ಶಬರಿಮಲೆ : ಶಬರಿಮಲೆಯ ಶ್ರೀ ಅಯ್ಯಪ್ಪನ (Sabarimala Temple) ದೇವಸ್ಥಾನದಲ್ಲಿ, ಸಾವಿರಾರು ಭಕ್ತರ ಮುಂದೆಯೇ ಕರ್ನಾಟಕದ ಭಕ್ತರೊಬ್ಬರು ಮಾಳಿಗೆಯಿಂದ ಕೆಳಗೆ ಹಾರಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಮೃತರನ್ನು ಕರ್ನಾಟಕದ ಕನಕಪುರದ (Kanakapura news) ನಿವಾಸಿ ಕುಮಾರಸ್ವಾಮಿ (40) ಎಂದು ಗುರುತಿಸಲಾಗಿದೆ.
ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದ ಮೇಲಿನಿಂದ ಇವರು ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಘಟನೆಯ ವಿಡಿಯೋ ಭಕ್ತರೊಬ್ಬರ ಮೊಬೈಲ್‌ನಲ್ಲಿ ದಾಖಲಾಗಿದ್ದು, ಇದೀಗ ವೈರಲ್ ಆಗಿದೆ.
శబరిమలలోని నెయ్యాభిషేకం కౌంటర్ల మండపంపై నుంచి దూకి ఆత్మహత్యయత్నం చేసిన ఓ భక్తుడు.. ఘటనకు సంబంధించిన పూర్తి వివరాలు తెలియాల్సి వుంది.
— Telugu Scribe (@TeluguScribe) December 16, 2024
A devotee in Sabarimala attempted suicide by jumping from the top of the Neyyabhishekam counters.#sabarimala #shabarimala pic.twitter.com/caTrhftZAK
ಶಬರಿಮಲೆಯಲ್ಲಿ ಎಲ್ಲರೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋಗುತ್ತಿರುವಾಗ ಅಯ್ಯಪ್ಪ ಸ್ವಾಮಿಯ ಭಕ್ತ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಜಿಗಿದು ಕೆಳಗೆ ಬಿದ್ದು ಮೂರ್ಛಾವಸ್ಥೆಗೆ ಹೋದ ಅವರನ್ನು ಅಲ್ಲಿದ್ದವರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು.
ಮೇಲಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕುಮಾರಸ್ವಾಮಿ ಅವರನ್ನು ಕೊಟ್ಟಾಯಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿ ಖಿನ್ನತೆಯಿಂದ ಬಳಲುತ್ತಿದ್ದು, ಈ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸಂಪೂರ್ಣ ವಿವರ ಇನ್ನಷ್ಟೇ ತಿಳಿಯಬೇಕಿದೆ.
ವ್ಯಾಪಾರಕ್ಕೆ ಬಂದ ದಂಪತಿಯ ಮಗು ಕಿಡ್ನ್ಯಾಪ್
ದಾವಣಗೆರೆ: ಅಲೆಮಾರಿ ದಂಪತಿಯ 1 ವರ್ಷದ ಗಂಡು ಮಗುವನ್ನು ಅಪಹರಣ ಮಾಡಲಾಗಿದೆ. ಘಟನೆ ನ.16ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹರಪನಹಳ್ಳಿ ಪೊಲೀಸ್ ಠಾಣೆಗೆ ಮಗವಿನ ತಂದೆ ಯುವರಾಜ್ ದೂರು ನೀಡಿದ್ದರು. ದೂರು ನೀಡಿ 1 ತಿಂಗಳಾದರೂ ಪೊಲೀಸರು ಪತ್ತೆಹಚ್ಚಿಲ್ಲ ಎಂದು ಹೆತ್ತವರು ಅಳಲು ತೋಡಿಕೊಂಡಿದ್ದಾರೆ. ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಚಿಕ್ಕಳ್ಳಿ ಮೂಲದ ಯುವರಾಜ್- ಸಾರಿಕಾ ದಂಪತಿ, ಮಗು ಅಪಹರಣವಾಗಿ 1 ತಿಂಗಳಾದರೂ ಸುಳಿವು ಸಿಕ್ಕಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಚಿಕ್ಕಳ್ಳಿ ಮೂಲದ ಕುಟುಂಬ ಗಂಧದ ಎಣ್ಣೆ ವ್ಯಾಪಾರಕ್ಕೆಂದು ಹರಪನಹಳ್ಳಿಗೆ ಬಂದಿದ್ದರು. ಹರಪನಹಳ್ಳಿಯ ಯಮಹಾ ಶೋರೂಮ್ ಬಳಿ ಟೆಂಟ್ ಹಾಕಿದ್ದರು. ಪುತ್ರ ಆರ್ಯನ್ ಜತೆ ಟೆಂಟ್ನಲ್ಲೇ ಯುವರಾಜ್, ಸಾರಿಕಾ ನೆಲೆಸಿದ್ದರು. ನವೆಂಬರ್ 16ರ ರಾತ್ರಿ ಟೆಂಟ್ನಲ್ಲಿ ಮಲಗಿದ್ದಾಗ ಮಗುವಿನ ಅಪಹರಣ ಮಾಡಲಾಗಿದೆ.