Thursday, 12th December 2024

ಸ್ಲಂ ಬೋರ್ಡ್‌ನಿಂದ ಮಂಜೂರಾದ ಮನೆಗೆ ಸದಸ್ಯ ಎಂ.ಕೆ.ಜಾವೀದ್ ಬುನಾದಿ ಪೂಜೆ

ಹರಪನಹಳ್ಳಿ: ಪಟ್ಟಣದ 7ನೇ ವಾರ್ಡ್ ತೆಲುಗರ ಓಣಿಯಲ್ಲಿ ಸ್ಲಂ ಬೋರ್ಡ್ ನಿಂದ ಮಂಜೂರಾದ ಮನೆಗೆ ಪುರಸಭೆ ಸದಸ್ಯ ಎಂ.ಕೆ.ಜಾವೀದ್ ಅವರು ಬುನಾದಿ ಪೂಜೆ ನೆರವೇರಿಸಿ ಶುಭ ಕೋರಿದರು.

ಪೂಜೆ ನೆರವೇರಿಸಿದ ಬಳಿಕ ಸದಸ್ಯ ಜಾವೀದ್ ಮಾತನಾಡಿ, ನನ್ನ ವಾರ್ಡಿನಲ್ಲಿ ಮೂಲ ಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಶಾಸಕ ಜಿ.ಕರುಣಾಕರ ರೆಡ್ಡಿ ಅವರ ಸಹಕಾರದಿಂದ ವಿವಿಧ ಇಲಾಖೆಗಳ ಅನುದಾನ ಬಳಕೆ ಮಾಡಿಕೊಂಡು ಕುಡಿ ಯುವ ನೀರು, ಚರಂಡಿ, ಸಿಸಿ ರಸ್ತೆಗಳನ್ನು ಮಾಡಲಾಗಿದ್ದು ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿದ್ದೇನೆ ವಾರ್ಡಿನ ಸಂಪೂರ್ಣ ಅಭಿವೃದ್ಧಿ ನಾನು ಸದಾ ಸಿದ್ದನಿದ್ದೇನೆ ಎಂದರು.

ಇದೇ ವಾರ್ಡಿನ (ಜಟ್ ಪಟ್ ನಗರ, ರಹಮತ್ ನಗರ, ಬೈಪಾಸ್ ರಸ್ತೆಯ ಸಮೀಪ ) ಅಂದಾಜು 5ಲಕ್ಷ ರೂ ಮೊತ್ತದಲ್ಲಿ ಸಿಸಿ ರೋಡ್ ಮಂಜೂರು ಆಗಿದ್ದು ಶೀಘ್ರದಲ್ಲೇ ಆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಹೆಚ್.ಎಸ್.ರಹಮತ್ತುಲ್ಲಾ, ಹೆಚ್.ಚಾಂದುಬಾಷಾ, ಪಿ.ಇರ್ಫಾನ್, ಹೆಚ್.ಎಸ್.ಉಮ್ಮರ್ ಸಾಬ್ ಸೇರಿದಂತೆ 7ನೇ ವಾರ್ಡ್ ನಿವಾಸಿಗಳು ಇದ್ದರು.