Thursday, 21st November 2024

Pralhad Joshi: ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಲಾಗಲ್ಲ ಎಂಬ ಖರ್ಗೆ ಹೇಳಿಕೆಗಿಂತ ಉತ್ತಮ ನಿದರ್ಶನ ಬೇಕೇ?: ಜೋಶಿ ಪ್ರಶ್ನೆ

Pralhad Joshi

ಹುಬ್ಬಳ್ಳಿ: ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎಂಬುದು ಕಾಂಗ್ರೆಸ್‌ಗೆ ಈಗ ಅರಿವಿಗೆ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi)‌ ಲೇವಡಿ ಮಾಡಿದ್ದಾರೆ. ಶಕ್ತಿ ಯೋಜನೆ ನಿಲ್ಲಿಸುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸುಳಿವು ನೀಡಿದ್ದಾಯಿತು. ಈಗ ಖುದ್ದು ಎಐಸಿಸಿ ಅಧ್ಯಕ್ಷರೇ ರಾಜ್ಯ ದಿವಾಳಿ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ. ಅಂತೂ ಕಾಂಗ್ರೆಸ್ ನಾಯಕರಿಗೆ ತಡವಾಗಿ ಆದರೂ ಜ್ಞಾನೋದಯ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಬಜೆಟ್ ಗಾತ್ರ ನೋಡಿಕೊಂಡು ಗ್ಯಾರಂಟಿ ಘೋಷಿಸಬೇಕು. ಒಂದೇ ಆದರೂ ಅರ್ಥ ವ್ಯವಸ್ಥೆ ಅಚ್ಚುಕಟ್ಟಾಗಿ ಇರಬೇಕು. ಐದಾರು ಘೋಷಿಸಿದರೆ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕದಂತಹ ಸ್ಥಿತಿಯಾಗುತ್ತದೆ ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಗ್ಯಾರಂಟಿಗಳಿಂದ ರಾಜ್ಯ ಹಾಳಾಗಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೇ? ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Pralhad Joshi: ಎರಡು ದೇವಸ್ಥಾನಗಳ ಸ್ವಾಧೀನಕ್ಕೆ ವಕ್ಫ್ ಸಮಿತಿಗೆ ಹಾವೇರಿ ಜಿಪಂ ಸಿಇಓ ಆದೇಶ: ಜೋಶಿ ಆಕ್ರೋಶ

ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಲಾಗಲ್ಲ ಎಂಬ ಖರ್ಗೆ ಅವರ ಮಾತು ಗ್ಯಾರಂಟಿಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿವೆ ಎಂಬುದನ್ನು ಸಾರಿ ಹೇಳುವಂತಿದೆ ಎಂದು ತಿಳಿಸಿರುವ ಅವರು, ಚುನಾವಣೆ ಎದುರಿಸುವ ಆವೇಶದಲ್ಲಿ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಸಾಕಾಗಿ ಹೋಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | R Ashok: ವಕ್ಫ್ ವಿವಾದ; ರಾಜ್ಯ ಸರ್ಕಾರದ ವಿರುದ್ಧ ನ. 4 ರಿಂದ ತೀವ್ರ ಹೋರಾಟ: ಆರ್. ಅಶೋಕ್‌

ಗ್ಯಾರಂಟಿಗಳಿಂದ ಕರ್ನಾಟಕದ ಸ್ಥಿತಿ ಗತಿ ಬಗ್ಗೆ ಅರಿತ ಕಾಂಗ್ರೆಸ್ ಪಕ್ಷ ಬೇರೆ ರಾಜ್ಯ ಚುನಾವಣೆಗಳಲ್ಲಿ ಕರ್ನಾಟಕವನ್ನು ಮಾದರಿಯಾಗಿ ಅನುಸರಿಸಲು ಹಿಂಜರಿಯುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಟೀಕಿಸಿದ್ದಾರೆ.