Sunday, 17th November 2024

Pralhad Joshi: ರಾಜ್ಯ ಬಿಜೆಪಿ ನಾಯಕರೆಲ್ಲರೂ ಸೇರಿ ಹೋರಾಟ ರೂಪಿಸಬೇಕು: ಪ್ರಲ್ಹಾದ್‌ ಜೋಶಿ

Pralhad Joshi

ಹುಬ್ಬಳ್ಳಿ: ವಕ್ಫ್‌ ಭೂ ಕಬಳಿಕೆ ವಿರುದ್ಧ ರಾಜ್ಯ ಬಿಜೆಪಿ ನಾಯಕರ ಪ್ರತ್ಯೇಕ ಹೋರಾಟ ಸಲ್ಲದು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ರಾಜ್ಯ ಬಿಜೆಪಿ ಭಿನ್ನರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರೆಲ್ಲರೂ ಒಟ್ಟಿಗೇ ಸೇರಿ ಹೋರಾಟ ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.

ಹಿಂದೂ ಸಮಾಜಕ್ಕೆ ಕಂಟಕ ಬಂದಿದ್ದು, ಇಂತಹ ಸಂದರ್ಭದಲ್ಲಿ ರಾಜ್ಯ ಬಿಜೆಪಿ ತನ್ನ ಹೋರಾಟವನ್ನು ಸಂಘಟನಾತ್ಮಕವಾಗಿ ಕೊಂಡೊಯ್ಯಬೇಕಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru News: ಬರಿಗಾಲಿನ ಕಾರ್ಯಕರ್ತ ಖ್ಯಾತಿಯ ಅಜಯ್ ಒಲಿಗೆ ಸಾಕ್ರ ಆಸ್ಪತ್ರೆಯಿಂದ ಸನ್ಮಾನ

ರಾಜ್ಯಾಧ್ಯಕ್ಷರ ಟೀಂ ಸರಿ ಇದೆ

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷರು ರಚಿಸಿರುವ ತಂಡದಲ್ಲಿ ಎಲ್ಲ ನಾಯಕರೂ ಇದ್ದಾರೆ. ಅದರಂತೆ ಎಲ್ಲ ಪ್ರಮುಖರು ಸೇರಿ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡಬೇಕು. ಬೇರೆ ಬೇರೆ ಟೀಂ ಆಗಿ ಹೋರಾಟ ಮಾಡದಂತೆ ಮನವಿ ಮಾಡುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Bengaluru News: ಬರಿಗಾಲಿನ ಕಾರ್ಯಕರ್ತ ಖ್ಯಾತಿಯ ಅಜಯ್ ಒಲಿಗೆ ಸಾಕ್ರ ಆಸ್ಪತ್ರೆಯಿಂದ ಸನ್ಮಾನ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ತುಷ್ಟೀಕರಣದ ರಾಜಕಾರಣ ಎಲ್ಲೇ ಮೀರಿದೆ. ಅಲ್ಲದೇ, ಸಮಾಜಕ್ಕೆ ಅದರಲ್ಲೂ ಹಿಂದೂ ಸಮಾಜಕ್ಕೆ ಕಂಠಕ ಎದುರಾಗಿದ್ದು, ರಾಜ್ಯ ಬಿಜೆಪಿ ನಾಯಕರೆಲ್ಲ ಒಟ್ಟಾಗಿ ಸೇರಿ ಹೋರಾಟ ನಡೆಸುವುದು ಒಳ್ಳೆಯದು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.