Thursday, 12th December 2024

ವ್ಯಾಕ್ಸಿನ್ ಪೂರೈಕೆಯಲ್ಲಿ ಸರ್ಕಾರ ವಿಫಲ, ಲಸಿಕಾ ಕೇಂದ್ರಗಳಲ್ಲಿ ವ್ಯಾಕ್ಸಿನ್‌ ಕೊರತೆ- ರವಿ ಬೋಸರಾಜು

ರಾಯಚೂರು: ರಾಯಚೂರು ನಗರಕ್ಕೆ ವ್ಯಾಕ್ಸಿನ್ ಪೂರೈಕೆಯಲ್ಲಿ ಸರ್ಕಾರ ಸಂಪೂರ್ಣ ವಿಫಲದಿಂದಾಗಿ ಲಸಿಕಾ ಕೇಂದ್ರದಲ್ಲಿ ಲಸಿಕೆ ಇಲ್ಲದೆ ಜನರು ವಾಪಸ್ ಮರಳುವಂತಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಆರೋಪಿಸಿದರು.

ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವ್ಯಾಕ್ಸಿನ್ ಡೋಸ್ ಗಳು ಪೂರೈಕೆಯಾಗುತ್ತಿಲ್ಲ. ಸರ್ಕಾರ ವ್ಯಾಕ್ಸಿನ್ ಪೂರೈಸದೆ ಕರೋನಾ ಮೂರನೆ ಅಲೆ ತಡೆಗಟ್ಟ ವಲ್ಲಿ ಸಂಪೂರ್ಣ ವಿಫಲವಾಗಿ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಕೊರತೆಯಿಂದ ಜನರು ವಾಪಸ್ ಮರಳುತ್ತಿದ್ದಾರೆ ಎಂದರು.

ಕರೋನ ತಡೆಗಟ್ಟಲು ಲಸಿಕೆಯಿಲ್ಲದೆ ಕೇವಲ ನೆಪ ಮಾತ್ರಕ್ಕೆ ಒಂದು ದಿನ ಮಾತ್ರ ಜೂನ್ 21 ರಂದು “ಉಚಿತ ಲಸಿಕಾ ಅಭಿಯಾನ” ಕ್ಕೆ ಚಾಲನೆ ನೀಡಿ ಜನರನ್ನು ಮರಳು ಮಾಡುತ್ತಿದ್ದಾರೆ. ನಗರದಲ್ಲಿ ಲಸಿಕಾ ಕೇಂದ್ರದಿಂದ ಪ್ರತಿದಿನ ಲಸಿಕೆಯಿಲ್ಲದೆ ವಾಪಸ್ಸಾಗುತ್ತಿದ್ದಾರೆ. ಕರೋನಾ ಭಯದಿಂದ ಜನರು ಆತಂಕಕ್ಕೊಳಗಾಗುತ್ತಿದ್ದಾರೆ ಎಂದರು.

ಕರೋನ ಮೂರನೆ ಅಲೆ ತಡೆಗಟ್ಟಲು ಮುಂಜಾಗ್ರತೆಯಾಗಿ ಲಸಿಕೆಯು ಬಹಾಳ ಪ್ರಮೂಖವಾಗಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಯಾಗುತ್ತಿಲ್ಲ ಎಂದು ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಆರೋಪಿಸಿದ್ದಾರೆ.