Friday, 22nd November 2024

Renukasway Murder Case : ಅನುಕುಮಾರ್‌, ರಾಘವೇಂದ್ರ, ವಿನಯ್‌ ಜಾಮೀನು ಅರ್ಜಿ ವಜಾ

Renukasway Murder case

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿನ ನಟ ದರ್ಶನ್‌ಗೆ ಸಹಕಾರ ನೀಡಿದ್ದ ಐವರು ಆರೋಪಿಗಳ ಜಾಮೀನು ಅರ್ಜಿಗಳನ್ನು ಬೆಂಗಳೂರಿನ ಸತ್ರ ನ್ಯಾಯಾಲಯ ವಜಾಗೊಳಿಸಿದೆ. ಜಾಮೀನು ಕೋರಿ 3ನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್‌ ಪವನ್‌, 4ನೇ ಆರೋಪಿ ಎನ್‌ ರಾಘವೇಂದ್ರ, 7ನೇ ಆರೋಪಿ ಅನುಕುಮಾರ್‌, 10ನೇ ಆರೋಪಿ ವಿನಯ್‌ ಮತ್ತು 14ನೇ ಆರೋಪಿ ಪ್ರದೋಷ್‌ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜೈಶಂಕರ್‌ ತಿರಸ್ಕರಿಸಿದ್ದಾರೆ.

ಮೆರಿಟ್‌ ಆಧಾರದಲ್ಲಿ ಅನುಕುಮಾರ್‌, ಎನ್‌ ರಾಘವೇಂದ್ರ ಮತ್ತು ವಿನಯ್‌ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ರಾಘವೇಂದ್ರ ಹಾಗೂ ಪವನ್‌ ತಮ್ಮ ಅರ್ಜಿಗಳನ್ನು ಹಿಂಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಅರ್ಜಿಗಳನ್ನು ವಜಾಗೊಳಿಸಿ ನ್ಯಾಯಾಲಯ ಆದೇಶಿಸಿದೆ. ಆದೇಶದ ವಿಸ್ತ್ರತ ಪ್ರತಿ ಲಭ್ಯವಾಗಬೇಕಾಗಿದೆ.

ಇದನ್ನೂ ಓದಿ: Actor Darshan : ದರ್ಶನ್‌ಗಾಗಿ ಬಳ್ಳಾರಿ ಜೈಲಿಗೆ ಆರ್ಥೋ ಹಾಸಿಗೆ, ದಿಂಬು ಸರಬರಾಜು

ಇದೇ ಪ್ರಕರಣದಲ್ಲಿ ಪವಿತ್ರಾ ಗೌಡ (ಎ-1), ದರ್ಶನ್‌ (ಎ-2), ದರ್ಶನ್‌ ಕಾರು ಚಾಲಕ ಲಕ್ಷ್ಮಣ್‌ (ಆರೋಪಿ-12) ಹಾಗೂ ಮ್ಯಾನೇಜ್‌ ನಾಗರಾಜ್‌ (ಆರೋಪಿ-11) ಅವರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ಸತ್ರ ನ್ಯಾಯಾಲಯ ಈಚೆಗೆ ಆದೇಶಿಸಿತ್ತು. ಇದೇ ವೇಳೆ ರವಿಶಂಕರ್‌ (ಎ-8) ಮತ್ತು ದೀಪಕ್‌ಗೆ (ಎ-13) ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.