Thursday, 12th December 2024

ಎರಡು ಉಪಚುನಾವಣೆಯ ಫಲಿತಾಂಶ…ಸೋಲು-ಗೆಲುವಿನ ವಿಮರ್ಶೆ

ಬೆಂಗಳೂರು: ತುಂಬಾ ಕುತೂಹಲ ಮೂಡಿಸಿದ್ದ ಎರಡು ಉಪಚುನಾವಣೆಯ ಫಲಿತಾಂಶ ಬಹುತೇಕ ಫೈನಲ್ ಆಗಿದೆ. ರಾಜರಾಜೇಶ್ವರ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಸತತ ಮೂರನೇ ಬಾರಿ ಗೆಲುವು ಸಾಧಿಸುವ ಮೂಲಕ ಜಯಭೇರಿ ಬಾರಿಸಿದರೆ, ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಕಮಲ ಅರಳಿದೆ. ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಅವರು ಜಿದ್ದಾಜಿದ್ದಿನ ಹೋರಾಟ ನೀಡದರೂ, ಅಂತಿಮವಾಗಿ, ಅಭ್ಯರ್ಥಿ ರಾಜೇಶ್ ಗೌಡ ಗೆಲುವು ಸಾಧಿಸಿದ್ದಾರೆ. ಇದಕ್ಕೆ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರ ಕಾರ್ಯತಂತ್ರವೂ ಪ್ರಮುಖ ಪಾತ್ರ ವಹಿಸಿದೆ.

ಈ ನಿಟ್ಟಿನಲ್ಲಿ, ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ ಗೆಲುವು, ಕಾಂಗ್ರೆಸ್ ಸೋಲು ಹಾಗೂ ಜೆಡಿಎಸ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದು, ಈ ಕುರಿತ ವಿಮರ್ಶೆ ಇಲ್ಲಿದೆ.

ಬಿಜೆಪಿ ಗೆಲ್ಲಲು ಕಾರಣವೇನು?
• ಯೂತ್ ಐಕಾನ್ ವಿಜಯೇಂದ್ರ ನೇತೃತ್ವ.
• ಯುವಕ ರಾಜೇಶ್‌ಗೌಡರಿಗೆ ಟಿಕೆಟ್ ನೀಡಿದ್ದು.
• ಕಾಂಗ್ರೆಸ್-ದಳದಿAದ ಹೆಚ್ಚು ಮುಖಂಡರು ಬಿಜೆಪಿಗೆ ಬಂದಿದ್ದು.
• ಯುವಕರು ಹೆಚ್ಚಾಗಿ ಬಿಜೆಪಿ ಸೇರ್ಪಡೆಗೊಂಡಿದ್ದು.
• ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳ ಆಡಳಿತ.
• ಕಾಡುಗೊಲ್ಲ ಅಭಿವೃದ್ದಿ ನಿಗಮ ರಚನೆ ಮಾಡಿದ್ದು.
• ಮದಲೂರು ಕೆರೆಗೆ ನೀರು ಹರಿಸುವ ವಾಗ್ದಾನ.
• ಕಾಂಗ್ರೆಸ್-ದಳದ ಆಡಳಿತವನ್ನು ನಿರ್ಲಕ್ಷಿಸಿದ ಜನತೆ.

ಕೈ ಸೋಲಿಗೆ ಕಾರಣವೇನು?
• ಕೈ ನಾಯಕರಲ್ಲಿ ಆಂತರಿಕ ಭಿನ್ನಮತ
• ಬಿಜೆಪಿ ಸರಕಾರದ ಪ್ರಭಾವದಿಂದ ಮಂಕಾದ ಕಾಂಗ್ರೆಸ್
• ಮುಖಂಡರು ಕಾಂಗ್ರೆಸ್ ತೊರೆದದ್ದು.
• ಜಯಚಂದ್ರರಿಗೆ ವಯಸ್ಸಾಯಿತು ಎನ್ನುವ ಅಭಿಪ್ರಾಯ
• ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲ
• ಬಹಿರಂಗವಾಗಿ ಒಂದಾದರೂ ಆಂತರಿಕವಾಗಿ ಟಿಬಿಜೆ ಸೋಲಿಗೆ ಕಾಂಗ್ರೆಸ್ ನಾಯಕರು ಹೆಚ್ಚು ಒತ್ತು.
• ಎಲ್ಲಾ ಸಮುದಾಯದವರನ್ನು ಪರಿಗಣಿಸದೇ ಇರುವುದು.

ಜೆಡಿಎಸ್ ಮೂರನೇ ಸ್ಥಾನಕ್ಕೆ ಹೋಗಲು ಕಾರಣವೇನು?
• ಅಮ್ಮಾಜಮ್ಮಗೆ ಅನುಕಂಪ ಫಲ ನೀಡಲಿಲ್ಲ
• ಸತ್ಯನಾರಯಣರ ಅಭಿವೃದ್ದಿ ಕೆಲಸಗಳು ಕೈ ಹಿಡಿಯಲಿಲ್ಲ.
• ಜಿಲ್ಲಾ ಜೆಡಿಎಸ್ ನಾಯಕರು ಒಗ್ಗೂಡಲಿಲ್ಲ.
• ದೇವೇಗೌಡರ ಕುಟುಂಬವೇ ಎಲ್ಲಾ ಉಸ್ತುವಾರಿ ಹಿಸಿಕೊಂಡಿದ್ದು.
• ಕ್ಷೇತ್ರಕ್ಕೆ ತಡವಾಗಿ ಧುಮುಕಿದ್ದು.
• ದೇವೇಗೌಡರ ಕುಟುಂಬದವರ ಆಂತರಿಕ ಭಿನ್ನಮತ.
• ಹೆಚ್ಚಾಗಿ ಜೆಡಿಎಸ್ ತೊರೆದ ನಾಯಕರನ್ನು ಮರು ಕರೆತರುವಲ್ಲಿ ನಿರ್ಲಕ್ಷö್ಯ