಡ್, ಪಾವಗಡ ಟೌನ್, ಪಾವಗಡ ತಾಲೂಕು

4.ಎಸ್.ಎ.ಗಂಗಾಧರ ಬಿನ್ ಅಶ್ವತ್ಥನಾರಾಯಣಪ್ಪ, ಟೀಚರ್ಸ್ ಕಾಲೋನಿ, ರೊಪ್ಪ ಬಡಾವಣೆ, 2ನೇ ವಾರ್ಡ್. ಪಾವಗಡ ಟೌನ್, ಪಾವಗಡ

5.ಮೊಹಮದ್ ರಿಯಾಜ್ ಉಲ್ಲಾ ಬಿನ್ ಮೊಹಮದ್ ಖಲೀಂ ಉಲ್ಲಾ, ಕೃಷ್ಣಪ್ಪ ಲೇಔಟ್, ಪಾವಗಡ ಟೌನ್

ಈ ಸುದ್ದಿಯನ್ನೂ ಓದಿ | HD Kumaraswamy: ಚನ್ನಪಟ್ಟಣ ಟಿಕೆಟ್ ವಿಷಯಕ್ಕೆ ನೆಲದವರೆಗೂ ಬಗ್ಗಿದ್ದೇನೆ, ಇನ್ನೂ ಬಗ್ಗಲು ನನ್ನಿಂದ ಸಾಧ್ಯವಿಲ್ಲ ಎಂದ ಕುಮಾರಸ್ವಾಮಿ