ಮಾನ್ವಿ: ಪಟ್ಟಣದ ಎಂ.ಬಿ.ಸಿದ್ದರಾಮಯ್ಯ ಸ್ವಾಮಿಯವರ ಮನೆಯಲ್ಲಿ ಸಾಕುನಾಯಿ ರೂಬಿ ೭ವರ್ಷ ತನ್ನ ಹುಟ್ಟು ಹಬ್ಬದ ದಿನವೇ ಮೃತಪಟ್ಟಿದ್ದು ಎಲ್ಲರಿಗೂ ಆಶ್ಚರ್ಯದೊಂದಿಗೆ ದುಃಖವನ್ನು ಮೂಡಿಸಿದೆ.
ಕಳೆದ ೭ವರ್ಷಗಳ ಕೆಳಗೆ ಜರ್ಮನ್ ಶೇರ್ಪಡ್ ತಳಿಯ ಹೆಣ್ಣು ನಾಯಿಯನ್ನು ತಂದು ಸಾಕಿದ್ದು ಮನೆಯ ಸದಸ್ಯರೊಂದಿಗೆ ಆತ್ಮಿಯವಾಗಿ ಬೆರತು ಹೋಗಿತ್ತು ನಾಯಿಯ ಆಕಸ್ಮಿಕ ಸಾವಿನಿಂದ ಕುಟುಂಬದ ಸದಸ್ಯರು ದು:ಖತಪ್ತರಾಗಿದ್ದು ದಿನವಿಡಿ ಕಂಬನಿ ಸುರಿಸಿದ ಕುಟುಂಬದ ಸದಸ್ಯರು ತಮ್ಮ ಮನೆಯ ಸದಸ್ಯನನ್ನು ಕಳೆದು ಕೊಂಡತೆ ಭಾವಿಸಿದ ಇವರು ಮನೆಯ ಆವರಣದಲ್ಲಿಯೇ ನಾಯಿಯ ಅಂತ್ಯ ಸಂಸ್ಕಾರವನ್ನು ವಿರಶೈವ ಪದ್ದತಿಯಂತೆ ಧಾರ್ಮಿಕ ಸಂಸ್ಕಾರ ನೆರವೇರಿಸುವ ಮೂಲಕ ತಮಗೆ ನಾಯಿಯ ಮೇಲಿದ್ದ ಪ್ರೀತಿಯನ್ನು ವ್ಯಕ್ತ ಪಡಿಸಿದರು.
ಎಂ.ಬಿ.ಸಿದ್ದರಾಮಯ್ಯ ಸ್ವಾಮಿ ಮಾತನಾಡಿ, ಮನೆಯಲ್ಲಿ ಕಳೆದ ೭ ವರ್ಷಗಳಿಂದ ರೂಬಿ ಮನೆಯ ಸದಸ್ಯರಂತೆ ಇತ್ತು ಇವತ್ತು ಬೆಳಿಗ್ಗೆ ಕುಟುಂಬದ ಸದಸ್ಯರು ರೂಬಿಯ ಜನ್ಮದಿನವನ್ನು ಆಚರಿಸಿದೆವು ಮದ್ಯಾಹ್ನ ಸಾವು ಸಂಭವಿಸಿದ್ದು ಹುಟ್ಟಿದ ದಿನವೇ ಸಾವು ಸಂಭವಿಸಿದ್ದು ಕಾಕತಾಳೀಯ ವೆನಿಸಿ ದರೂ ನಮಗೆ ಅತೀವ ದುಃಖ ವನ್ನು ತಂದಿದೆ. ರೂಬಿಯ ನೆನಪಿಗಾಗಿ ಮನೆಯ ಆವರಣದಲ್ಲಿಯೇ ಧಾರ್ಮಿಕ ವಿದಿವಿಧನದಂತೆ ಅಂತ್ಯ ಸಂಸ್ಕಾರವನ್ನು ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ನಾಯಿಗಾಗಿ ಸ್ಮಾರಕವನ್ನು ನಿರ್ಮಾಣ ಮಾಡಲಾಗು ವುದು ಎಂದು ತಿಳಿಸಿದರು.
ಪತ್ನಿಪ್ರಭಾವತಿ,ಪುತ್ರರಾದ ವಿರುಪಾಕ್ಷಯ್ಯ ಸ್ವಾಮಿ, ಶಿವಕುಮಾರಸ್ವಾಮಿ, ಸಹೋದರ ಮಲ್ಲಿಕಾರ್ಜುನಸ್ವಾಮಿ ಅಂತ್ಯಸ0ಸ್ಕಾರದಲ್ಲಿ ಪಾಲ್ಗೊಂಡಿದ್ದರು ಅರ್ಚಕರಾದ ಅಂಜಿನೇಯ್ಯಸ್ವಾಮಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಕುಟುಂಬದ ಸದಸ್ಯರು ನಡೆಸಿದರು.