Friday, 22nd November 2024

ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಡಲು ಸನ್ನದ್ಧ ಕೆಂಗುಲಾಬಿ

ವಿಶೇಷ ವರದಿ: ನಾರಾಯಣಸ್ವಾಮಿ

ಹೊಸಕೋಟೆ: ಡಚ್ ಮಾದರಿಯ ಹೂವುಗಳಿಗೆ ಹೊರದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಲೋಕಲ್ ಗುಲಾಬಿಗಳನ್ನು
ಹೆಚ್ಚಾಗಿ ಹೊಸೂರು ಭಾಗದಲ್ಲಿ ಬೆಳೆಯಲಾಗುತ್ತಿದ್ದು, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರದಲ್ಲಿ ಡಚ್ ಮಾದರಿಯ ಗುಲಾಬಿಗಳು ಹೆಚ್ಚಾಗಿವೆ ಎಂದು ಗುಲಾಬಿ ಬೆಳೆಯತ್ತಿರುವ ರೈತರು ಮಾಹಿತಿ ನೀಡುತ್ತಾರೆ.

ಪ್ರೇಮಿಗಳ ದಿನ ಹತ್ತಿರ ಬರುತ್ತಿರುವಂತೆ ಎಲ್ಲೆಡೆ ಕೆಂಪು ಗುಲಾಬಿಯದ್ದೇ ಮಾತು. ತಾಲೂಕಿನ ಕೆಂಪು ಗುಲಾಬಿ ಅಲ್ಲಿನ ಪ್ರೇಮಿಗಳ ತಾಣಗಳ ರಂಗು ಹೆಚ್ಚಿಸುವಲ್ಲಿ ಪ್ರಾಮುಖ್ಯ ಪಡೆದಿವೆ. ಹೊಸವರ್ಷ ಹಾಗೂ ವ್ಯಾಲೆಂಟೈನ್ಸ್ ಡೇ ಗಳಿಗೆ ಭರ್ಜರಿ ಲಾಭದೊಂದಿಗೆ ತಾಲೂಕಿನ ಹೆಸರನ್ನು ಗಡಿಯಾಚೆಗೆ ದಾಟಿ ಸುವ ಸಾಧನೆಯನ್ನು ಇಲ್ಲಿನ ರೈತರು ಮಾಡುತ್ತಿದ್ದಾರೆ.

ತಾಲೂಕಿನ ಲಾಲ್‌ಬಾಗ್ ದಾಸರಹಳ್ಳಿ, ಕುಂಬಳಹಳ್ಳಿ, ಚೊಕ್ಕಹಳ್ಳಿ, ಕುರುಬರಹಳ್ಳಿ ಇನ್ನು ನಾನಾ ಕಡೆ ಭಾಗಗಳಲ್ಲಿ ಬರೋಬ್ಬರಿ 8 ರಿಂದ 10 ವಿಧವಾದ ವಿವಿಧ ಗುಲಾಬಿಗಳನ್ನು ಬೆಳೆಯಲಾಗುತ್ತಿದ್ದು, ಬೆಂಗಳೂರು ಸೇರಿದಂತೆ ದೇಶದ ವಿವಿಧ ಪ್ರಮುಖ ನಗರಿ ಗಳಿಗೆ ರಫ್ತಾಗುವ ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ಎಂದು ಹೇಳುತ್ತಾರೆ ಇಲ್ಲಿನ ಗುಲಾಬಿ ಬೆಳೆಗಾರರು.

ತಾಲೂಕಿನ ರಂಗುರಂಗಿನ ಗುಲಾಬಿಗಳು ರಾಷ್ಟ್ರ ರಾಜಧಾನಿ ದೆಹಲಿ, ತಮಿಳುನಾಡು ರಾಜಧಾನಿ ಚನೈ, ತೆಲಂಗಾಣದ ಹೈದರಾ ಬಾದ್, ಮಹಾರಾಷ್ಟ್ರದ ಮುಂಬೈ ಸೇರಿದಂತೆ ಉದ್ಯಾನನಗರಿ ಬೆಂಗಳೂರಿನಲ್ಲಿ ಅತ್ಯಂತ ಬೇಡಿಕೆ ಪಡೆದುಕೊಂಡಿವೆ. ರಾಜ್ಯ ದಲ್ಲಿ ಹೊಸಕೋಟೆ, ದೊಡ್ಡಬಳ್ಳಾಪುರದಲ್ಲಿ ಬೆಳೆಯಲಾಗುತ್ತಿರುವ ಈ ವಿಶೇಷ ತಳಿಗಳಿಗೆ ಅತ್ಯಂತ ಬೇಡಿಕೆಯಿದ್ದು, ಆನೇಕಲ್‌ನಲ್ಲಿ ಗುಲಾಬಿ ಗಳು ಸ್ಥಳೀಯವಾಗಿ ಮಾರಾಟವಾಗುತ್ತಿದ್ದು, ಹೊಸ ಕೋಟೆ ಹಾಗೂ ದೊಡ್ಡಬಳ್ಳಾಪುರದ ಹೂವುಗಳು ರಾಜ್ಯ ಹಾಗೂ ದೇಶದ ಗಡಿ ದಾಟಿ ಜಪಾನ್,  ಗಪುರ್, ಮಲೇಶಿಯಾಗಳಿಗೂ ರಫ್ತಾಗುತ್ತವೆ ಎಂದು ಇಲ್ಲಿನ ರೈತ ರವಿಚಂದ್ರ ಮಾಹಿತಿ ನೀಡುತ್ತಾರೆ.

ಪ್ರೇಮಿಗಳ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ಗುಲಾಬಿ ರಫ್ತು: 14 ಪ್ರೇಮಿಗಳ ದಿನದಂದು ಯುವ ಸಮುದಾಯ ಅಂದು ಗುಲಾಬಿ ಹೂವುಗಳ ಖರೀದಿಗೆ ಮುಗಿಬೀಳುತ್ತಾರೆ. ಈ ಸಂಬಂಧ ತಾಲೂಕಿನ ತಾಜ್‌ಮಹಲ್ ಕೆಂಗುಲಾಬಿಗೆ ವಿಶೇಷ ಬೇಡಿಕೆ ಹೆಚ್ಚಾಗಿದ್ದು, ಈಗಾಗಲೇ ಹೂವಿನ ಸಂಗ್ರಹಣೆ ಗೆಂದು ವಿಶೇಷ ವ್ಯವಸ್ಥೆಯನ್ನು ಆರಂಬಿಸಲಾಗಿದೆ.

ಹಿತಕರ ವಾತಾವರಣದಲ್ಲಿ 2 ಡಿಗ್ರಿ ಸೆಲ್ಸಿಯಸ್‌ನಲ್ಲಿ ಹೂಗಳನ್ನು ಸಂಗ್ರಹಿಸಿಡಲಾಗುತ್ತಿದ್ದು, ಹಿಂದಿನ ವರ್ಷ ತಾಲೂಕಿನಿಂದ ಬರೋಬ್ಬರಿ 80 ಸಾವಿರದಿಂದ 1 ಲಕ್ಷಕ್ಕೂ ಹೆಚ್ಚು ಹೂಗಳ ರ-ಗಿದ್ದು , ಈ ವರ್ಷವು ಈ ಸಂಖ್ಯೆ ಮೀರಿ ಹೂಗಳು ಸರಬರಾಜಾಗುವ
ನಿರೀಕ್ಷೆಯಿದೆ ಎನ್ನುತ್ತಾರೆ ಗುಲಾಬಿ ಬೆಳೆಗಾರರು.