ರೆಡಿಯೋ ಮಿರ್ಚಿಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿಯಾಗಿ ರಚನಾ ಕೆಲಸ ಮಾಡಿದ್ದರು. ತಮ್ಮ ಮಾತಿನ ಮೂಲಕವೇ ಜನರ ಮನಸ್ಸು ಗೆದ್ದಿದ್ದ ರಚನಾ. ಕಳೆದ 7 ವರ್ಷಗಳಿಂದ ರೆಡಿಯೋ ಜಾಕಿ ಕೆಲಸ ಬಿಟ್ಟು ಮನೆಯಲ್ಲೇ ಒಬ್ಬರು ಇದ್ದು, ಡಿಪ್ರೆಷನ್, ಸ್ಟ್ರೆಸ್ನಿಂದ ಹಾರ್ಟ್ ಅಟ್ಯಾಕ್ ಆಗಿದೆ ಎಂಬ ಮಾಹಿತಿ ಸಿಕ್ಕಿದೆ.
ಇನ್ನೂ ಕಳೆದ ಕೆಲ ವರ್ಷಗಳಿಂದ ಎಲ್ಲರಿಂದ ರಚನಾ ದೂರ ಇದ್ದರು ಎಂದು ಹೇಳಲಾಗುತ್ತಿದೆ. ಸ್ನೇಹಿತರ ಕರೆಗೂ ಸರಿಯಾದ ಸ್ಪಂಧಿಸುತ್ತಿರಲಿಲ್ವಂತೆ.
ರೆಡಿಯೋ ಮಿರ್ಚಿಯಲ್ಲಿ ಕೆಲಸ ಮಾಡುವಾಗ ಆರ್.ಜೆ ರಚನಾ ಕಾರ್ಯಕ್ರಮ ಬಂದರೆ ಸಾಕು ಎಲ್ಲರ ಕಿವಿ ಆವರ ಮಾತಿ ನತ್ತ ಹೋಗುತ್ತಿತ್ತು. ಸದಾ ಹಸನ್ಮುಖಿಯಾಗಿದ್ದ ರಚನಾಗೆ ಹೃದಯಾಘಾತವಾಗಿರುವುದು ನಿಜಕ್ಕೂ ಆಶ್ವರ್ಯ. ತಮ್ಮ ದೇಹದ ಮೇಲೆ ರಚನಾ ಅವರಿಗೆ ತುಂಬ ಪ್ರೀತಿ. ಸೊಪ್ಪು, ಹಣ್ಣು, ತರಕಾರಿಗಳನ್ನೆ ಹೆಚ್ಚಾಗಿ ಸೇವಿಸುತ್ತಿದ್ದರಂತೆ ಆರ್.ಜೆ ರಚನಾ. ಆದರೂ ಈ ರೀತಿ ಮೃತಪಟ್ಟಿರುವುದು ನಿಜಕ್ಕೂ ಬೇಸರದ ಸಂಗತಿ.
ಸುಮಾರು 7 ವರ್ಷದ ಹಿಂದೆ ರೆಡಿಯೋ ಮಿರ್ಚಿ ಬಿಟ್ಟು ರಚನಾ ಮನೆಯಲ್ಲೇ ಇದ್ದರಂತೆ. ಕೆಲ ತಿಂಗಳುಗಳಿಂದ ಯಾರಿಗೂ ಸಿಗುತ್ತಿರಲಿಲ್ಲ ಎಂದು ಸ್ನೇಹಿತರು ಹೇಳಿದ್ದಾರೆ. ದೇಹ ಎಷ್ಟೇ ಗಟ್ಟಿ ಇದ್ದರೂ, ಮನಸ್ಸಿನ ಪಾತ್ರ ಮಾತ್ರ ತುಂಬಾ ಮುಖ್ಯ ಎಂಬುದಕ್ಕೆ ಇವರೇ ಸಾಕ್ಷಿ. ಯಾವಾಗಲೂ ಫಿಟ್ ಮತ್ತು ಡಯೆಟ್ ಮೇಲೆ ಗಮನ ಹರಿಸುತ್ತಿದ್ದ ರಚನಾ ಅವರು ಕಳೆದ ಕೆಲ ತಿಂಗಳುಗಳಿಂದ ಡಿಪ್ರೆಷನ್ನಲ್ಲಿದ್ದರು ಎಂದು ಹೇಳಲಾಗುತ್ತಿದೆ.