Thursday, 12th December 2024

ಮತದಾರನಿಗೆ ಪ್ರತಾಪಗೌಡ ಮೋಸ ಮಾಡಿದ್ದಾರೆ: ಮಾಜಿ ಸಿಎಂ ಸಿದ್ಧರಾಮಯ್ಯ

ಮಸ್ಕಿ: ಕ್ಷೇತ್ರದ ಮತದಾರರಿಗೆ ಮೋಸ ಮಾಡಿರುವ ಪ್ರತಾಪಗೌಡಗೆ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ದೂರಿದರು.

ಪಟ್ಟಣದ ಪೊಲೀಸ್ ಠಾಣೆ ಪಕ್ಕದಲ್ಲಿನ ಮೈದಾನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಆರ್. ಬಸನಗೌಡ ತುರವಿಹಾಳ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿಯಿಂದ ಬಂದ ಪ್ರತಾಪಗೌಡಗೆ ಸ್ವಾಗತ ಮಾಡಿದ್ದೇವೆ. ಆದರೆ ಇವರು ಚೆಂದೂಲಿ ಕುದುರೆ ಎಂಬುದು ಗೊತ್ತಿರಲಿಲ್ಲ. ಪ್ರತಾಪಗೌಡ ಅವರನ್ನು ಕಾಂಗ್ರೆಸ್ ಪಕ್ಷ ಶಾಸಕನಾಗಿ ಮಾಡಿತ್ತು. ‌ಅದೇ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದಾರೆ.‌ ಅವರಿಗೆ ಮಾನ ಮರ್ಯಾದೆ ಇಲ್ಲ. ಮಸ್ಕಿ ಕ್ಷೇತ್ರ ಹಿಂದುಳಿದ ಅಂತ ಹೇಳಿದಾಗ ಕೊಟ್ಯಾಂತರ ಹಣ ಕೊಟ್ಟಿದ್ದೇನೆ. ಮಸ್ಕಿ ಕ್ಷೇತ್ರ ಅಭಿವೃದ್ಧಿ ಆಗಿದ್ದು ಕಾಂಗ್ರೆಸ್ ಪಕ್ಷದಿಂದ ಹೊರತು ಬಿಜೆಪಿ ದಿಂದ ಅಲ್ಲ ಎಂದರು.

ಹಣದ ಹೊಳೆ ಹರಿಸಿ ಶಿರಾದಲ್ಲಿ ಗೆದ್ದಿದ್ದಾರೆ ಹೊರತು ಜನರ ಮನಸ್ಸು ಗೆದ್ದಿಲ್ಲ ಎಂದರು. 2008, 2013ರ ಚುನಾವಣೆಯಲ್ಲಿ ಬಿಜೆಪಿಗೆ ಜನ ಕೃಪೆ ತೋರಿಲ್ಲ.‌ ಕೆಲವು ಶಾಸಕರಿಗೆ ಖರೀದಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದರು. ಕೊರೊನಾ ಹೆಸರಿನಲ್ಲಿ ರಾಜ್ಯದ ಬಿಜೆಪಿ ಸರಕಾರ 2ಸಾವಿರ ಕೋಟಿ ರೂಪಾಯಿ ಹಣ ಲೂಟಿ ಮಾಡಿದೆ. ಕೇಂದ್ರದಲ್ಲಿ ಕೋಮುವಾದಿ ಸರಕಾರ ಬಂದಿದೆ. ದೇಶದಲ್ಲಿ ಮೋದಿ ಅಷ್ಟು ಸುಳ್ಳುಗಾರ ಯಾರಿಲ್ಲ. ಕೊರೊನಾ ಲಸಿಕೆ ಕಂಡು ಹಿಡಿಯುವ ಬದಲಿಗೆ ದ್ವೀಪ ಹಚ್ಚಿ. ಟಮಟೆ ಭಾರಿಸಿ ಎಂದು ಹೇಳುತ್ತಾರೆ ಎಂದು ವ್ಯಂಗ್ಯ ಮಾಡಿದರು.

ಈ ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ವಿಧವೆ ವೇತನ, ವೃದ್ಯಾಪ ವೇತನ ನಮ್ಮ ಸರಕಾರ ಯಾವತ್ತು ನಿಂತಿಲ್ಲ. ಇದೀಗ ಕೊಟ್ಯಾಂತರ ಹಣ ನಿಂತಿದೆ. ಬಡವರು ಹಸಿವುನಿಂದ ಬಳಲು ಬಾರದು ಎಂದು ಅನ್ನಭಾಗ್ಯ ಜಾರಿಗೆ ತಂದಿದ್ದೇವೆ. ಮುಂದಿನ ದಿನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ10ಅಕ್ಕಿ ನೀಡುತ್ತೇವೆ ಎಂದರು. ಬಡ ಜನರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ‌. ಒಂದೇ ವರ್ಷದಲ್ಲಿ ಯಡಿಯೂರಪ್ಪ ಅವರು 90 ಕೋಟಿ ಸಾಲ ಮಾಡುತ್ತಾರೆ. ಇಂತಹ ಸರಕಾರಕ್ಕೆ ಎಚ್ಚರಿಕೆ ಕೊಡಲು ಉಪ ಚುನಾವಣೆಯಲ್ಲಿ ಆರ್.‌ಬಸನಗೌಡ ಅವರಿಗೆ ಗೆಲ್ಲಿಸಬೇಕೆಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮಾತನಾಡಿ, ಹೆತ್ತ ತಾಯಿಗೆ ದ್ರೋಹ ಬಗೆದ ಪ್ರತಾಪಗೌಡ ಅವರ ಸ್ಥಾನಕ್ಕೆ ಆರ್.‌ಬಸನಗೌಡ ಅವರಿಗೆ ಕೊಟ್ಟಿದ್ದಾರೆ. ‌ಜನರ ಸೇವೆ ಮಾಡುವರಿಗೆ ಸದಾವಕಾಶ ಇರುತ್ತದೆ. ಪಕ್ಷದಲ್ಲಿ ಗೆದ್ದು ಮೋಸ ಮಾಡಿದವರು ಪಕ್ಷ ಬಿಟ್ಟಿದೆ ಒಳ್ಳೆಯದ್ದು.ಉಪ ಚುನಾವಣೆಯಲ್ಲಿ ನಾವು ಸೊತಿದ್ದೇವೆ ಎಂದು ಕಾಂಗ್ರೆಸ್ ದೃತಿಗೆಟ್ಟಿಲ್ಲ.ಮಸ್ಕಿ ಕ್ಷೇತ್ರದ ಮತದಾರರ ಬೆಂಬಲ ನೋಡಿದರೆ 20ಸಾವಿರ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದಲ್ಲಿ ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದ್ದು ಸುಳ್ಳಾಗಿದೆ. ದೇಶಕ್ಕೆ ಸಂವಿಧಾನ ಕೊಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲ ಇದೆ. ಈ ಭಾಗದ ರೈತರಿಗೆ ಅನುಕೂಲವಾಗುವ ನಂದವಾಡಗಿ ನೀರಾವರಿ ಯೋಜನೆಯನ್ನು ಕಾಂಗ್ರೆಸ್ ಪಕ್ಷ ಜಾರಿಗೆ ತಂದಿದೆ.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾಯ್ರಾಧ್ಯಕ್ಷ ಈಶ್ವರ ಖಂಡ್ರೆ, ಸತೀಸ ಜಾರಕಿಹೊಳಿ. ಆರ್.‌ಬಸನಗೌಡ ತುರವಿಹಾಳ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ವಿಧಾನ ಪರಿಷತ್ ಸದಸ್ಯ ಎನ್. ಎಸ್ ಬೋಸ ರಾಜ್. ಮಾಜಿ ಸಂಸದ ಬಿ.ವಿ ನಾಯಕ. ಶಾಸಕ ಡಿ.ಎಸ್ ಹುಲಿಗೇರಿ, ಶಾಸಕ ಬಸನಗೌಡ ದದ್ದಲ್, ಬ್ಲಾಕ್ ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ. ಹನುಂಮತಪ್ಪ ಮುದ್ದಾಪೂರ ಸೇರಿದಂತೆ ಕಾಂಗ್ರೆಸ್ ಪಕ್ಷದ ಇನ್ನಿತರ ಮುಖಂಡರು ಇದ್ದರು.