Friday, 22nd November 2024

Richest Man: ಸಂಪತ್ತಿನಲ್ಲಿ ನಾರಾಯಣ ಮೂರ್ತಿ ಅವರನ್ನು ಹಿಂದಿಕ್ಕಿದ ಇನ್ಫೋಸಿಸ್ ಸಹಸಂಸ್ಥಾಪಕ ಗೋಪಾಲಕೃಷ್ಣನ್!

Richest Man

ಇನ್ಫೋಸಿಸ್ ಸಹ-ಸಂಸ್ಥಾಪಕ (Co-founder of Infosys) ಸೇನಾಪತಿ ಗೋಪಾಲಕೃಷ್ಣನ್ (Senapathy Gopalakrishnan) ಅವರು ಸಂಪತ್ತಿನಲ್ಲಿ (Richest Man) ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Infosys founder Narayana Murthy) ಅವರನ್ನು ಮೀರಿಸಿದ್ದಾರೆ. ನಾರಾಯಣ ಮೂರ್ತಿ 36,600 ಕೋಟಿ ರೂ. ನಿವ್ವಳ ಮೌಲ್ಯವನ್ನು ಹೊಂದಿದ್ದು, ಸೇನಾಪತಿ ಗೋಪಾಲಕೃಷ್ಣನ್ 38,500 ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.

ಬೆಂಗಳೂರಿನ ಶ್ರೀಮಂತ ಕುಟುಂಬಗಳ (Rich family in Bangalore) ಪಟ್ಟಿಯಲ್ಲಿ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರು ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2024 ರ ಪ್ರಕಾರ ಅವರು ಬೆಂಗಳೂರಿನ ಐದನೇ ಶ್ರೀಮಂತ ವ್ಯಕ್ತಿ ಮತ್ತು ಭಾರತದ 69ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

Richest Man

ಎಸ್. ಗೋಪಾಲಕೃಷ್ಣನ್ ಯಾರು?

ಸೇನಾಪತಿ “ಕ್ರಿಸ್” ಗೋಪಾಲಕೃಷ್ಣನ್ ಇನ್ಫೋಸಿಸ್ ಸಹ ಸಂಸ್ಥಾಪಕರಲ್ಲಿ ಒಬ್ಬರು. ಅವರು 2007ರಿಂದ 2011ರವರೆಗೆ ಐಟಿ ದೈತ್ಯದ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. 2011 ರಿಂದ 2014 ರವರೆಗೆ ಇನ್ಫೋಸಿಸ್‌ನ ಉಪಾಧ್ಯಕ್ಷರಾಗಿದ್ದರು. 69 ವರ್ಷದ ಗೋಪಾಲಕೃಷ್ಣನ್ ಪ್ರಸ್ತುತ ಆಕ್ಸಿಲರ್ ವೆಂಚರ್ಸ್‌ನ ಅಧ್ಯಕ್ಷರಾಗಿದ್ದಾರೆ. ಇದು ಗುಡ್‌ಹೋಮ್, ಕಾಗಜ್ ಮತ್ತು ಎನ್‌ಕಾಶ್‌ನಂತಹ ಕಂಪನಿಗಳಲ್ಲಿ ಹೂಡಿಕೆ ಮಾಡಿರುವ ಸ್ಟಾರ್ಟಪ್ ಆಗಿದೆ.

ಕ್ರಿಸ್ ಗೋಪಾಲಕೃಷ್ಣನ್ ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್‌ನಿಂದ ಭೌತಶಾಸ್ತ್ರ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. 2011 ರಲ್ಲಿ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಲಾಗಿದೆ. ಸುಧಾ ಗೋಪಾಲಕೃಷ್ಣನ್ ಅವರನ್ನು ವಿವಾಹವಾಗಿದ್ದು, ದಂಪತಿ ಪ್ರತಿಕ್ಷಾ ಟ್ರಸ್ಟ್ ಅನ್ನು ಸ್ಥಾಪಿಸಿದ್ದಾರೆ. ಇದು ಮೆದುಳಿನ ಸಂಶೋಧನೆಯ ಮೇಲೆ ಕೇಂದ್ರೀಕರಿಸುವ ಚಾರಿಟಿ ಸಂಸ್ಥೆಯಾಗಿದೆ.

ಇನ್ಫೋಸಿಸ್ ವೆಬ್‌ಸೈಟ್ ಪ್ರಕಾರ ಗೋಪಾಲಕೃಷ್ಣನ್ ಅವರು ಮದ್ರಾಸ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬೆಂಗಳೂರಿನ ಐಐಐಟಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದಾರೆ ಮತ್ತು ಚೆನ್ನೈ ಗಣಿತ ಸಂಸ್ಥೆಯ ಟ್ರಸ್ಟಿಗಳ ಮಂಡಳಿಯಲ್ಲಿದ್ದಾರೆ.

Skill Training: ರಾಜ್ಯ ಸರಕಾರದಿಂದ ಬ್ರಿಟಿಷ್‌ ಸಹಯೋಗದಲ್ಲಿ 4 ಹೊಸ ಕೌಶಲ್ಯ ತರಬೇತಿ ಕಾರ್ಯಕ್ರಮ

Richest Man

ಇನ್ಫೋಸಿಸ್ ಕಥೆ

ಇನ್ಫೋಸಿಸ್ ಅನ್ನು 1981ರಲ್ಲಿ ಒಂದು ಬೆಡ್‌ರೂಮ್ ಅಪಾರ್ಟ್‌ಮೆಂಟ್‌ ನಲ್ಲಿ ಏಳು ಎಂಜಿನಿಯರ್‌ಗಳು ಸೇರಿ ಸ್ಥಾಪಿಸಿದ್ದರು. ಕಂಪನಿಯು ಅನಂತರ ಪುಣೆಯಿಂದ ಬೆಂಗಳೂರಿಗೆ ಸ್ಥಳಾಂತರಗೊಂಡಿತು. ಏಳು ಇನ್ಫೋಸಿಸ್ ಸಹ ಸಂಸ್ಥಾಪಕರಲ್ಲಿ ನಾರಾಯಣ ಮೂರ್ತಿ, ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಎಸ್‌.ಡಿ. ಶಿಬುಲಾಲ್, ಕೆ. ದಿನೇಶ್ ಮತ್ತು ಎನ್.ಎಸ್. ರಾಘವನ್ ಸೇರಿದ್ದಾರೆ.

ಸುಮಾರು 250 ಡಾಲರ್ ಆರಂಭಿಕ ಬಂಡವಾಳದೊಂದಿಗೆ ಪ್ರಾರಂಭವಾದ ಕನಸಿನ ಕಂಪನಿ ಇಂದು ಸುಮಾರು 80 ಶತಕೋಟಿ ಡಾಲರ್ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ವಿಶ್ವದ ಅತಿದೊಡ್ಡ ಐಟಿ ಸೇವೆಗಳ ಕಂಪನಿಯಾಗಿ ಬೆಳೆದು ನಿಂತಿದೆ.