Sunday, 24th November 2024

Pralhad Joshi: ಪುರಿ ಜಗನ್ನಾಥ ದೇಗುಲದಲ್ಲಿ 10 ಬ್ಯಾಟರಿ ಚಾಲಿತ ವಾಹನಗಳಿಗೆ ಚಾಲನೆ ನೀಡಿದ ಪ್ರಲ್ಹಾದ್‌ ಜೋಶಿ

Pralhad Joshi

ನವದೆಹಲಿ: ಬ್ಯಾಟರಿ ಚಾಲಿತ ವಾಹನಗಳು ಹಸಿರು ಶಕ್ತಿ ಮತ್ತು ಪರಿಸರ ಸ್ನೇಹಿ ಸಾರಿಗೆಯ ಆಯ್ಕೆಯಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದರು. ಒಡಿಶಾದ ಜಗನ್ನಾಥ ದೇವಸ್ಥಾನದಲ್ಲಿ ಇಂದು 10 ಬ್ಯಾಟರಿ ಚಾಲಿತ ವಾಹನಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜಗನ್ನಾಥಪುರಿಯ ಈ ಐತಿಹಾಸಿಕ ದೇವಾಲಯದಲ್ಲಿ ಬ್ಯಾಟರಿ ಚಾಲಿತ ವಾಹನಗಳ ನಿಯೋಜನೆ ಹಸಿರು ಶಕ್ತಿಗೆ ಕೇಂದ್ರ ಸರ್ಕಾರ ತೋರುತ್ತಿರುವ ಬದ್ಧತೆಗೆ ನಿದರ್ಶನವಾಗಿದೆ ಎಂದು ಪ್ರತಿಪಾದಿಸಿದರು.

ಈ ಸುದ್ದಿಯನ್ನೂ ಓದಿ | BY Vijayendra: ಶಾಸಕರಿಗೆ ಹಣದ ಆಮಿಷ; ಹಗರಣ ಮುಚ್ಚಿಡಲು ಸಿಎಂ ಹೆಣೆದಿರುವ ಸುಳ್ಳಿನ ಕಂತೆ; ವಿಜಯೇಂದ್ರ ಟೀಕೆ

ಭಾರತ, ಪರಿಸರ ಸ್ನೇಹಿ ಸಾರಿಗೆಗೆ ಆದ್ಯತೆ, ಆಯ್ಕೆ ನೀಡುತ್ತದೆ. ಈ ನಿಟ್ಟಿನಲ್ಲಿ IREDA ಸುಸ್ಥಿರ CSR ಯೋಜನೆಗಳನ್ನು ಬೆಂಬಲಿಸುತ್ತದೆ. ರಾಷ್ಟ್ರದ ಹಸಿರು ಮಿಷನ್ ಬಲವರ್ಧನೆಗೆ ಅಚಲವಾದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಐಆರ್‌ಇಡಿಎ (IREDA) ಬ್ಯಾಟರಿ ಚಾಲಿತ ವಾಹನ ಸೌಲಭ್ಯ ಕಲ್ಪಿಸುವ ಮೂಲಕ ದೇವಾಲಯಕ್ಕೆ ಭಕ್ತರ ಭೇಟಿಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ. ಈ ಪರಿಸರ ಸ್ನೇಹಿ ವಾಹನಗಳು ಭಕ್ತರಿಗೆ ಸೌಕರ್ಯದ ಜತೆಗೆ ಸುಸ್ಥಿರತೆಯತ್ತ ಸಾಗಲು ಮತ್ತು ಪರಿಸರ ರಕ್ಷಿಸಲು ನೆರವಾಗಿದೆ ಎಂದು ಅವರು ತಿಳಿಸಿದರು.

ಐಆರ್‌ಇಡಿಎ (IREDA) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕುಮಾರ್ ದಾಸ್ ಅವರು, ಹಸಿರು ಹೈಡ್ರೋಜನ್ ಸುಸ್ಥಿರತೆಗೆ ಕಂಪನಿಯ ಸಮರ್ಪಣೆ ಬಗ್ಗೆ ವಿವರಿಸಿದರು. ಭಾರತ ಪ್ರತಿ ಕ್ಷೇತ್ರದಲ್ಲೂ ಸುಸ್ಥಿರ ಮತ್ತು ನವೀಕರಿಸಬಹುದಾದ ಇಂಧನ ವಿಸ್ತರಿಸುವ ಧ್ಯೇಯ, ಗುರಿ ಹೊಂದಿದೆ ಎಂದು ಹೇಳಿದರು.

ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ ಲಿಮಿಟೆಡ್ (IREDA) ನ CSR ಅಡಿಯಲ್ಲಿ ಒಡಿಶಾದ ಜಗನ್ನಾಥ ದೇವಸ್ಥಾನದಲ್ಲಿ 10 ಬ್ಯಾಟರಿ ಚಾಲಿತ ವಾಹನಗಳಿಗೆ ಸಚಿವ ಪ್ರಲ್ಹಾದ್‌ ಜೋಶಿ ಹಸಿರು ನಿಶಾನೆ ತೋರಿದರು. ಜಗನ್ನಾಥ ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿಗಳಿಗೆ ಸಚಿವ ಪ್ರಲ್ಹಾದ್‌ ಜೋಶಿ ವಾಹನದ ಕೀಗಳನ್ನು ಹಸ್ತಾಂತರಿಸಿದರು. ಅಲ್ಲದೇ, ಪುರಿ ಜಗನ್ನಾಥ ದೇಗುಲದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ | Mukesh Ambani: ವಿಶ್ವದ 100 ಶಕ್ತಿಶಾಲಿ ಉದ್ಯಮಿಗಳ ಫಾರ್ಚೂನ್ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ನಂ.12

ಈ ಸಂದರ್ಭದಲ್ಲಿ ಐಆರ್‌ಇಡಿಎ (IREDA) ಹಣಕಾಸು ವಿಭಾಗದ ನಿರ್ದೇಶಕ ಡಾ. ಬಿ.ಕೆ. ಮೊಹಾಂತಿ ಹಾಗೂ ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಅಧಿಕಾರಿಗಳು ಹಾಗೂ ಐಆರ್‌ಇಡಿಎ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.