Thursday, 5th December 2024

Pushpa 2 Movie: ರಾಜ್ಯದಲ್ಲಿ ʼಪುಷ್ಪ 2ʼ ಚಿತ್ರಕ್ಕೆ ಬಿಗ್‌ ಶಾಕ್; ಮಿಡ್‌ನೈಟ್‌ ಶೋಗಳಿಗೆ ಬ್ರೇಕ್‌

Pushpa 2 Movie

ಬೆಂಗಳೂರು: ಟಾಲಿವುಡ್‌ನ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ನಟನೆಯ ಬಹು ನಿರೀಕ್ಷಿತ ‘ಪುಷ್ಪ 2’ (Pushpa 2 Movie) ಚಿತ್ರ ವಿಶ್ವದಾದ್ಯಂತ ಡಿ.5ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ರಿಲೀಸ್‌ಗೂ ಮುನ್ನ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿರುವ ಸಿನಿಮಾಗೆ ರಾಜ್ಯದಲ್ಲಿ ದೊಡ್ಡ ಶಾಕ್‌ ಎದುರಾಗಿದೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದಿಂದ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಿಡ್‌ ನೈಟ್‌ ಶೋಗಳನ್ನು ರದ್ದು ಮಾಡಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು, ಬೆಳಗ್ಗೆ 6.30ಕ್ಕಿಂತ ಮುಂಚಿತವಾಗಿ ಪುಷ್ಪ-2 ಸಿನಿಮಾ ಪ್ರದರ್ಶನ ಮಾಡದಂತೆ ಸೂಚನೆ ನೀಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ವಿವಿಧೆಡೆ ಚಿತ್ರಮಂದಿರಗಳಲ್ಲಿ ಬೆಳ್ಳಂಬೆಳಗ್ಗೆ 3 ಗಂಟೆಯಿಂದಲೇ ಪುಷ್ಪ-2 ಸಿನಿಮಾ ಪ್ರದರ್ಶನಕ್ಕೆ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಮಾಡಿಕೊಳ್ಳಲು ಚಿತ್ರಮಂದಿರಗಳು ಅವಕಾಶ ನೀಡಿದ್ದವು. ಆದರೆ, ಈ ಬಗ್ಗೆ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಆಕ್ಷೇಪ ವ್ಯಕ್ತಪಡಿಸಿ, ನಿಗದಿತ ಅವಧಿಗೂ ಮುನ್ನ ಕಾನೂನು ಬಾಹಿರವಾಗಿ ಚಿತ್ರ ಪ್ರದರ್ಶನ ಮಾಡಲು ಮುಂದಾಗಿರುವ ಚಿತ್ರ ಮಂದಿರಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌ ಕಮಿಷನರ್‌ಗೆ ದೂರು ನೀಡಿತ್ತು.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ದೂರಿನ ಹಿನ್ನೆಲೆಯಲ್ಲಿ ಸಮಯ ಪಾಲನೆ ಮಾಡದೇ ಅನಧಿಕೃತವಾಗಿ ಚಲನಚಿತ್ರ ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮಕೈಗೊಳ್ಳು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರಿನಲ್ಲಿ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ನಿಗದಿತ ಸಮಯವಲ್ಲದೆ, ಇತರೆ ಸಮಯದಲ್ಲೂ ಚಿತ್ರಪ್ರದರ್ಶನ ಮಾಡುವ ಬಗ್ಗೆ ಬುಕ್ ಮೈ ಶೋನಲ್ಲಿ ಕಂಡುಬಂದಿದೆ. ಕರ್ನಾಟಕ ಸಿನಿಮಾ ರೆಗ್ಯೂಲೇಷನ್ ಕಾಯ್ದೆಯಡಿ ಚಿತ್ರಪ್ರದರ್ಶನವನ್ನು ಬೆಳಗ್ಗೆ 6-30 ರ ನಂತರ ಪ್ರಾರಂಭಿಸಬೇಕಾಗಿದೆ. ಆದರೆ ಕೆಲವೊಂದು ಚಿತ್ರಮಂದಿರಗಳಲ್ಲಿ ಡಿ.5ರಂದು ಪುಷ್ಪ-2 ಚಿತ್ರವನ್ನು ಅನಧಿಕೃತವಾಗಿ ಚಿತ್ರವನ್ನು ಬೆಳಗ್ಗೆ 3ಗಂಟೆಯಿಂದ ಪ್ರದರ್ಶಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಸುದ್ದಿಯನ್ನೂ ಓದಿ | Pushpa 2: ಮುಂಬೈ ಮೆಟ್ರೋಗೂ ಎಂಟ್ರಿ ಕೊಟ್ಟ ‘ಪುಷ್ಪಾ’- ವಿಡಿಯೊ ಇದೆ

ಬುಕ್ ಮೈ ಶೋ ಆನ್‌ಲೈನ್ ಜಾಲತಾಣದ ಮೂಲಕ ಬೆಳಗಿನ 6-30ಕ್ಕಿಂತ ಮೊದಲು ಚಿತ್ರಪ್ರದರ್ಶನದ ಶೋಗಳಿಗೆ ಟಿಕೆಟ್ ಮಾರಾಟ ಮಾಡುತ್ತಿರುವುದು ನಿಯಮಬಾಹಿರವಾಗಿದೆ. ಆದ್ದರಿಂದ, ಇಂತಹ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಿ, ನಿಯಮಾಬಾಹಿರವಾಗಿ ಟಿಕೆಟ್ ಮಾರಾಟ ಹಾಗೂ ಚಿತ್ರ ಪ್ರದರ್ಶನ ಮಾಡದಂತೆ ಕ್ರಮ ಕಗೊಳ್ಳಲು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪುಷ್ಪ-2 ರಿಲೀಸ್‌ನಿಂದ ಪಿವಿಆರ್‌ ಐನಾಕ್ಸ್‌ ಷೇರು ಹೈ ಜಂಪ್?‌

ಮುಂಬೈ: ಬಹು ನಿರೀಕ್ಷಿತ ಪುಷ್ಪ- 2(Pushpa 2) ಸಿನಿಮಾ ಡಿಸೆಂಬರ್‌ 5ರಂದು ತೆರೆ ಕಾಣುತ್ತಿದ್ದು, ಬಳಿಕ ಪಿವಿಆರ್‌ ಐನಾಕ್ಸ್‌ ಷೇರು ಹೈ ಜಂಪ್‌ ಆಗಲಿದೆ ಎಂಬ ನಿರೀಕ್ಷೆ ಉಂಟಾಗಿದೆ. ನಟ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಸಿನಿಮಾದ ಅಡ್ವಾನ್ಸ್‌ ಬುಕಿಂಗ್‌ ಕೇವಲ 48 ಗಂಟೆಗಳಲ್ಲೇ 100 ಕೋಟಿ ರೂ. ದಾಟಿದೆ.

ಗ್ಲೋಬಲ್‌ ಬ್ರೋಕರೇಜ್‌ ಸಂಸ್ಥೆ ಯುಬಿಎಸ್‌, ಪಿವಿಆರ್‌ ಐನಾಕ್ಸ್‌ ಷೇರಿನ ದರದ ಟಾರ್ಗೆಟ್‌ ಅನ್ನು 2,000 ರೂ.ಗೆ ಏರಿಸಿದೆ. ಈಗ ದರ 1,500 ರೂ. ಆಸುಪಾಸಿನಲ್ಲಿದೆ. ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಪುಷ್ಪಾ 2 ಸಿನಿಮಾ ಹಿಂದಿಯಲ್ಲಿ 600 ಕೋಟಿ ರೂ. ಹಾಗೂ ದಕ್ಷಿಣದ ಇತರ ಭಾಷೆಗಳಲ್ಲಿ 400 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಇದೆ.

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಪುಷ್ಪ 2 ಸಿನೆಮಾ ನಾಳೆ ಅಂದ್ರೆ ಡಿಸೆಂಬರ್‌ 5ಕ್ಕೆರಿಲೀಸ್‌ ಆಗ್ತಿದೆ. ಜನರು ಕೂಡ ನೋಡೋದಕ್ಕೆ ಕಾಯ್ತಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವವರು ಕೂಡ ಕನ್ನಡಿಗರೇ.. ನಾಯಕಿಯಾಗಿ ರಶ್ಮಿಕಾ ಮಂದಣ್ಣ, ಸ್ಪೆಷಲ್‌ ಸಾಂಗ್‌ನಲ್ಲಿ ಶ್ರೀಲೀಲ, ಖಳನಾಯಕನ ಪಾತ್ರದಲ್ಲಿ ನಟ ಧನಂಜಯ್‌ ಅಭಿನಯಿಸಿದ್ದಾರೆ.

ಬೆಂಗಳೂರಿನಲ್ಲೇ ಟಿಕೆಟ್‌ ಬಲು ದುಬಾರಿ

ಇನ್ನು ಬೆಂಗಳೂರಿನಲ್ಲಿ ಟಿಕೆಟ್ ದರ ಹೆಚ್ಚಿದೆ. ಮಲ್ಟಿಪ್ಲೆಕ್ಸ್​ಗಳಲ್ಲಿ 1000 ದಿಂದ 1200 ರೂಪಾಯಿಗಳಿದೆ. ಕಡಿಮೆ ದರ್ಜೆಯ ಟಿಕೆಟ್ ಬೆಲೆಯೂ ಸಹ 800 ರಿಂದ 9000 ರೂಪಾಯಿ ಇದೆ. ಇನ್ನು ಎಸಿ, ಡಿಜಿಟಲ್ ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್ ಬೆಲೆ 600 ರಿಂದ 800 ರೂಪಾಯಿ ಇದೆ. ಬಹುತೇಕ ಚಿತ್ರಮಂದಿರಗಳಲ್ಲಿ ಬಾಲ್ಕನಿ ಟಿಕೆಟ್ ಬೆಲೆ 600 ಹಾಗೂ ಕಡಿಮೆ ದರ್ಜೆಯ ಟಿಕೆಟ್ ಬೆಲೆ 500 ಅಥವಾ 450 ಇಡಲಾಗಿದೆ. ಇನ್ನು ಎಲ್ಲೋ ಕೆಲವೇ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ 300 ರೂಪಾಯಿಗೆ ಪುಷ್ಪ 2 ಟಿಕೆಟ್ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ‘ಪುಷ್ಪ 2’ ಸಿನಿಮಾದ ಅಂದಾಜು ಸರಾಸರಿ ಟಿಕೆಟ್ ಬೆಲೆ 800 ರಿಂದ 900 ಎನ್ನಬಹುದು.ಅಲ್ಲಿಗೆ ಇಡೀ ದೇಶದಲ್ಲಿ ‘ಪುಷ್ಪ 2’ ಸಿನಿಮಾದ ಟಿಕೆಟ್​ಗಳು ಅತಿ ಹೆಚ್ಚು ಬೆಲೆಗೆ ಮಾರಾಟವಾಗುತ್ತಿರುವುದು ಬೆಂಗಳೂರಿನಲ್ಲಿಯೇ. ಮುಂಬೈಗಿಂತಲೂ ದುಬಾರಿ ಬೆಲೆಗೆ ಬೆಂಗಳೂರಿನಲ್ಲಿ ಟಿಕೆಟ್​ಗಳು ಮಾರಾಟವಾಗುತ್ತಿವೆ.

ಈ ಸುದ್ದಿಯನ್ನೂ ಓದಿ: Pushpa 2 : ʼಪುಷ್ಪ 2ʼ ಗೆ ಸೆನ್ಸಾರ್‌ ಬೋರ್ಡ್‌ನಿಂದ ಆಕ್ಷೇಪಣೆ – ಹಿಂಸಾತ್ಮಕ ದೃಶ್ಯಗಳಿಗೆ ಕತ್ತರಿ!