Wednesday, 30th October 2024

Reliance Jio: ಡೇಟಾ ಬಳಕೆಯಲ್ಲಿ ರಿಲಯನ್ಸ್ ಜಿಯೊ ವಿಶ್ವದ ನಂಬರ್ ಒನ್! ಚೀನಾಗೆ ಹಿನ್ನಡೆ

Reliance Jio

ನವದೆಹಲಿ: ಡೇಟಾ ದಟ್ಟಣೆ ವಿಷಯದಲ್ಲಿ ರಿಲಯನ್ಸ್ ಜಿಯೋ (Reliance Jio) ವಿಶ್ವದ ಅತಿದೊಡ್ಡ ನೆಟ್‌ವರ್ಕ್ ಆಗಿದೆ. 2024 ರಲ್ಲಿ ಜನವರಿಯಿಂದ ಸೆಪ್ಟೆಂಬರ್ ತನಕದ ಮೊದಲ ಮೂರು ತ್ರೈಮಾಸಿಕಗಳ ಡೇಟಾ ಬಳಕೆಯಲ್ಲಿ ರಿಲಯನ್ಸ್ ಜಿಯೋ ಚೀನಾದ ಕಂಪನಿಯಾದ ಚೀನಾ ಮೊಬೈಲ್‌ಗಿಂತ ಮುಂದಿದೆ. ಜಾಗತಿಕ ಟೆಲಿಕಾಂ ವಲಯದ ಸಂಶೋಧನಾ ಕಂಪನಿಯಾದ ಟಿಫೀಶಿಯಂಟ್ ಪ್ರಕಾರ, ಜಿಯೋ ಮತ್ತು ಚೀನಾ ಮೊಬೈಲ್ ನಂತರ ಚೀನಾದ ಮತ್ತೊಂದು ಕಂಪನಿ ಚೀನಾ ಟೆಲಿಕಾಂ ಡೇಟಾ ದಟ್ಟಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಭಾರತೀಯ ಕಂಪನಿ ಏರ್‌ಟೆಲ್ ನಾಲ್ಕನೇ ಸ್ಥಾನದಲ್ಲಿದೆ. ವೊಡಾ ಐಡಿಯಾ ಆರನೇ ಸ್ಥಾನ ಪಡೆದಿದೆ.

ಈ ಸುದ್ದಿಯನ್ನೂ ಓದಿ | CM Siddaramaiah: ರಾಜಸ್ವ ಸಂಗ್ರಹಣೆಗೆ ತ್ವರಿತ ಕ್ರಮ ತೆಗೆದುಕೊಳ್ಳಿ: ಸಿದ್ದರಾಮಯ್ಯ ಸೂಚನೆ

ಚೈನೀಸ್ ಕಂಪನಿ ಚೀನಾ ಮೊಬೈಲ್ ತನ್ನ ಹವಾ ಕಳೆದುಕೊಂಡಂತೆ ಕಾಣುತ್ತಿದೆ ಎಂದು ಟಿಫೀಶಿಯಂಟ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಚೀನಾ ಮೊಬೈಲ್ ಕೇವಲ ಶೇ 2ರ ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ, ಆದರೆ ಜಿಯೋ ಮತ್ತು ಚೀನಾ ಟೆಲಿಕಾಂ ಸುಮಾರು ಶೇ.24 ಮತ್ತು ಏರ್‌ಟೆಲ್ ಶೇ. 23 ರಷ್ಟು ಬೆಳವಣಿಗೆಯನ್ನು ಕಂಡಿದೆ. 5ಜಿ ನೆಟ್‌ವರ್ಕ್‌ಗಳ ಪ್ರಬಲವಾದ ಉಪಸ್ಥಿತಿಯಿಂದಾಗಿ ಭಾರತೀಯ ಕಂಪನಿಗಳಲ್ಲಿ ಡೇಟಾ ದಟ್ಟಣೆಯ ಹೆಚ್ಚಳಕ್ಕೆ ಕಾರಣವಾಗಿದೆ. ಅದೇ ವೇಳೆ 5ಜಿ ಚೀನಾದ ಡೇಟಾ ದಟ್ಟಣೆಯ ಮೇಲೆ ಭಾರತದಷ್ಟು ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎಂದು ಟಿಫೀಶಿಯಂಟ್ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Free Training: ಕೋಳಿ ಸಾಕಾಣಿಕೆ, ಫೋಟೋಗ್ರಫಿ ಉಚಿತ ತರಬೇತಿ; ಅರ್ಜಿ ಆಹ್ವಾನ

5ಜಿ ಹಾಗೂ ಹೋಮ್ ಬ್ರಾಡ್‌ಬ್ಯಾಂಡ್‌ಗೆ ಪ್ರಬಲವಾದ ಬೇಡಿಕೆಯು ಜಿಯೋ ವಿಶ್ವದ ಡೇಟಾ ಟ್ರಾಫಿಕ್‌ನಲ್ಲಿ ನಂಬರ್ ಒನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ಮೂರು ವರ್ಷಗಳಲ್ಲಿ ಜಿಯೋ ನೆಟ್‌ವರ್ಕ್‌ನಲ್ಲಿ ಡೇಟಾ ದಟ್ಟಣೆ ಬಹುತೇಕ ದ್ವಿಗುಣಗೊಂಡಿದೆ. ಸುಮಾರು 14 ಕೋಟಿ 80 ಲಕ್ಷ ಗ್ರಾಹಕರು ಜಿಯೋ 5ಜಿ ನೆಟ್‌ವರ್ಕ್‌ಗೆ ಸೇರಿದ್ದಾರೆ. ಜಿಯೋ ಪ್ರಕಾರ, 2024-25 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅದರ ಒಟ್ಟು ಡೇಟಾ ದಟ್ಟಣೆ 45 ಎಕ್ಸಾಬೈಟ್‌ಗಳನ್ನು ದಾಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.