Monday, 18th November 2024

Physical Abuse: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ, ಯುವಕನ ಮೇಲೆ ದೂರು; ಯುವತಿಗೆ ಇದು 2ನೇ ಕೇಸ್!

physical abuse

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ (Physical Abuse) ಎಸಗಿದ ಆರೋಪಿ ವಿರುದ್ಧ ಬೆಂಗಳೂರಿನ (Bengaluru crime news) ಮಡಿವಾಳ ಪೊಲೀಸ್ (Police) ಠಾಣೆಯಲ್ಲಿ ದೂರು ದಾಖಲಾಗಿದೆ. ಯುವತಿ ಈ ಹಿಂದೆ ಇನ್ನೊಬ್ಬನ ಮೇಲೂ ಇದೇ ರೀತಿಯ ದೂರು ನೀಡಿದ್ದು, ಅದನ್ನೂ ರಿಓಪನ್‌ ಮಾಡಲಾಗಿದೆ.

ನಿಹಾಲ್ ಹುಸೇನ್ ಅತ್ಯಾಚಾರ ಎಸಗಿದ ಆರೋಪಿ. ಇದೇ ವರ್ಷ ಮಾರ್ಚ್​ನಲ್ಲಿ ಯುವತಿಗೆ ನಿಹಾಲ್​ ಹುಸೇನ್​ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದಾನೆ.​ ಬಳಿಕ ಇಬ್ಬರೂ ಅನ್ಯೋನ್ಯವಾಗಿ ಸುತ್ತಾಡಲು ಆರಂಭಿಸಿದ್ದಾರೆ. ಒಂದು ದಿನ, ಆರೋಪಿ ನಿಹಾಲ್​ ಹುಸೇನ್​ ಪಾರ್ಟಿಗೆಂದು ಹೋಟೆಲ್​ವೊಂದಕ್ಕೆ ಯುವತಿಯನ್ನು ಕರೆಸಿಕೊಂಡಿದ್ದಾನೆ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ. ಬಳಿಕ ಜ್ಯೂಸ್​ನಲ್ಲಿ ಮದ್ಯ ಬೆರೆಸಿ ಯುವತಿಗೆ ಕುಡಿಸಿದ್ದಾನೆ. ನಂತರ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪಿಸಲಾಗಿದೆ.

ಯುವತಿ ಗರ್ಭವತಿಯಾದ ವಿಚಾರ ತಿಳಿಯುತ್ತಿದ್ದಂತೆ ನಿಹಾಲ್​ ಹುಸೇನ್​​ ಗರ್ಭಪಾತ ಮಾಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ನಂತರ, ಯುವತಿ ಮದುವೆ ಆಗುವಂತೆ ನಿಹಾಲ್​ ಹುಸೇನ್​ಗೆ ಹೇಳಿದ್ದಾಳೆ. ಆದರೆ, ಇದಕ್ಕೆ ಒಪ್ಪದ ನಿಹಾಲ್​ ಹುಸೇನ್​ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಗೆ ಇಳಿದಾಗ, ಮತ್ತೊಂದು ವಿಚಾರ ಬಹಿರಂಗವಾಗಿದೆ. ಯುವತಿ ಇದೇ ರೀತಿ ಮತ್ತೊಬ್ಬ ಯುವಕ ವಿರುದ್ಧ 2023ರಲ್ಲಿ ದೂರು ನೀಡಿದ್ದಳು ಎಂದು ಗೊತ್ತಾಗಿದೆ. ಇಲ್ಲಿಯೂ ಕೂಡ ಯುವತಿ, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಚಾರ ಎಸಗಲಾಗಿದೆ ಎಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಸದ್ಯ ಪೊಲೀಸರು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Physical Harassment: ಅತ್ಯಾಚಾರ ಆರೋಪಿಗೆ ಜಾಮೀನು ಸಿಗಲು ಸಾಕ್ಷ್ಯಾಧಾರ ತಿರುಚಿ ಸಂತ್ರಸ್ತೆಯ ತಂದೆಯಿಂದಲೇ ಸಹಾಯ; ಇಬ್ಬರು ಅರೆಸ್ಟ್‌