Saturday, 14th December 2024

ನಂದೀಶ್ವರನಿಗೆ ಹೂವ ಮಾಲೆ ಅರ್ಪಿಸಿ ವಿಶೇಷ ಪೂಜೆ

ಬಸವನಬಾಗೇವಾಡಿ: ಶ್ರೀಶೈಲ ಪೀಠದ ಡಾ, ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾ ರ್ಯ ಸ್ವಾಮೀಜಿಗಳು ಪಾದಯಾತ್ರೆಯು  ಬುಧವಾರ ಪಟ್ಟಣದಿಂದ ಬಿಳ್ಕೊಡುವ ಸಂಧರ್ಭ ದಲ್ಲಿ  ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ನಂದೀಶ್ವರನಿಗೆ ಹೂವ ಮಾಲೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ಬಸವೇಶ್ವರ ಪುತ್ಥಳಿಗೆ ಹೂಮಾಲೆ ಹಾಕಿ ಸಕಲ ವಾದ್ಯ ವೈಭವಗಳೊಂದಿಗೆ ಪಾದ ಯಾತ್ರೆಯು ಹುಣಶ್ಯಾಳ ಮಾರ್ಗವಾಗಿ ಹೂವಿನ ಹಿಪ್ಪರಗಿ ತೆರಳಿತು.

ಈ ಸಂಧರ್ಭದಲ್ಲಿ ಈ ಸಂಧರ್ಭದಲ್ಲಿ ಶಾಸಕ ಶಿವಾನಂದ ಪಾಟೀಲ, ವಿರಕ್ತ ಮಠದ ಸಿದ್ದಲಿಂಗ ಸ್ವಾಮೀಜಿ, ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ,  ಮುಖಂಡ ರಾದ ಐ,ಸಿ ಪಟ್ಟಣಶೆಟ್ಟಿ, ಬಸವರಾಜ ಗೊಳಸಂಗಿ, ಬಸಣ್ಣ ದೇಸಾಯಿ, ಶೇಖರ ಗೊಳಸಂಗಿ, ಸುರೇಶ ಹಾರಿವಾಳ, ಮುರಗೆಪ್ಪಾ ಚಿಂಚೊಳಿ, ಸಂಗಮೆಶ ಒಲೇಕಾರ, ಅಶೋಕ ಹಾರಿವಾಳ, ಸುನೀಲ ದುಂಬಾಳಿ, ಸಂಗಮೆಶ ವಾಡೇದ ಸೇರಿದಂತೆ ಮುಂತಾದವರು ಇದ್ದರು.