ಚಿಂಚೋಳಿ: ರಟಕಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ, ಅಂದಾಜು 50 ಕೆಜಿಯ 152 ಬ್ಯಾಗ್, 76 ಕ್ವೀಂಟಲನ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿ, ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಅಕ್ಕಿಯ ಒಟ್ಟು ಅಂದಾಜು ಮೊತ್ತ 1,74,800 ರೂ.ಗಳ ವಸ್ತು ಹಾಗೂ 1,20,000 ಮೊತ್ತದ ಒಂದು ಇಚೆರ್ ವಾಹನವನ್ನು ಜಪ್ತಿ ಮಾಡಿ ರಟಕಲ್ ಪೊಲೀಸ್ ಠಾಣೆ ವಶಕ್ಕೆ ಪಡೆಯಲಾಗಿದೆ.
ಜಪ್ತಿ ಮಾಡಿದ ಪಡಿತರ ಅಕ್ಕಿ ಕೆ.ಫ್.ಸಿ.ಎಸ್.ಸಿ ಗೋದಾಮಿನಲ್ಲಿ ದಾಸ್ತಾನುಕರಿಸಲಾಗಿದೆ ಎಂದು ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅವರು ತಿಳಿಸಿದ್ದಾರೆ. ಜಪ್ತಿವೇಳೆ ಆಹಾರ ಇಲಾಖೆಯ ಅಧಿಕಾರಿಗಳು ಇದ್ದರು.