*ಡ್ರಗ್ ಪ್ರಕರಣದಲ್ಲಿ ಕೆಪಿಲ್ ನಂಟು
*ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ವಿಚಾರಣೆ
*ರಾಗಿಣಿ ಆಸ್ತಿ ಬಗ್ಗೆ ಇಡಿ ತನಿಖೆ ಸಾಧ್ಯತೆ
ಬೆಂಗಳೂರು: ಸಾಂತ್ವನ ಕೇಂದ್ರದಲ್ಲಿ ರಾಗಿಣಿ ವಿಚಾರಣೆ ನಡೆಯುತ್ತಿದ್ದು, ಆಕೆಗಾಗಿ ಪೋಷಕರು ತಂದ ಬಟ್ಟೆಗಳನ್ನು ಸಿಸಿಬಿ ಸಿಬ್ಬಂದಿ ಸ್ವೀಕರಿಸಿದರು.
ಕಸ್ಟಡಿಯಲ್ಲಿದ್ದಾಗ ಯಾರ ಭೇಟಿಗೂ ಅವಕಾಶವಿಲ್ಲ ಎಂದು ಇನ್‌ಸ್‌ಪೆಕ್ಟರ್ ತಿಳಿಸಿದ್ದರೂ, ಪೋಷಕರನ್ನು ನೋಡಬೇಕು. ಒಂದು ಅವಕಾಶ ಕೊಡಿ, ತಂದೆ ತಾಯಿಯನ್ನು ನೋಡಬೇಕು ಎಂದು ರಾಗಿಣಿ ಅಳಲು ತೋಡಿಕೊಂಡರು. ತನಿಖಾಧಿಕಾರಿ ಅಂಜುಮಾಲ ತಂಡದಿಂದ ರಾಗಿಣಿ ವಿಚಾರಣೆ ನಡೆಯುತ್ತಿದ್ದು, ಡ್ರಗ್ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಇದೇ ವೇಳೆ, ಡ್ರಗ್ ಪ್ರಕರಣದಲ್ಲಿ ಕೆಪಿಲ್ ನಂಟು ಇರುವ ಸಂಗತಿ ಬೆಳಕಿಗೆ ಬಂದಿದೆ. ಕೆಪಿಎಲ್ ತಂಡ ಮಾಲೀಕರ ಪಾರ್ಟಿಯಲ್ಲಿ ಸ್ನೇಹಿತರ ಜತೆ ಪಾರ್ಟಿ ಮಾಡಿದ್ದ ರಾಗಿಣಿ ಭಾಗಿಯಾಗಿದ್ದಾರೆ. ಈ ನಿಟ್ಟಿನಲ್ಲಿ, ಪಾರ್ಟಿಗಳ ಬಗ್ಗೆೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ನಟಿ ರಾಗಿಣಿ ದ್ವಿವೇದಿಯವರೊಂದಿಗೆ ಸಂಪರ್ಕ ಹೊದಿರುವ ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ಇಬ್ಬರ ವಿಚಾರಣೆಯೂ ನಡೆಯುತ್ತಿದೆ. ಹಾಗೂ ರಾಗಿಣಿ ಆಸ್ತಿ ಬಗ್ಗೆ ಇಡಿ ತನಿಖೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.