Friday, 27th September 2024

Ronny Movie: ಕಿರಣ್ ರಾಜ್ ಅಭಿನಯದ “ರಾನಿ” ಚಿತ್ರ 3ನೇ ವಾರವೂ ಯಶಸ್ವಿ ಪ್ರದರ್ಶನ

Ronny Movie

ಬೆಂಗಳೂರು: ಕನ್ನಡ ಸಿನಿಮಾಗಳು (Kannada movies) ಹೆಚ್ಚು ಓಡುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿರುವ ಈ ಸಮಯದಲ್ಲಿ “ರಾನಿ” (Ronny Movie) 3ನೇ ವಾರಕ್ಕೆ ಕಾಲಿಟ್ಟಿದ್ದಾನೆ. ಗಟ್ಟಿ ಕತೆ ಹೊಸತನದ ಚಿತ್ರಕಥೆ ಅದ್ಭುತ ಮೇಕಿಂಗ್‌ನಿಂದ “ರಾನಿ” ಸದ್ದು ಮಾಡಿದ್ದಾನೆ, ಪ್ರೇಕ್ಷಕರ ಮನ ಗೆದ್ದಿದ್ದಾನೆ. ಯಶಸ್ವಿಯಾಗಿ 3ನೇ ವಾರಕ್ಕೆ ಪ್ರವೇಶಿಸಿದ್ದಾನೆ. 25 ದಿನ ಪೂರೈಸುವ ಸೂಚನೆಯನ್ನೂ ನೀಡಿದ್ದಾನೆ.

ಈ ಸುದ್ದಿಯನ್ನೂ ಓದಿ | World Tourism Day 2024: ಇಂದು ವಿಶ್ವ ಪ್ರವಾಸೋದ್ಯಮ ದಿನ; ಮೊಬೈಲ್ ನೆಟ್‌‌ವರ್ಕ್ ಇಲ್ಲದ ಅದ್ಭುತ ಪ್ರವಾಸಿ ಸ್ಥಳಗಳಿವು!

ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಕಿರಣ್ ರಾಜ್ (Kiran Raj) ನಾಯಕನಾಗಿ ನಟಿಸಿರುವ, ಗುರುತೇಜ್ ಶೆಟ್ಟಿ ನಿರ್ದೇಶನದ ಹಾಗೂ ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣದ ʼರಾನಿʼ (Ronny Movie) ಸಿನಿಮಾ ಯಶಸ್ವಿ ಪ್ರದರ್ಶನವಾಗುತ್ತಿದೆ. ಮುಖ್ಯ ಚಿತ್ರ ಕೆ.ಜಿ ರಸ್ತೆಯ ಅನುಪಮ, ಮಲ್ಟಿಪ್ಲೆಕ್ಸ್ ಹಾಗೂ ರಾಜ್ಯಾದ್ಯಂತ ಬಿ.ಸಿ ಸೆಂಟರ್‌ಗಳಲ್ಲಿ 3ನೇ ವಾರವೂ ಅದ್ಭುತ ಪ್ರದರ್ಶನ ಕಾಣುತ್ತಿದೆ.

ಈ ಸುದ್ದಿಯನ್ನೂ ಓದಿ | Star Fashion: ಬೂಟ್‌ ಕಟ್‌ ಪ್ಯಾಂಟ್‌ ಕೋ ಆರ್ಡ್ ಸೆಟ್‌! ನಟಿ ಸಮಂತಾ ಧರಿಸಿದ್ದ ಈ ಡ್ರೆಸ್ ನೀವೂ ಧರಿಸಲು ಇಲ್ಲಿದೆ ಟಿಪ್ಸ್

ಇನ್ನು ಚಿತ್ರ ತಂಡವು ಚಿತ್ರ ಮಂದಿರಗಳಿಗೆ ಭೇಟಿ ನೀಡುತ್ತಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿ ಖುಷಿಯಾಗಿದೆ ಎಂದು “ರಾನಿ” ಚಿತ್ರತಂಡ ತಿಳಿಸಿದೆ.