Saturday, 9th December 2023

ರಸಪ್ರಶ್ನೆ ಹಾಗೂ ನಾತ್ ಪಟಣ ಕಾರ್ಯಕ್ರಮ

ಇಂಡಿ: ಪಟ್ಟಣದ ಮಾಡಲ್ ಪಬ್ಲಿಕ್ ಶಾಲೆಯಲ್ಲೆ ಮ್ಮಹಮ್ಮದಿಯಾ ನಾತ್ ಕಮಿಟಿ ವತಿಯಿಂದ ತಾಲೂಕಾ ಮಟ್ಟದಲ್ಲಿ ಪ್ರವಾದಿ ಅವರ ಕುರಿತು ರಸಪ್ರಶ್ನೆ ಹಾಗೂ ನಾತ್ ಪಟಣ ಕಾರ್ಯಾಕ್ರಮ ನಡೆಸಲಾಯಿತು.

ಈ ಕಾರ್ಯಕ್ರಮ ಮುಖ್ಯತಿಥಿಯಾಗಿ ಆಗಮಿಸಿ ಮಾತನಾಡಿದ ಸೀರಾಜ ಜಂಖಾನಿ , ಮೂಪ್ತಿ ಅಬ್ದುಲ ರಾಹೆಮಾನ ಅರಬ, ಮೌಲಾನಾ ಜಿಯಾವುಲಹಕ್ ಉಮರಿ, ಇಲಿಯಾಸ ಬೋರಾಮಣಿ, ಪ್ರವಾದಿ ಮುಹಮ್ಮದ್‌ರ ಬಗ್ಗೆ ಅಪಪ್ರಚಾರವನ್ನು ಮಾಡು ತ್ತಿದ್ದಾರೆ. ಅವರು ಬದುಕಿದ್ದಾಗಲೂ ಅಪಪ್ರಚಾರ ಮಾಡಿದ್ದರು. ಆದರೆ, ಅವೆಲ್ಲವನ್ನೂ ಅವರು ಮಾನವೀಯ ಮೌಲ್ಯಗಳ ಗುಣಗಳ ಮೂಲಕ ಎದುರಿಸಿದರು. ಮನುಷ್ಯ ಕುಲವೊಂದೇ ಎಂಬುದನ್ನು ಪ್ರವಾದಿಗಳು ಸಾರಿದರು.

ಭಾರತದಂತಹ ದೇಶ ಮುನ್ನಡೆಸಲು ಎಲ್ಲರೂ ಜೊತೆಗೂಡಿದರೆ ಮಾತ್ರ ಸಾಧ್ಯ. ಭಾರತೀ ಯರು ಇದನ್ನು ಅರ್ಥೈಸಬೇಕು ಪ್ರವಾದಿಗಳ ಸಂದೇಶಗಳು ಜನರ ಮನಮುಟ್ಟ ಬೇಕಾಗಿದೆ. ಗುಡಿ-ಮಸೀದಿಗಳಿಗೆ ಸೀಮಿತಗೊಳಿಸಬೇಡಿ ಎಂದು ಹೇಳಿದರು. ಪ್ರವಾದಿ ಸಂದೇಶ ಸಾರ್ವಕಾಲಿಕವಾದುದು. ಮನುಷ್ಯ ಸಮಾನತೆಯ ಅತ್ಯುತ್ಕೃಷ್ಟ ಮಾದರಿಯನ್ನು ಸಮಾಜಕ್ಕೆ ತೋರಿಸಿ ಕೊಟ್ಟರು.

ಭಾರತೀಯ ಸಮಾಜಕ್ಕೆ ಅವರ ಸಂದೇಶ ಪ್ರಸ್ತುತ ಎಂದರು. ನಾವು ಪರರ ಹಿತ ಬಯಸುವವರಾಗಬೇಕು. ಪ್ರವಾದಿಗಳು ಮಾನ ವೀಯ ಬದುಕು ಸವೆಸಿದರು. ಅವರು ದಾರಿ ದೀಪಗಳು. ದೇವನ ಸಂದೇಶ ಆಲಿಸಿ ಪಾಲಿಸಬೇಕು” ಎಂದು ಹೇಳಿದರು.

ನಮಹಮ್ಮದಿಯಾ ನಾತ್ ಕಮೀಟಿ ಜಿಲ್ಲಾ ಅಧ್ಯಕ್ಷ ಸೈಯದ್ ಮುಸತಫಾ ಕಾದರಿ, ಜಹಾಂಗಿರ ಹಿಪ್ಪರಗಿ, ಅಬ್ದುಲ ನಬಿ ಜಾಮಾ ದಾರ, ಅಬ್ದುಲ ರಜಾಕ ಕೋಲಾರ, ಮಹಿಯೊದ್ದಿನ ಬೊದಿಹಾಳ, ಅಬುಬಕರ ಅಂಬಾರಖಾನೆ, ಪುರಸಭೆ ಸದಸ್ಯ ಅಯುಬ ಬಾಗವಾನ, ಅಬ್ದುಲಮಾಜಿದ ಸೌದಾಗರ, ಅತೀಕ ಶೇಖ್, ಬಶೀರ ಇನಾಮದಾರ, ರಫೀಕ ಜಂಬಗಿ, ಇಸಾಕ ಮುಲ್ಲಾ, ಹಸನ ಮುಜಾವರ, ಅಶಿಫ್ ಜಮಾದಾರ, ರಫೀಕ ಮುಲ್ಲಾ, ನಾಸೀರ ಇನಾಮದಾರ, ಮುಜೀಬ ಅಫಜಲಪೂರ, ಮುನ್ನಾ ಇಂಡಿಕರ, ಅಬ್ದುಲಾ ಪಾಟೇಲ ಸೆರಿದಂತೆ ಇದತರರು ಇದ್ದರು.

ತಾಲೂಕಾ ಮಟ್ಟದಲ್ಲಿ ರಸಪ್ರಶ್ನೆಯಲ್ಲಿ ಮಾಡಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾರು ಉಮ್ಮೆಕುಲಸುಮ ಇಸ್ಮಾಯಿಲ ಬಾಗವಾನ, ತಂಜಿಲಾ ಶೇಖಲಾಲ ಕಲಬುರಗಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಹಾಗೂ ನಾತ್ ಪಟಣ ದಲ್ಲಿ ಶಮ್ಸ ಪಬ್ಲಕ್ ಶಾಲೆಯ ವಿದ್ಯಾರ್ಥಿನಿ ಅರಶಿಯಾ ಮುಲ್ಲಾ ಪ್ರಥಮ ಸ್ಥಾನ ಹಾಗೂ ಮೊಡಲ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ನಾಜರಿನ ಮಹಿಬೂಬ ಶೇಖ್ ದ್ವಿತಿಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಅಯ್ಕೆಯಾದರು.

Leave a Reply

Your email address will not be published. Required fields are marked *

error: Content is protected !!