Friday, 15th November 2024

Physical Abuse: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ; ಕಲಬುರಗಿಯಲ್ಲಿ ಹೀನ ಕೃತ್ಯ!

Physical Abuse: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವೃದ್ಧ; ಕಲಬುರಗಿಯಲ್ಲಿ ಹೀನ ಕೃತ್ಯ!

ಕಲಬುರಗಿ: 15 ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಪಟ್ಟಣದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯ ಮೇಲೆ ವೃದ್ಧ ಹೀನ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಗೋರಕ್ ನಾಥ ಚೌವ್ಹಾಣ (65) ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ನರೋಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Shraddha Walker murder case: ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ಮುಂದಿನ ಟಾರ್ಗೆಟ್‌ ಅಫ್ತಾಬ್ ಪೂನಾವಾಲಾ!

ಅಪರಿಚಿತ ವಾಹನ-ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರ ದುರ್ಮರಣ

ಬಳ್ಳಾರಿ: ಅಪರಿಚಿತ ವಾಹನ ಹಾಗೂ ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟು, ಒಬ್ಬರು ಗಾಯಗೊಂಡಿರುವ ಘಟನೆ (Bike Accident) ಬಳ್ಳಾರಿಯಲ್ಲಿ ನಡೆದಿದೆ. ಇಮ್ರಾನ್ (23), ಕಲಂ ಸಾಬ್ (19) ಮೃತರು. ಗಾಯಗೊಂಡಿರುವ ಶೇಕ್ ಜೊಸಿಂ ಎಂಬಾತನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ್ಯುವೆಲ್ಲರಿ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರು ಬೈಕ್‌ನಲ್ಲಿ ಕೆಲಸಕ್ಕಾಗಿ ತೆಕ್ಕಲಕೋಟೆಯಿಂದ ಸಿರಗುಪ್ಪ ಕಡೆಗೆ ತೆರಳುತ್ತಿದ್ದರು. ಕೆಲಸಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ.

ಮುನಿರತ್ನ ‘ಹನಿಟ್ರ್ಯಾಪ್’ ತನಿಖೆ, ಪೊಲೀಸ್ ಇನ್‌ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಬಂಧನ

munirathna aiyanna reddy

ಬೆಂಗಳೂರು : ಬಿಜೆಪಿ ಶಾಸಕ ಮುನಿರತ್ನ (Munirathna) ವಿರುದ್ಧದ ಅತ್ಯಾಚಾರ (Physical Abuse) ಹಾಗೂ ಹನಿಟ್ರ್ಯಾಪ್‌ (Honey Trap) ಆರೋಪ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಆಗಿದ್ದು, ಪ್ರಕರಣದ ಸಂಬಂಧ ಪೊಲೀಸ್​ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಎಂಬವರನ್ನು (Bengaluru crime news) ಬಂಧಿಸಲಾಗಿದೆ.

ಇನ್ಸ್ ಪೆಕ್ಟರ್ ಅಯ್ಯಣ್ಣ ರೆಡ್ಡಿ ಬಂಧನವನ್ನು ಎಸ್‌ಐಟಿ ಮೂಲಗಳು ಖಚಿತಪಡಿಸಿವೆ. ಹನಿಟ್ರ್ಯಾಪ್‌ಗೆ ಸಹಕರಿಸಿದ ಆರೋಪದ ಮೇಲೆ ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಸಿಐಡಿ ವಿಶೇಷ ತನಿಖಾ ದಳ (ಎಸ್‌ಐಟಿ) ಪೊಲೀಸರು ಗುರುವಾರ (ನ.14) ಬಂಧಿಸಿ, ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Kanhaiya Kumar: ಮಾಜಿ ಸಿಎಂ ಫಡ್ನವೀಸ್‌ ಪತ್ನಿ ಬಗ್ಗೆ ಕಮೆಂಟ್‌; ವಿವಾದದ ಕಿಡಿ ಹೊತ್ತಿಸಿದ ಕನ್ಹಯ್ಯಾ ಕುಮಾರ್ ಹೇಳಿಕೆ

ಹನಿಟ್ರ್ಯಾಪ್‌ಗೆ ಇನ್‌ಸ್ಪೆಕ್ಟರ್ ನೆರವು ನೀಡಿದ್ದರು. ಅಲ್ಲದೆ, ಪ್ರಕರಣದ ಆರೋಪಿಗಳು ಕೆಲ ರಾಜಕಾರಣಿಗಳಿಗೆ ಏಡ್ಸ್‌ ಚುಚ್ಚುಮದ್ದು ಪ್ರಯೋಗಿಸಲು ಸಂಚು ರೂಪಿಸಿದ್ದು ಗೊತ್ತಿದ್ದರೂ, ಮಾಹಿತಿ ಮುಚ್ಚಿಟ್ಟಿದ್ದರು ಎಂದು ಹೇಳಲಾಗಿದೆ. ಮುನಿರತ್ನ ವಿರುದ್ದದ ಅತ್ಯಾಚಾರ, ಹನಿಟ್ರ್ಯಾಪ್ ಪ್ರಕರಣದ ಸಂತ್ರಸ್ತೆ ಮತ್ತು ಬಿಬಿಎಂಪಿ ಸದಸ್ಯ ವೇಲುನಾಯ್ಕರ್ ಅವರನ್ನು ಕೆಲ ದಿನಗಳ ಹಿಂದೆ ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಒಳಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ಪಡೆದಿದ್ದರು. ಆ ಮಾಹಿತಿ ಆಧರಿಸಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.