Sunday, 24th November 2024

Poland kannada sangha: ಪೋಲೆಂಡ್ ಕನ್ನಡಿಗರಿಗೆ ಕರ್ನಾಟಕ ರಾಜ್ಯೋತ್ಸವದೊಂದಿಗೆ ಕನ್ನಡ ಸಂಘ ಉದ್ಘಾಟನೆ ಸಂಭ್ರಮ

Poland kannada sangha

ವರದಿ: ಸಚಿನ್ ಪಾರ್ಥ

ಪೋಲೆಂಡ್: ಕರ್ನಾಟಕ ರಾಜ್ಯೋತ್ಸವವನ್ನು (Karnataka Rajyotsava) ಪೋಲೆಂಡ್ ಕನ್ನಡಿಗರು (Poland kannada sangha) ಇತ್ತೀಚೆಗೆ ಅದ್ಧೂರಿಯಾಗಿ ಆಚರಿಸಿದರು. ರೊಕ್ಲಾ (Wroclaw) ನಗರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಈ ವಿಶೇಷ ಕಾರ್ಯಕ್ರಮದಲ್ಲಿ “ಪೋಲೆಂಡ್ ಕನ್ನಡಿಗರು” ನೋಂದಾಯಿತ ಕನ್ನಡ ಸಂಘವನ್ನು ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಪೋಲೆಂಡ್ ಕನ್ನಡಿಗರು ಮಾತ್ರವಲ್ಲ ಸಂಪೂರ್ಣ ಯೂರೋಪಿನ ಕನ್ನಡಿಗರನ್ನು ಒಂದಾದರು. ವಿಶೇಷವಾಗಿ ಜರ್ಮನಿಯಿಂದಲೂ ಅನೇಕ ಕನ್ನಡಿಗರು ಕಾರ್ಯಕ್ರಮಕ್ಕೆ ಹಾಜರಾದರು.

ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಂತಾರಾಷ್ಟ್ರೀಯ ಸಂಯೋಜಕರಾದ ಡಾ. ಮುರಳಿ ಮೋಹನ್ ಚುಂಟಾರು, ಖ್ಯಾತ ಕಬಡ್ಡಿ ಆಟಗಾರ್ತಿ ಅನ್ನಾ ಕಾನಿಯೋಕ್ ಮತ್ತು ಅನ್ನಾ ಗಾಜ್ದಮೋವಿಚ್ ಭಾಗವಹಿಸಿದ್ದರು.

Poland kannada sangha

ಮಹೇಶ್ ಜೋಶಿ ಅವರು ಮಾತನಾಡಿ, ಕನ್ನಡವನ್ನು ಮತ್ತು ಅದರ ಸಂಸ್ಕೃತಿಯನ್ನು ಈ ರೀತಿಯಾಗಿ ಪೋಲೆಂಡ್‌ನಂತಹ ದೂರದ ದೇಶದಲ್ಲಿ ನೆನೆಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

Poland kannada sangha

ಕಾರ್ಯಕ್ರಮದಲ್ಲಿ ಗಾಯನ, ನೃತ್ಯ ಮತ್ತು ಹಾಸ್ಯ ಕಾರ್ಯಕ್ರಮಗಳನ್ನು ಪೋಲೆಂಡ್ ಕನ್ನಡಿಗರು ಪ್ರದರ್ಶಿಸಿದರು.

ಹಳೆಯ ಕನ್ನಡ ಹಾಡುಗಳಿಗೆ ಸಮರ್ಪಿಸಿದ ರೇಟ್ರೋ ನೃತ್ಯ ಎಲ್ಲರ ಹೃದಯ ಗೆದ್ದಿತು. ಇದರಲ್ಲಿ 70- 80ರ ದಶಕದ ನೆನಪುಗಳಿಗೆ ಮರುಜೀವ ನೀಡಲಾಯಿತು.

Poland kannada sangha

ಇದರ ಜೊತೆಗೆ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ ಬ್ಯಾಡ್ಮಿಂಟನ್ ಮತ್ತು ಚೆಸ್ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲ ಅತಿಥಿಗಳಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ದೋಸೆ ಸೇರಿದಂತೆ ವಿವಿಧ ಬಗೆಯ ತಿಂಡಿಗಳು, ಭೋಜನ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

No Beggars: ಭಿಕ್ಷುಕರೇ ಇಲ್ಲದ ದೇಶವಿದು! ವಿದೇಶಿಯರ ಪ್ರವೇಶಕ್ಕೂ ಇಲ್ಲಿದೆ ಕಠಿಣ ನಿಯಮ

ಈ ರಾಜ್ಯೋತ್ಸವವು ಕೇವಲ ಇಲ್ಲಿನ ಕನ್ನಡಿಗರಿಗೆ ಹಬ್ಬವಷ್ಟೇ ಅಲ್ಲ, ಪೋಲೆಂಡ್ ಕನ್ನಡಿಗರು ಸಂಘವು ತನ್ನ ಅಧಿಕೃತ ನೆಲೆ ಕಲ್ಪಿಸುವ ಮಹತ್ವದ ಬೆಳವಣಿಗೆಯಾಗಿದೆ. ಸಂಘಟನೆಯು ತನ್ನ ನೋಂದಣಿ, ತೆರಿಗೆ ಗುರುತು ಸಂಖ್ಯೆ ಸೇರಿದಂತೆ ಎಲ್ಲಾ ಅಗತ್ಯ ಅನುಮೋದನೆಗಳನ್ನು ಪಡೆದಿದೆ.