Sunday, 15th December 2024

ಕೆರೆಗೆ ನೀರು ತುಂಬಿಸುವ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಶಿವಾನಂದ ಪಾಟೀಲ

ಬಸವನಬಾಗೇವಾಡಿ: ಈ ಒಂದು ಕೆರೆ ತುಂಬುವ ಯೋಜನೆಯಿಂದ ಸುಮಾರು ೫೦೦ ಎಕರೆ ಜಮೀನುಗಳಿಗೆ ಅನುಕೂಲ ವಾಗಲಿದೆ ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.

ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಕಾಲುವೆ ಹತ್ತಿರ ಕೃಷ್ಣಾ ಭಾಗ್ಯಜಲ ನಿಗಮದಿಂದ ಅಂದಾಜು ೩೮,೬೪ ಲಕ್ಷ ವೆಚ್ಚದಲ್ಲಿ ಮುತ್ತಗಿ ಗ್ರಾಮದ ಕೆರೆಗೆ ಕಾಲುವೆ ಮೂಲಕ ನೀರು ತುಂಬಿಸುವ ಕಾಮಗಾರಿಯ ಭೂಮಿ ಪೂಜೆ ನೇರವೆರಿಸಿ ನಂತರ ಮಾತನಾಡಿದ ಅವರು ಮುತ್ತಗಿ ಗ್ರಾಮದ ಕೆರೆ ತುಂಬಿಸುವುದರಿ0ದ ಮುತ್ತಗಿ ಗೊಳಸಂಗಿ, ನಾಗವಾಡ, ಸೇರಿದಂತೆ ಬಹುತೇಕ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ.

ಮುತ್ತಗಿ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಇದಾಗಿದೆ, ಜಿಲ್ಲೆಯ ಗುತ್ತಿ ಬಸವಣ್ಣ, ಚಿಮ್ಮಲಗಿ ಏತ ನೀರಾವರಿ ಸೇರಿದಂತೆ ಬಹುತೇಕ ನೀರಾವರಿ ಯೋಜನಗಳಿಗೆ ಹಾಗೂ ಕೂಡಗಿ ವಿದ್ಯತ್ ಉತ್ಪಾದನೆಗೆ, ಪವನ್ ವಿದ್ಯತ್ ಉತ್ಪಾದನೆಗೆ ಈ ಭಾಗದ ರೈತರು ಬಹು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಅದನ್ನು ಯಾರು ಮರೆಯುವಂತಿಲ್ಲಾ, ಅಲ್ಲದೇ ಜಿಲ್ಲೆಗೆ ನೀರು ನೀರುವ ಏಕೈಕ ತಾಲೂಕು ಯಾವುದಾದರು ಇದ್ದರೆ ಅದು ಬಸವನಬಾ ಗೇವಾಡಿ ತಾಲೂಕು ಎಂದು ಹೇಳಿದರು.

ಮುಖಂಡ ರಮೇಶ ಸೂಳಿಬಾವಿ ಮಾತನಾಡಿ ಕ್ಷೇತ್ರದಲ್ಲಿ ಶಾಸಕ ಶಿವಾನಂದ ಪಾಟೀಲ ಅವರು ಸಾಕಷ್ಟು ಅಭಿವೃದ್ದಿ ಕಾರ್ಯ ಗಳನ್ನು ಮಾಡುವ ಮೂಲಕ ನುಡಿದಂತೆ ನಡೆದಿದ್ದಾರೆ, ಕೆರೆ ತುಂಬುಯ ಯೋಜನೆಗೆ ಭೂಮಿ ಪೂಜೆ ನೇರವೆರಿಸಿರುವುದು ಸ್ವಾಗತಾರ್ಹ ವಿಷಯ ಅದರೊಂದಿಗೆ ಕಾಲುವೆ ಪಕ್ಕದಲ್ಲಿ ರೈತರು ತಮ್ಮ ಜಮೀನುಗಳಿಗೆ ಸಂಚರಿಸಲು ಸಮಸ್ಯಯಾಗಿದೆ ಕೆಬಿಜೆಎನ್‌ಲ್ ಅಧಿಕಾರಿಗಳು ಅದನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಗ್ರಾ,ಪಂ ಅಧ್ಯಕ್ಷೆ ತೇಜಶ್ವಿನಿ ಉಣ್ಣಿಬಾವಿ, ಉಪಾಧ್ಯಕ್ಷ ಕಣಕಪ್ಪಾ ಬಂಡಿವಡ್ಡರ, ಮುಖಂಡ ಪ್ರೇಮಕುಮಾರ ಮ್ಯಾಗೇರಿ, ಭೀಮಸಿ ಜಗ್ಗಲ, ಹುಚ್ಚಪ್ಪಾ ಕಮತಗಿ, ಎಸ್,ಜೆ, ಪಾಟೀಲ, ಸೇಇದಂತೆ ಮುಂತಾದವರು ವೇದಿಕೆಯಲ್ಲಿದ್ದರು.