ಇಂಡಿ: ಸಹಕಾರ ಚಳುವಳಿಗಳು ಪ್ರಥಮವಾಗಿ ಗದಗ ಜಿಲ್ಲೆಯಲ್ಲಿ ಪ್ರಾರಂಭವಾಗಿ ನಂತರದ ದಿನಗಳಲ್ಲಿ ಬೆಳಗಾವಿ, ವಿಜಯ ಪೂರ ಇತರೆ ಜಿಲ್ಲೆಗಳಲ್ಲಿ ಕ್ರಾಂತಿಕಾರಕ ಬೆಳವಣಿಗೆ ಕಂಡಿವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಅಥರ್ಗಾ ಗ್ರಾಮೀಣಸೌಹಾರ್ದತಾ ಸಹಕಾರಿ ನಿ,ಬೆನಕಹಳ್ಳಿಯಲ್ಲಿ ನೂತನ ಶಾಖೆಯ ಪ್ರಾರಂಭೋತ್ಸವ ಉದ್ಘಾಟಿಸಿ ಮಾತನಾಡಿ ಅವರು ೧೯೯೭ರಲ್ಲಿ ಸೌಹಾರ್ದತಾ ಚಳುವಳಿ ನಮ್ಮ ನಾಡಿನಲ್ಲಿ ಪ್ರಾರಂಭವಾಗಿದೆ. ೫೫೩೪ ಸೌಹಾ ರ್ದತಾ ಸಂಸ್ಥೆಗಳು ದೊಡ್ಡಪ್ರಮಾಣದಲ್ಲಿ ನಡೆಯುತ್ತಿವೆ. ಉತ್ತರ ಕರ್ನಾಟಕದ ಬೆಳಗಾವಿಯಲ್ಲಿಯೇ ೧೨ ನೂರರಷ್ಟು ಸೌಹಾರ್ದಾತ ಸಂಘಗಳು ಅಭಿವೃದ್ದಿಯಾಗಿವೆ.
ಯಾವದೇ ಸಂಸ್ಥೆಯಲ್ಲಿ ನಂಬಿಕೆ. ವಿಶ್ವಾಸ ಪ್ರಮಾಣಿಕತೆ ಇದ್ದರೆ ಮಾತ್ರ ಪ್ರಗತಿಗೆ ನಾಂದಿ ಯಾಗುತ್ತವೆ. ಸರಕಾರಗಳು ಮಾಡದೆ ಇರುವ ಕಾರ್ಯ ಸಹಕಾರ ಸಂಸ್ಥೆಗಳು ಮಾಡುತ್ತಿರುವ ಕಾರ್ಯಶ್ಲಾö್ಯಘನೀಯ ಲಾಭಾಂಶಕ್ಕಿAತ ಜನರಿಗೆ ಸರ್ವಿಸ್ ನೀಡು ವುದು ಮುಖ್ಯ ನಿಮಗಾಗಿ ನಾನು ನನಗಾಗಿ ನೀವು ಎಂಬ ತತ್ವದಡಿ ಸಾಗಬೇಕು.
ಈ ವರ್ಷ ಕೂಡಾ ಮಳೆ ಕಡಿಮೆಯಾಗಿದ್ದು ಒಂದು ಕಡೆ ಮಳೆ ಇನ್ನೋಂದು ಕಡೆ ಸಮರ್ಪಕ ಆಗಿಲ್ಲ. ಮತ್ತೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗುತ್ತದೆ ವೇದಿಕೆ ಮೇಲೆ ಸಿಂದಗಿ ಶಾಸಕ ರಮೇಶ ಭೂಸನೂರ ಮತ್ತು ನಾನು ಜಂಟಿಯಾಗಿ ಈ ಭಾಗದ ಜನಪ್ರತಿನಿಧಿಗಳಾಗಿದ್ದು ಈ ಭಾಗದ ರೈತರು ತೊಂದರೆಯಲ್ಲಿದ್ದಾರೆ.ಗುತ್ತಿ ಬಸವಣ್ಣ ಯಾತ ನೀರಿವರಿ ಬಗ್ಗೆ ಸರಕಾರದ ಗಮನ ಸೆಳೆದು ತುರ್ತುಕ್ರಮಕೈಗೋಳ್ಳಲು ಪ್ರಮಾಣಿಕ ಪ್ರಯತ್ನ ಮಾಡೋಣ ಎಂದರು. ಸಿಂದಗಿ ಶಾಸಕ ರಮೇಶ ಭೂಸನೂರ ಮಾತನಾಡಿದರು. ಸಂಸದ ರಮೇಶ ಜಿಗಜಿಣಗಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಕೃತಿಯಲ್ಲಿನ ಅನೇಕ ಜೀವರಾಶಿಗಳು ಬೇಡುವುದಿಲ್ಲ ಕಾಡುವದಿಲ್ಲ.ಪಶು,ಪ್ರಾಣಿ,ಪಕ್ಷಿ ಸಂಕುಲಗಳು ಕೊಡುತ್ತವೆ ಜಾತಿ ನೋಡಿ ಕೊಡುವದಿಲ್ಲ ಆದರೆ ಮನುಷ್ಯ ಮಾತ್ರ ತಗೆದುಕೊಳ್ಳುತ್ತಾನೆ.ಬೇಕು-ಬೇಕು ಎಂಬ ಹಪಹಪಿಯಲ್ಲಿರುತ್ತಾನೆ ಯಾರು ಕೇಳುತ್ತಾರೆ ದುಖ:ದಲ್ಲಿರುತ್ತಾರೆ. ಸಾಕುಸಾಕು ಎಂದವನೆ ಶ್ರೀಮಂತ ಬೇಕು ಬೇಕೆಂದವನೇ ಬಡವರ ಆದ್ದರಿಂದ ಧಾನ ,ಧರ್ಮ ಬಡವರಿಗೆ ನೀಡಿ ಪುಣ್ಯಕಟ್ಟಿಕೋಳ್ಳಿ ಎಂದು ಅಡವಿಲಿಂಗ ಮಹಾರಾಜರು ದಿವ್ಯಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ಗೋಳಸಾರದ ಅಭಿನವ ಪುಂಡಲಿ0ಗ ಶಿವಯೋಗಿಗಳು, ಮುರುಗೇಂದ್ರ ಸ್ವಾಮಿಜಿ , ಸಿದ್ದಯ್ಯಾ ಸ್ವಾಮಿಜೀ ಸಾನಿಧ್ಯವಹಿಸಿದರು.
ಸಹಕಾರ ರತ್ನ ಪುರಸ್ಕೃತ ಶ್ರೀಮಂತ ಇಂಡಿ ಸಹಕಾರ ಚಳುವಳಿ ಕುರಿತು ಮಾತನಾಡಿದರು. ವ್ಹಿ.ಡಿ.ಸಿ.ಸಿ ನಿವೃತ್ತ ವ್ಯವಸ್ಥಾಪಕ ಆರ್.ಎಮ ಬಣಕಾರ ಮಾತನಾಡಿದರು.
ಅಧ್ಯಕ್ಷತೆ ಅಶೋಕ ಗೋಟ್ಯಾಳ, ಗ್ರಾ.ಪಂ ಅಧ್ಯಕ್ಷ ಕಾಶೀನಾಥ ಹಚಡದ್ , ಕುಲಪ್ಪ ಹಿಟ್ನಳ್ಳಿ, ನಾಗುಗೌಡ ಪಾಟೀಲ,ಎಸ್.ಎಂ ಬುರಕುಲೆ,ರಾಜುಗೌಡ ಪಾಟೀಲ, ಚನಬಸಪ್ಪ ಮಸಳಿ, ರಾಜು ಗಂಗನ್ನಳ್ಳಿ, ಭೀರಪ್ಪ ಚಾಕರಿ, ರಾಜು ಹೊಸಮನಿ, ಅಶೋಕಗೌಡ ಪಾಟೀಲ, ಶ್ರೀಮಂತ ಲೋಣಿ ಗುರುರಾಜ ಕಲ್ಲೂರ, ಅರುಣಗೌಡ ಬಿರಾದಾರ,ಶ್ರೀಶೈಲ ಇಂಗಳೇಶ್ವರ , ಗಣಪತಿ ಬಾಣಿಕೋಲ ಸೇರಿದಂತೆ ಸಹಕಾರಿ ಸೌಹಾರ್ದತಾ ಸಹಕಾರಿ ನಿ, ನಿರ್ದೇಶಕರು, ಆಡಳಿತ ಮಂಡಳಿಯ ಸದಸ್ಯರು ಇದ್ದರು.
ಶ್ರೀಶೈಲ ಇಂಗಳೇಶ್ವರ ಸ್ವಾಗತಿಸಿ, ರಮೇಶ ಗೋಟ್ಯಾಳ ನಿರೂಪಿಸಿ ವಂದಿಸಿದರು.