Sunday, 23rd June 2024

ತಂದೆ ತಾಯಿ ಸೇವೆ ಮಾಡಿದರೆ ಪುಣ್ಯಪ್ರಾಪ್ತಿ

ಇಂಡಿ: ಮಾತೃದೇವೋ ಭವ ಪಿತ್ರುದೇವೋ ಭವ ತಂದೆ ,ತಾಯಿ ದೇವರಗಿಂತ ಅತ್ಯೆಂತ ಶ್ರೇಷ್ಠವಾಗಿದ್ದು ದೇವರ ಸ್ಥಾನದಲ್ಲಿ ಪ್ರತಿಯೋಬ್ಬರು ತಂದೆ ತಾಯಿ ಗಳನ್ನು ಗೌರವಿಸಬೇಕು, ತಂದೆ ತಾಯಿ ಸೇವೆ ಮಾಡಿದರೆ ಪುಣ್ಯಪ್ರಾಪ್ತಿತಂದೆ ತಾಯಿ ಸೇವೆ ಮಾಡಿದರೆ ಪುಣ್ಯಪ್ರಾಪ್ತಿ ತಂದೆ ತಾಯಿ ಸೇವೆ ಮಾಡಿದರೆ ಪುಣ್ಯಪ್ರಾಪ್ತಿ ಯಾಗುತ್ತದೆ ಎಂದು ಶಾಸಕ ಯಶವಂತರಾಯ ಗೌಡ ಪಾಟೀಲ ಹೇಳಿದರು.

ಅಹಿರಸಂಗ ಗ್ರಾಮದ ತೋಟದ ಮನೆಯಲ್ಲಿ ನಡೇದ ದಿವಗಂತ ಚನ್ನಬಸಪ್ಪಾಗೌಡ ಬಿರಾದಾರ ಹಾಗೂ ಶಾಂತಾಬಾಯಿ ಬಿರಾದಾರ ಇವರ ಪುಣ್ಯರಾಧನೆ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಭಾರತ ದೇಶ ವಿಶ್ವದಲ್ಲಿಯೇ ವಿಶಿಷ್ಠ ಸಂಸ್ಕೃತಿ ಪರಂಪರೆ ಆಚಾರ,ವಿಚಾರಗಳನ್ನು ಹೊಂದಿದ ಶ್ರೀಮಂತ ದೇಶ. ಇಂತಹ ವಿಶಿಷ್ಠ ಸಂಸ್ಕೃತಿ, ಪರಂಪರೆ ಜಗತ್ತಿನ ಯಾವುದೇ ರಾಷ್ಟçದಲ್ಲಿ ಸಿಗುವುದಿಲ್ಲ.

ಅಹಿರಸಂಗ ಬಿರಾದಾರ ಕುಟುಂಬ ಒಳ್ಳೇಯ ಬಡವರ ದೀನದುರ್ಬಲರ ನೊಂದವರ ಪರವಾಗಿ ಸೇವಾ ಮನೋಭಾವದಿಂದ ಹೃದಯಸ್ಪರ್ಷಿ ಕುಟುಂಬವಾಗಿದ್ದು ಇಂಡಿ ದಾದಾಗೌಡ ಪಾಟೀಲ ಹಾಗೂ ಅಹಿರಂಗ ಬಿರಾದಾರ ಕುಟುಂಬ ನಿಕಟ ಸಂಭ0ದವಿದೆ ಈ ಕುಟುಂಬ ಅಧ್ಯಾತ್ಮಿಕ ಧಾರ್ಮಿಕ ಕ್ಷೇತ್ರದಲ್ಲಿ ಗುರುಪರಂಪರೆ ಯುಳ್ಳ ಕುಟುಂಬವಾಗಿದ್ದು ಇಂದು ತಂದೆ ತಾಯಿ ಪುಣ್ಯ ಸ್ಮರಣೆ ಮಾಡುವ ಮೂಲಕ ಅನೇಕ ಮಠಾಧೀಶರನ್ನು ಕರೆಸಿ ಅವರಿಂದ ಆರ್ಶೀವಚನ ಮಾಡುತ್ತಿರುವುದು ಗುರುಪಂರಪರೆ ಸಾಕ್ಷೀ ಪ್ರತೀಕ, ಯಾರು ದೇವರಲ್ಲಿ ಭಯ ಭಕ್ತಿ ಇರುತ್ತದೆ ಅವರು ಸಮಾಜದಲ್ಲಿ ಒಳ್ಳೇಯ ಕೆಲಸ ಮಾಡುತ್ತಾರೆ. ಗುತ್ತಿಗೆದಾರ ಪ್ರಭುಗೌಡ ಬಿರಾದಾರ ಮುಗ್ದ ಸ್ವಭಾವದ ಸರಳ ,ಸಜ್ಜನ ವ್ಯಕ್ತಿ ಬಡವರ ದೀನದುರ್ಬಲರಿಗೆ ನೊಂದವರ ಕಣ್ಣಿರು ಒರೇಸುತ್ತಾರೆ ತಂದೆ ತಾಯಿಗಳ ಸಂಸ್ಕಾರಗಳೇ ಮುಂದಿನ ಪಿಳಿಗೆಗೆ ಬರುತ್ತದೆ ಸುಸಂಸ್ಕೃತ ಮನೆತನಕ್ಕೆ ತಂದೆ ತಾಯಿಗಳ ಸಂಸ್ಕಾರವೆ ಕಾರಣ ಎಂದರು.

ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಪೂರ್ಣಾನಂದ ಮಠ ಅನಪಾಲ ಕೈಲಾಸಪತಿ ಮಹಾಸ್ವಾಮಿ, ತಡವಲಗಾ ಶ್ರೀಮಠದ ರಾಚೋ ಟೇಶ್ವರ ಮಹಾಸ್ವಾಮಿಗಳು, ಪುರ್ಣಾನಂದ ಮಠ ಸೀತಿಮನಿ ಶಂಕರಾನAದ ಮಹಾಸ್ವಾಮಿಗಳು, ನೈತೃತ್ವ ಅಹಿರಸಂಗ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಗೋಳಸಾರದ ಅಭಿನವಪುಂಡಲಿAಗ ಶಿವಾಚಾರ್ಯರು, ಶ್ರೀರೇವಣಸಿದ್ದ ಶಾಸ್ತಿçಗಳು ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.

ಶಾಂತೇಶ್ವರ ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರಭಾಕರ ಬಗಲಿ, ಬಿ.ಎಸ್ ಬಿರಾದಾರ, ನೀಲಕಂಠಗೌಡ ಪಾಟೀಲ, ನ್ಯಾಯವಾದಿ ಭೂದಿಹಾಳ , ಪ್ರಥಮ ದರ್ಜೆ ಗುತ್ತಿಗೆದಾರ ಚಂದ್ರಶೇಖರ ರೂಗಿ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಜಾವೀದ ಮೋಮಿನ, ಶರಣಗೌಡ ಬಿರಾದಾರ, ಮಲ್ಲನಗೌಡ ಬಿರಾದಾರ, ಬಸವನಗೌಡ ಬಿರಾದಾರ, ಅಣ್ಣಾರಾಯಗೌಡ ಬಿರಾದಾರ, ಬಸಪ್ಪಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಚಂದುಗೌಡ ಬಿರಾದಾರಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *

error: Content is protected !!