Sunday, 15th December 2024

Rapper Chandan Shetty: ನಿವೇದಿತಾ ಗೌಡ ರೀಲ್ಸ್‌ ಹುಚ್ಚಿಗೆ ಡಿವೋರ್ಸ್‌ ಕೊಟ್ರಾ ಚಂದನ್‌ ಶೆಟ್ಟಿ? ಅಭಿಮಾನಿಗಳ ಕಾಮೆಂಟ್ಸ್‌ ಫುಲ್‌ ವೈರಲ್!

ಬೆಂಗಳೂರು: ಬಿಗ್‌ಬಾಸ್‌(Bigg Boss) ಖ್ಯಾತಿಯ ನಟಿ ನಿವೇದಿತಾ ಗೌಡ (Niveditha Gowda) ಮತ್ತು ರ‍್ಯಾಪರ್ ಚಂದನ್ ಶೆಟ್ಟಿ(Rapper Chandan Shetty) ಅವರ ದಾಂಪತ್ಯ ಜೀವನ ಸಂಪೂರ್ಣವಾಗಿ ಮುರಿದು ಬಿದ್ದಿದೆ. ಇಬ್ಬರು ಡಿವೋರ್ಸ್ ಪಡೆದು ಆರು ತಿಂಗಳುಗಳಾಗಿವೆ. ಆದರೆ ಡಿವೋರ್ಸ್‌(Divorce)ಗೆ ಇಬ್ಬರೂ ಸೂಕ್ತ ಕಾರಣ ನೀಡಿಲ್ಲ. ಇದೀಗ ಅವರ ಅಭಿಮಾನಿಗಳು ತಮ್ಮದೇ ಆದ ಕಾರಣಗಳನ್ನು ಹುಡುಕಿದ್ದಾರೆ. ಗಲಾಟೆ-ಗದ್ದಲಗಳಿಗೆ ಆಸ್ಪದ ಕೊಡದೆ ಡಿವೋರ್ಸ್‌ ಪಡೆದಿದ್ದ ಇಬ್ಬರ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ದವು. ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌(Viral) ಕೂಡ ಆಗಿದ್ದರು. ಆದರೂ ಈ ಜೋಡಿ ಡಿವೋರ್ಸ್ ಕಾರಣವನ್ನು ಮಾತ್ರ ಎಲ್ಲಿಯೂ ಬಾಯಿ ಬಿಟ್ಟಿಲ್ಲ.

ಇದೇ ಕಾರಣಕ್ಕೆ ನೆಟ್ಟಿಗರು ಮತ್ತು ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ವಿವರಣೆ ನೀಡುತ್ತಿದ್ದಾರೆ. ಅದರಲ್ಲಿಯೂ ಡಿವೋರ್ಸ್‌ ಪಡೆದ ನಂತರ ನಿವೇದಿತಾ ಗೌಡ ಅವರು ಇತ್ತೀಚೆಗೆ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿನಿ, ಮಿಡಿ ಎಲ್ಲ ಬಿಟ್ಟು ಬ್ಯಾಕ್‌ಲೆಸ್ ಮಟ್ಟಿಗೂ ಬಂದು ನಿಂತಿದ್ದಾರೆ. ಸದಾ ಬಳುಕುವ ನಿವೇದಿತಾ, ಎದೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರಾ? ಎಂದು ಅವರ ಪೋಸ್ಟ್‌ಗಳಿಗೆ ಹುಚ್ಚು ಅಭಿಮಾನಿಗಳು ಆಗಾಗ್ಗೆ ಕಾಮೆಂಟ್‌ ಮಾಡುತ್ತಾರೆ. ಕೆಲ ದಿನಗಳಿಂದ ಅರೆ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿಯೂ ಅಭಿಮಾನಿಗಳು ಕಾಮೆಂಟ್ಸ್‌ ಹಾಕುತ್ತಿದ್ದಾರೆ.

ಇದೇ ಕಾರಣಕ್ಕೆ ಚಂದನ್ ಶೆಟ್ಟಿ ಡಿವೋರ್ಸ್ ಪಡೆದುಕೊಂಡದ್ದು, ರೀಲ್ಸ್ ಹುಚ್ಚಿನಿಂದ ಡಿವೋರ್ಸ್ ಪಡೆದ ಮೊದಲ ಮಹಿಳೆ… ಹೀಗೆ ಏನೇನೋ ಕಾಮೆಂಟ್ಸ್ ಮಾಡಿ ನಿವೇದಿತಾ ಅವರ ಕಾಲೆಳೆಯುತ್ತಿದ್ದಾರೆ. ಡಿವೋರ್ಸ್ ಬಳಿಕ ನಟಿಯನ್ನು ಸುಮ್ಮನೆ ಇರಲು ಬಿಡುತ್ತಲೇ ಇಲ್ಲ, ಸದಾ ಟ್ರೋಲ್ ಮಾಡುತ್ತಲೇ ನೆಟ್ಟಿಗರು ಕಾಲ ಕಳೆಯುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ನಿವೇದಿತಾ ತಲೆ ಕೆಡಿಸಿಕೊಂಡಿಲ್ಲ. ಆದರೆ ಇದೀಗ ಚಂದನ್ ಶೆಟ್ಟಿ ಅವರು ನಿವೇದಿತಾ ಜೊತೆಗೆ ಮದುವೆಯಾದ ಮೇಲೆ ಅನುಭವಿಸಿದ ನೋವಿನ ಬಗ್ಗೆ ನಗುತ್ತಲೇ ಹೇಳಿಕೊಂಡಿರುವ ವಿಡಿಯೊವೊಂದು ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ಇದು ಮಜಾ ಟಾಕೀಸ್ ವಿಡಿಯೊ. ಈ ವಿಡಿಯೊವನ್ನು ಕಲರ್ಸ್ ಕನ್ನಡ ವಾಹಿನಿ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.

ಗಂಡ ಬಿಟ್ಟಿದ್ದು ಇದಕ್ಕೆ ತಾನೆ! ಫ್ಯಾನ್ಸ್ ಡಿಸಿಷನ್‌ ಇಸ್‌ ಫೈನಲ್?

ಈಗ ಆ ಎಪಿಸೋಡ್ ಮತ್ತೊಮ್ಮೆ ಶೇರ್ ಆಗಿರುವುದಕ್ಕೆ ಸೂಕ್ತ ಕಾರಣವಿಲ್ಲದಿದ್ದರೂ, ಇದರಲ್ಲಿ ನಿವೇದಿತಾ ಹೇಗೆ ವರ್ತಿಸುತ್ತಿದ್ದರು ಎಂಬ ಬಗ್ಗೆ ಚಂದನ್ ಶೆಟ್ಟಿ ಆಡಿರುವ ಮಾತುಗಳನ್ನು ಕೇಳಿದವರು, ಡಿವೋರ್ಸ್ ಕಾರಣ ತಿಳಿಯಿತು ಬಿಡಿ ಎನ್ನುತ್ತಿದ್ದಾರೆ. ವಿಡಿಯೊದಲ್ಲಿ ಚಂದನ್ ಶೆಟ್ಟಿ ದಾಂಪತ್ಯದ ಸಾರಮಸ್ಯದ ಬಗ್ಗೆ ವಿವರಣೆ ನೀಡಿದ್ದಾರೆ. ದಾಂಪತ್ಯದ ಬಗ್ಗೆ ಮಾತನಾಡುವ ಆಸಾಮಿಯ ಜೀವನ ಮಾತ್ರ ಯಾಕೆ ಹೀಗಾಯ್ತು? ಎನ್ನುವುದಕ್ಕೂ ಇದೇ ವಿಡಿಯೊದಲ್ಲಿ ಅಭಿಮಾನಿಗಳು ಉತ್ತರ ಕಂಡುಕೊಂಡಿದ್ದಾರೆ.

ಹೌದು. ವಿಡಿಯೊದಲ್ಲಿ ಚಂದನ್ ಶೆಟ್ಟಿ ಅವರು, ನಿವೇದಿತಾ ಮನೆಯ ಯಾವೊಂದೂ ಕೆಲಸವನ್ನು ಮಾಡುವುದಿಲ್ಲ ಮಹಾನ್‌ ಸೋಮಾರಿ ಎಂದು ತಿಳಿಸಿದ್ದಾರೆ. ಈಕೆ ಎದ್ದೇಳೋದು ಹನ್ನೆರಡು, ಒಂದು ಗಂಟೆ ಆಗುತ್ತೆ. ನನಗೆ ಏಳು ಗಂಟೆಗೆ ಎಚ್ಚರವಾಗುತ್ತದೆ. ಹೊಟ್ಟೆ ಹಸಿವು ಆಗ್ತಾ ಇರುತ್ತೆ. ಇವಳಿಗೆ ಏಳು ಎಂದರೆ ಏಳೋದೇ ಇಲ್ಲ, ಬೈಯೋಕೆ ಶುರು ಮಾಡ್ತಾಳೆ. ಆಯ್ತು ಅಂತ ನಾನೇ ಹೊಂದಿಕೊಂಡು ಬ್ರೇಕ್‌ಫಾಸ್ಟ್ ಮಾಡಲು ಶುರು ಮಾಡಿದೆ. ಬೆಳಗ್ಗೆ ಮಾಡಿದ್ರೆ ಮಧ್ಯಾಹ್ನಕ್ಕೂ ಅದೇ ಆಗುವಂತೆ ಜಾಸ್ತಿನೇ ಮಾಡುತ್ತಿದೆ. ಆದರೆ ತಿಂಗಳಾದರೂ ಇದೇ ಕಂಟಿನ್ಯೂ ಆಯ್ತು ಫುಲ್ ಟೆನ್ಶನ್ ಆಗೋಯ್ತು. ಏಳುತ್ತಲೇ ಇರಲಿಲ್ಲ. ನಾನೇ ಎಲ್ಲವನ್ನೂ ಮಾಡಬೇಕಿತ್ತು. ಮನೆಯ ಕಸ ಗುಡಿಸಬೇಕು, ನೆಲ ಒರೆಸಬೇಕು, ಪಾತ್ರೆ ತೊಳೆಯಬೇಕು ಎಲ್ಲವನ್ನೂ ನಾನೇ ಮಾಡಬೇಕಿತ್ತು. ಇವಳು ನೋಡಿದ್ರೆ ಮಲಗೇ ಇರುತ್ತಿದ್ದಳು ಎಂದು ಚಂದನ್ ಶೆಟ್ಟಿ‌ ನಾಟಕೀಯವಾದ ಧ್ವನಿಯಲ್ಲಿ ಹೇಳಿದ್ದಾರೆ.

ಕೊನೆಗೆ ಒಂದು ಐಡಿಯಾ ಮಾಡಿ, ಯಾರು ಒಂದು ಕೆಲಸ ಮಾಡ್ತಾರೆ ಅವರು ಇನ್ನೊಬ್ಬರಿಗೆ ಇನ್ನೂರು ರೂಪಾಯಿ ಕೊಡಬೇಕು ಎಂದು ಷರತ್ತು ವಿಧಿಸಿದೆ. ಒಂದು ಕೆಲಸಕ್ಕೆ ಇನ್ನೂರು ರೂಪಾಯಿ ಮಾಡುತ್ತಿದ್ದಂತೆಯೇ ಅವಳು ಬೆಳಗ್ಗೆ ಏಳಲು ಶುರು ಮಾಡಿದಳು ಎಂದು ಹೇಳಿದ್ದಾರೆ. ಆದರೆ ಅವರು ಕೊಟ್ಟ ಲಿಸ್ಟ್ ನೋಡಿದ ಸೃಜನ್ ಲೋಕೇಶ್ ಅವರು, ಆ ಲಿಸ್ಟ್‌ನಲ್ಲಿ ನಿವೇದಿತಾ ಅವರೇ ಹೆಚ್ಚು ದುಡ್ಡು ಕೊಡಬೇಕಾಗಿರುವುದನ್ನು ನೋಡಿದ್ದಾರೆ. ಅಲ್ಲಿಗೆ ಚಂದನ್‌ ಶೆಟ್ಟಿಯವರೇ ಎಲ್ಲಾ ಕೆಲಸ ಮಾಡುತ್ತಿದ್ದರು ಎನ್ನುವುದು ತಿಳಿದಿದೆ. ಇದರಿಂದಲೇ ದಂಪತಿ ನಡುವೆ ಜಗಳ ಆಗಿರಬಹುದು. ಪತ್ನಿಯ ಇಂಥ ವರ್ತನೆಗಳನ್ನು ಯಾವ ಗಂಡಸೂ ಸಹಿಸುವುದಿಲ್ಲ. ಇಷ್ಟು ದಿನ ಅವಳ ಜೊತೆಗೆ ಬಾಳಿದ್ದೇ ಹೆಚ್ಚು ಎಂದೆಲ್ಲಾ ಸೋಶಿಯಲ್‌ ಮೀಡಿಯಾದಲ್ಲಿ ಹಲವರು ಕಾಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Zakir Hussain: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಇನ್ನಿಲ್ಲ