Tuesday, 19th November 2024

Physical abuse: ಸಾಲ ತೀರಿಸಿಲ್ಲ ಎಂದು ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಬೆಂಗಳೂರಲ್ಲಿ ಮತ್ತೊಂದು ಹೀನ ಕೃತ್ಯ!

Physical abuse

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಮತ್ತೊಂದು ಹೀನ ಕೃತ್ಯ ನಡೆದಿದ್ದು, ಹಾಡಹಗಲೇ 17 ವರ್ಷದ ಬಾಲಕಿಯ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ (Physical abuse) ಎಸಗಿರುವುದು ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಆರೋಪಿ ಪೊಲೀಸರರು ಬಂಧಿಸಿದ್ದಾರೆ.

ರವಿಕುಮಾರ್ (39) ಬಂಧಿತ ಆರೋಪಿ. ಸಂತ್ರಸ್ತ ಬಾಲಕಿಯ ತಂದೆ ಆರೋಪಿಯ ಬಳಿ 70,000 ಹಣ ಪಡೆದಿದ್ದ ಎನ್ನಲಾಗಿದೆ. ಈ ಹಿಂದೆ 30 ಸಾವಿರ ರೂಪಾಯಿಯನ್ನು ಬಾಲಕಿಯ ತಂದೆ ಸಾಲವನ್ನು ತೀರಿಸಿದ್ದ. ಇನ್ನುಳಿದ 40,000 ಜತೆಗೆ ಬಡ್ಡಿ ಹಣ ನೀಡದಿದ್ದಕ್ಕೆ ಅರೋಪಿ ಪೀಡಿಸುತ್ತಿದ್ದ ಎನ್ನಲಾಗಿದೆ.

ಬಾಲಕಿಯ ತಂದೆ ಹಣ ವಾಪಸ್ ನೀಡಲು ವಿಳಂಬವಾಗಿದ್ದಕ್ಕೆ ಆರೋಪಿ ರವಿಕುಮಾರ್ ಈ ಹಿಂದೆ ಬಾಲಕಿಗೆ ಬಲವಂತವಾಗಿ ರವಿಕುಮಾರ್ ಕಿಸ್ ಕೊಟ್ಟಿದ್ದ ಎನ್ನಲಾಗಿದೆ. ಮುತ್ತು ಕೊಟ್ಟಿದ್ದನ್ನು ಫೋಟೊ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಇದಾದ ಬಳಿಕ ಯಾರು ಇಲ್ಲದ ವೇಳೆ ಮನೆಗೆ ನುಗ್ಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಬಾಲಕಿ ಮನೆಯವರು ನೀಡಿದ ದೂರಿನ ಮೇರೆಗೆ ಆರೋಪಿ ರವಿ ಕುಮಾರ್‌ನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿ, ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ | Baba Siddique murder : ಎನ್‌ಸಿಪಿ ನಾಯಕ ಸಿದ್ದಿಕಿ ಹತ್ಯೆ ಪ್ರಕರಣ; ಭದ್ರತಾ ಅಧಿಕಾರಿ ಅಮಾನತು

ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು ದಾಖಲು; ಕಾರಣವೇನು?

ಬೆಂಗಳೂರು: ಸ್ಯಾಂಡಲ್‌ವುಡ್‌ ನಿರ್ದೇಶಕ, ನಟ ಗುರುಪ್ರಸಾದ್ ವಿರುದ್ಧ ದೂರು ದಾಖಲಾಗಿದೆ. ಜಯನಗರದ ಟೋಟಲ್ ಕನ್ನಡ ಮಳಿಗೆ ಮಾಲೀಕ ಲಕ್ಷ್ಮೀಕಾಂತ್ ಅವರು ಗುರುಪ್ರಸಾದ್ (Director Guruprasad) ವಿರುದ್ಧ ಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ʼ ಮಠʼ, ʼಎದ್ದೇಳು ಮಂಜುನಾಥʼ ದಂತಹ ಸಿನಿಮಾಗಳಿಂದ ಖ್ಯಾತಿಯಾದ ನಿರ್ದೇಶಕ ಗುರುಪ್ರಸಾದ್ ವಿರುದ್ಧ ಪುಸ್ತಕ ಮತ್ತು ಸಿಡಿಗಳನ್ನು ಖರೀದಿಸಿ ಹಣ ನೀಡದಿರುವ ಆರೋಪ ಕೇಳಿಬಂದಿದೆ. ಗುರುಪ್ರಸಾದ್‌ 2019ರಲ್ಲಿ ಟೋಟಲ್‌ ಕನ್ನಡ ಮಳಿಗೆಯಲ್ಲಿ ಕನ್ನಡ ಸಾಹಿತ್ಯ ಹಾಗೂ ಸಿನಿಮಾ ಸಂಬಂಧಿತ ಪುಸ್ತಕಗಳನ್ನು ಖರೀದಿ ಮಾಡಿದ್ದರು. ಇದರೊಂದಿಗೆ ಅವರು ಸಾಹಿತ್ಯಕ್ಕೆ ಸಂಬಂಧಿಸಿದ್ದ ಸಿಡಿಗಳನ್ನು ಖರೀದಿ ಮಾಡಿದ್ದರು. ಆದರೆ, ಖರೀದಿಸಿದ್ದ ವಸ್ತುಗಳಿಗೆ ಹಣ ನೀಡಿಲ್ಲ ಎಂದು ಲಕ್ಷ್ಮೀಕಾಂತ್ ಆರೋಪಿಸಿದ್ದಾರೆ.

ತಾವು ತರಬೇತಿ ನೀಡುವ ವಿದ್ಯಾರ್ಥಿಗಳಿಗೆ ಓದಲು ಬೇಕಾದ ನೂರು ಪುಸ್ತಕ ಬೇಕು ಎಂದು ರಿಯಾಯಿತಿ ದರದಲ್ಲಿ ಗುರುಪ್ರಸಾದ್ ಕೇಳಿದ್ದರು. ಅವರು 75 ಪುಸ್ತಕಗಳ ಐದು ಸೆಟ್​ ಖರೀದಿಸಿದ್ದರು. ಒಂದು ಸೆಟ್​ಗೆ 13 ಸಾವಿರದಂತೆ ಐದು ಸೆಟ್ ಪುಸ್ತಕಗಳಿಗೆ 65 ಸಾವಿರ ನೀಡಬೇಕು. ಆದರೆ, ಪುಸ್ತಕ ಮತ್ತು ಸಿಡಿಗಳ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಕರೆ ಮಾಡಿದರೂ ರಿಸೀವ್‌ ಮಾಡುತ್ತಿಲ್ಲ. ಇದಲ್ಲದೆ ಮನೆಯ ವಿಳಾಸ ಕೂಡ ಬದಲಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Sudeep Mother Passed away : ಪತ್ರಿಕಾಗೋಷ್ಠಿ ಕ್ಯಾನ್ಸಲ್; ಸುದೀಪ್ ತಾಯಿ ಕುರಿತು ಲಾಯರ್ ಜಗದೀಶ್ ಮಾರ್ಮಿಕ ಮಾತು